1100 ಮೃತದೇಹ ಅಂತ್ಯಸಂಸ್ಕಾರ: ಪ್ರೀತಿಯ ಮಗಳ ಮದ್ವೆಯನ್ನೇ ಮುಂದೂಡಿದ ತಂದೆ

By Suvarna NewsFirst Published May 8, 2021, 9:21 AM IST
Highlights

ಕೊರೋನಾ ಏನನ್ನೆಲ್ಲಾ ಬದಲಾಯಿಸಿತು ಅಲ್ವಾ ? ಮಗಳ ಮದುವೆ ಕನಸಲ್ಲಿದ್ದ ತಂದೆ ಕೊರೋನಾದಿಂದಾಗಿ 1100 ಮೃತದೇಹ ಅಂತ್ಯಸಂಸ್ಕಾರಕ್ಕೆ ನೆರವಾದ್ರು..! ಇದಕ್ಕಾಗಿ ಪ್ರೀತಿಯ ಮಗಳ ಮದುವೆಯನ್ನೇ ಮುಂದೂಡಿದ್ರು

ದೆಹಲಿ(ಮೇ.08): ಕೊರೋನಾದಿಂದಾಗಿ ಬಹಳಷ್ಟು ಜನರ ಕನಸುಗಳು ಭಗ್ನವಾಗಿದೆ, ಬದುಕು ಮುರಿದುಹೋಗಿದೆ. ಆದರೆ ಮಾರಕ ವೈರಸ್ ಜೊತೆ ಹೋರಾಡುವುದಕ್ಕಾಗಿ ಸ್ವಯಂ ಪ್ರೇರಿತರಾಗಿ ಮುನ್ನುಗ್ಗುತ್ತಿರುವ ಬಹಳಷ್ಟು ಜನರು ನಮ್ಮ ಮಧ್ಯೆ ಇದ್ದಾರೆ.

ದೆಹಲಿಯ ನಿಝಾಮುದ್ದೀನ್ ಬರಾಕ್‌ನಲ್ಲಿ ವಾಸಿಸೋ ಮೂರು ಮಕ್ಕಳ ತಂದೆ ಎಎಸ್‌ಐ ರಾಕೇಶ್ 56 ವರ್ಷದವರು. ಲೋಡಿ ರಸ್ತೆ ಶವಾಗಾರದಲ್ಲಿ ಏ.13ರಿಂದಲೂ ಕೆಲಸ ಮಾಡುತ್ತಿದ್ದಾರೆ.

ಟಿಫಿನ್ ಬಾಕ್ಸ್‌ನಲ್ಲಿ ಚಿನ್ನದ ಬಳೆ: ಸೋಂಕಿತರಾಗಿದ್ದಾಗ ಊಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದು ಹೀಗೆ

ಮಗಳ ಮದುವೆ, ಎಲ್ಲಾ ತಯಾರಿಯಾಗ್ಬೇಕು, ಮದುವೆ ಮಾಡ್ಬೇಕು ಅಂತೆಲ್ಲಾ ಕನಸು ಕಂಡಿದ್ದ ತಂದೆ ಕೊರೋನಾ ಕೊರೋನಾದಿಂದಾಗಿ ಸಾಲು ಸಾಲು ಮೃತದೇಹಗಳ ಅಂತ್ಯಸಂಸ್ಕಾರದಲ್ಲಿ ಕೈ ಜೋಡಿಸುವಂತಾಯಿತು.

50ಕ್ಕೂ ಹೆಚ್ಚು ಜನರ ಅಂತ್ಯಸಂಸ್ಕಾರವನ್ನು ಸ್ವತಃ ನಿರ್ವಹಿಸಿದ ಇವರು ಇದಕ್ಕಾಗಿ ಮಗಳ ಮದುವೆಯನ್ನೂ ಮುಂದೂಡಿ ಈ ಕಷ್ಟದ ಸಂದರ್ಭದಲ್ಲಿ ಕರ್ತವ್ಯದಲ್ಲಿ ಮುಂದುವರಿಯುತ್ತಿದ್ದಾರೆ. ಕೊರೋನಾ ಕರ್ತವ್ಯವವನ್ನು ಮಾತ್ರ ಬಿಡೋದಿಲ್ಲ ಎಂದು ನಿತ್ಯ ಶವಾಗಾರದಲ್ಲಿ ಹಾಜರಾಗುತ್ತಿದ್ದಾರೆ.

ವೈದ್ಯರು, ನರ್ಸ್‌ಗಳು ಜೀವ ಉಳಿಸುವಲ್ಲಿ ಕೆಲಸ ಮಾಡುತ್ತಿದ್ದರೆ, ಮೃತದೇಹಗಳಿಗೂ ಗೌರವಯುತವಾಗಿ, ಸಮಯೋಚಿತವಾಗಿ ಅಂತ್ಯಸಂಸ್ಕಾರ ನೀಡೋ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಲೇಬೇಕಲ್ಲ..

click me!