ಬಿಹಾರ ಚುನಾವಣೆಯಲ್ಲಿ ಸೋಲು, ಕಾಂಗ್ರೆಸ್ ನಾಯಕರ ಅಸಮಾಧಾನ ಸ್ಫೋಟ| ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದ ಸಿಬಲ್ ವಿರುದ್ಧ ಗೆಹ್ಲೋಟ್ ಆಕ್ರೋಶ| ಆಂತರಿಕ ವಿಚಾರಗಳ ಚರ್ಚೆ ಮಾಧ್ಯಮಗಳಲ್ಲಿ ಬೇಡ
ನವದೆಹಲಿ(ನ.17): ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನದ ಬಳಿಕ ಪಕ್ಷದೊಳಗಿನ ಅಸಮಾಧಾನ ಮತ್ತೊಮ್ಮೆ ಬಹಿರಂಗಗೊಂಡಿದೆ. ಪಕ್ಷದ ಇಬ್ಬರು ಗಣ್ಯ ನಾಯಕರಾದ ಅಶೋಕ್ ಗೆಹ್ಲೋಟ್ ಹಾಗೂ ಕಪಿಲ್ ಸಿಬಲ್ ಈ ವಿಚಾರವಾಗಿ ಎದುರು ಬದುರಾಗಿದ್ದಾರೆ.
ಭಾರತದ ಅತ್ಯಂತ ದುಬಾರಿ ವಕೀಲ ಈ ಮಾಜಿ ಸಚಿವ, ಪ್ರತಿ ವಿಚಾರಣೆಗೆ 15 ಲಕ್ಷ ಫೀಸ್!
undefined
ಕಪಿಲ್ ಸಿಬ್ಬಲ್ ವಿರುದ್ಧ ಅಸಮಾಧಾನ ಪ್ರಕಟಿಸಿರುವ ಗೆಹ್ಲೋಟ್ ಆಂತರಿಕ ವಿಚಾರಗಳನ್ನು ಮಾಧ್ಯಮಗಳಲ್ಲಿ ಚರ್ಚೆ ಮಾಡುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕಪಿಲ್ ಸಿಬ್ಬಲ್‌ಗೆ ಮಾಧ್ಯಮಗಳೆದುರು ಆಂತರಿಕ ವಿಚಾರ ಚರ್ಚಿಸುವ ಅಗತ್ಯವಿರಲಿಲ್ಲ. ಇದರಿಂದ ದೇಶಾದ್ಯಂತ ಇರುವ ಕಾರ್ಯಕರ್ತರ ಭಾವನೆಗೆ ನೋವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಭಿನ್ನರಿಗೆ ಸೋನಿಯಾ ಪರೋಕ್ಷ ಸಂದೇಶ ರವಾನೆ
ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಗೆಹ್ಲೋಟ್ ಕಾಂಗ್ರೆಸ್ 1969, 1977, 1989 ಹಾಗೂ ಇದಾದ ಬಳಿಕ 1996ರಲ್ಲಿ ವಿಭಿನ್ನ ಸಮಸ್ಯೆಗಳನ್ನು ಎದುರಿಸಿದೆ. ಆದರೆ ಪ್ರತಿ ಬಾರಿ ನಾವು ನಮ್ಮ ವಿಚಾರಧಾರೆ, ಕಾರ್ಯಕ್ರಮ, ನಿಯಮ ಹಾಗೂ ಪಕ್ಷದ ನೇತೃತ್ವದ ಮೇಲೆ ನಂಬಿಕೆ ಇರಿಸಿಕೊಂಡು ಮತ್ತಷ್ಟು ಬಲಶಾಲಿಯಾಗಿ ಹೊರ ಹೊಮ್ಮಿದ್ದೇವೆ ಎಂದಿದ್ದಾರೆ.
There was no need for Mr Kapil Sibal to mentioned our internal issue in Media, this has hurt the sentiments of party workers across the country.
1/
Congress has seen various crises including 1969, 1977, 1989 and later in the 1996 - but every-time we came out stronger due to our ideology, programs, policies and firm belief in party leadership.
2/
We have improved with each and every crisis and also formed UPA government in 2004 under the able leadership of Soniaji, we shall overcome this time too.
3/
ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದ ಸಿಬಲ್ ಕಾಂಗ್ರೆಸ್ ನಾಯಕರು ಪಕ್ಷವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಜನರು ಕಾಂಗ್ರೆಸ್ ಅನ್ನು ಪರಿಣಾಮಕಾರಿ ಪರ್ಯಾಯವಾಗಿ ಪರಿಗಣಿಸುತ್ತಿಲ್ಲ ಎನ್ನುವುದಕ್ಕೆ ಬಿಹಾರ ವಿಧಾನಸಭೆ ಚುನಾವಣೆ ಮತ್ತು ಉಪ ಚುನಾವಣೆಗಳಲ್ಲಿನ ಕಾಂಗ್ರೆಸ್‌ನ ಕಳಪೆ ಪ್ರದರ್ಶನವೇ ಸಾಕ್ಷಿ ಎಂದಿದ್ದರು.