Rajasthan Politics| ಖಾತೆ ಹಂಚಿದರೂ ಮುಗಿಯದ ಬಿಕ್ಕಟ್ಟು, ಪೈಲಟ್‌ರನ್ನು ಹೊರ ಹಾಕುವಂತೆ ಮನವಿ!

By Suvarna NewsFirst Published Nov 22, 2021, 11:17 PM IST
Highlights

* ರಾಜಸ್ಥಾನದಲ್ಲಿ ಗೆಹ್ಲೋಟ್ ವರ್ಸಸ್‌ ಪೈಲಟ್‌

* ಸಚಿವ ಸಂಪುಟ ಪುನಾರಚನೆ ಬೆನ್ನಲ್ಲೇ ಹೊಸ ಕೂಗು

* ಪೈಲಟ್‌ರನ್ನು ರಾಜಸ್ಥಾನದಿಂದ ಹೊರ ಕಳುಹಿಸುವಂತೆ ಕೂಗು

ಜೈಪುರ(ನ.22): ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Rajasthan Chief Minister Ashok Gehlot) ಅವರ ಸಲಹೆಗಾರರಾಗಿ ನೇಮಕಗೊಂಡ ರಾಮಕೇಶ್ ಮೀಣಾ ಅವರು ಸಚಿನ್ ಪೈಲಟ್ (Sachin Pilot) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ರಾಜಸ್ಥಾನದಲ್ಲಿ ಪೈಲಟ್ ವಾಸ್ತವ್ಯದಿಂದ ಕಾಂಗ್ರೆಸ್‌ಗೆ (Congress)  ಹಿನ್ನಡೆಯಾಗಲಿದೆ ಎಂದಿರುವ ಮೀಣಾ, ಸಚಿನ್ ಪೈಲಟ್‌ ಹೊರಗಿನವರು ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಸಚಿನ್ ಪೈಲಟ್ ಅವರ ಬೇಡಿಕೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಕೊಂಡಿದೆ, ಈಗ ಹೈಕಮಾಂಡ್ ಸಚಿನ್ ಪೈಲಟ್ ಅವರನ್ನು ರಾಜಸ್ಥಾನದಿಂದ ಹೊರಗೆ ಕಳುಹಿಸಬೇಕು. ಎಂದು ರಾಮಕೇಶ್ ಮೀಣಾ (Ramkesh Meena) ಹೇಳಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಹೀಗಾಗಿ ಈಗ ಪೈಲಟ್‌ ರಾಜಸ್ಥಾನವನ್ನು ತೊರೆಯಬೇಕೆಂದಿದ್ದಾರೆ.

2018ರ ವಿಧಾನಸಭಾ ಚುನಾವಣೆಯಲ್ಲಿ (Assembly Elections- 2018) ಪೈಲಟ್ ಇದ್ದಾಗಲೇ ಕಾಂಗ್ರೆಸ್ 50 ಸ್ಥಾನಗಳನ್ನು ಕಳೆದುಕೊಂಡಿತ್ತು ಎಂದು ರಾಮಕೇಶ್ ಮೀನಾ ಹೇಳಿದ್ದಾರೆ. ಪೈಲಟ್ ಹೀಗೇ ಮುಂದುವರೆದರೆ 2023ರ ವಿಧಾನಸಭೆ ಚುನಾವಣೆಯಲ್ಲೂ ನಷ್ಟವಾಗಲಿದೆ ಎಂದಿದ್ದಾರೆ. ಸಚಿನ್ ಪೈಲಟ್ ಅವರ ವಿರೋಧದಿಂದಾಗಿ ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸುತ್ತಿದ್ದ ಸ್ವತಂತ್ರ ಶಾಸಕರನ್ನು ಗೆಹ್ಲೋಟ್ ಸಂಪುಟಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಕ್ಷೇತರರ ಅಸಮಾಧಾನ ಹೋಗಲಾಡಿಸಲು ರಾಮ್‌ಕೇಶ್ ಸೇರಿದಂತೆ ಇಬ್ಬರು ಸ್ವತಂತ್ರ ಶಾಸಕರನ್ನು ಸಿಎಂ ಅಶೋಕ್ ಗೆಹ್ಲೋಟ್‌ಗೆ (Ashok Gehlot) ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಒಟ್ಟು 6 ಸಲಹೆಗಾರರನ್ನು ನೇಮಿಸಲಾಗಿದೆ.

ಸ್ವತಂತ್ರ ಶಾಸಕರಿಗೆ ಸ್ಥಾನವಿಲ್ಲ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಸರ್ಕಾರವನ್ನು ಉಳಿಸಿದ 13 ಸ್ವತಂತ್ರ ಶಾಸಕರು (Independent MLA's) ಸರ್ಕಾರದಲ್ಲಿ ಸ್ಥಾನ ಪಡೆದಿಲ್ಲ. ಈ ಶಾಸಕರ ಸಹಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದರು. ಆದರೆ ಇದೀಗ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಕಾರಣ ಅವರಲ್ಲಿ ನಿರಾಸೆ ಮೂಡಿದ್ದು, ಕೆಲ ಶಾಸಕರಲ್ಲಿ ಅಸಮಾಧಾನವೂ ಇದೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಈ ಸ್ವತಂತ್ರ ಶಾಸಕರಿಗೆ ಸ್ಥಾನ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಂಪುಟ ಪಟ್ಟಿಯಲ್ಲಿ ಒಬ್ಬ ಸ್ವತಂತ್ರ ಶಾಸಕನ ಹೆಸರೂ ಇರಲಿಲ್ಲ. ಬಿಎಸ್‌ಪಿ ಶಾಸಕ ರಾಜೇಂದ್ರ ಗೂಢಾ ಅವರನ್ನು ಮಾತ್ರ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ.

ಮಂತ್ರಿಗಿರಿ ಬೆನ್ನಲ್ಲೇ ಖಾತೆಯನ್ನೂ ಹಂಚಿದ ಸಿಎಂ ಗೆಹ್ಲೋಟ್

 

ರಾಜಸ್ಥಾನದಲ್ಲಿ ಗೆಹ್ಲೋಟ್ ಸರ್ಕಾರದ ಸಂಪುಟ ಪುನಾರಚನೆ (Rajasthan Cabinet Reshuffle) ಒಂದು ದಿನದ ಬಳಿಕ, ಸೋಮವಾರದಂದು ಖಾತೆ ಹಂಚಿಕೆಯೂ ನಡೆದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Chief Minister Ashok Gehlot) ಅವರು ಗೃಹ, ಹಣಕಾಸು, ಐಟಿ ಮತ್ತು ಸಂವಹನ ಇಲಾಖೆಗಳನ್ನು (Home, Finance, and IT & Communication) ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ. ಇನ್ನುಳಿದ ಎಲ್ಲ ಇಲಾಖೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಬಿ.ಡಿ.ಕಲ್ಲಾ ಅವರಿಗೆ ಶಿಕ್ಷಣ ಮತ್ತು ಪಾರ್ಸಾದಿ ಲಾಲ್ ಮೀನಾರವರಿಗೆ ಆರೋಗ್ಯ ಇಲಾಖೆಯಂತಹ ಪ್ರಮುಖ ಇಲಾಖೆಗಳ ಜವಾಬ್ದಾರಿಯನ್ನು ನೀಡಲಾಗಿದೆ.

ಯಾರಿಗೆ ಯಾವ ಖಾತೆ?

ಮತ್ತೊಂದೆಡೆ ಶಾಂತಿ ಧರಿವಾಲ್‌ಗೆ ಸಂಸದೀಯ ವ್ಯವಹಾರ ಹಾಗೂ ಸಲೇಹ್‌ ಮೊಹಮ್ಮದ್‌ಗೆ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ನೀಡಲಾಗಿದೆ. ಪ್ರಮೋದ್ ಜೈನ್ ಭಯಾ ಅವರು ಗಣಿ ಮತ್ತು ಪೆಟ್ರೋಲಿಯಂ ಖಾತೆ ಜವಾಬ್ದಾರಿ ಪಡೆದಿದ್ದರೆ, ಲಾಲ್‌ಚಂದ್ ಕಟಾರಿಯಾ ಕೃಷಿ, ಉದಯಲಾಲ್ ಅಂಜನಾ ಕೋಆಪರೇಟಿವ್ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಕ್ಕಟ್ಟೇನು?:

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾಗಿದ್ದಾಗಿನಿಂದಲೂ ಗೆಹ್ಲೋಟ್‌ ಮತ್ತು ಪೈಲಟ್‌ (Gehlot Vs Pilot) ಬಣಗಳ ಮಧ್ಯೆ ಅಧಿಕಾರ ಸಂಘರ್ಷವಿತ್ತು. ಪೈಲಟ್‌ ಬಣದ ಹಲವು ಶಾಸಕರು ಸಚಿವಾಕಾಂಕ್ಷಿಗಳಾಗಿದ್ದರು. ಪೈಲಟ್‌ ದೆಹಲಿಗೆ ಭೇಟಿ ನೀಡಿ ಸೋನಿಯಾ, ರಾಹುಲ್‌, ಪ್ರಿಯಾಂಕಾ ಗಾಂಧಿ ಸೇರಿ ಇನ್ನಿತರ ನಾಯಕರನ್ನು ಭೇಟಿ ನೀಡಿ ತಮ್ಮ ಬೆಂಬಲಿಗರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇಟ್ಟಿದ್ದರು. ಬಳಿಕ ಗೆಹ್ಲೋಟ್‌ ಅವರು ಸೋನಿಯಾ ಸೇರಿ ಇನ್ನಿತರ ನಾಯಕರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದ್ದರು.

click me!