
ಲಕ್ನೋ: ಬಿಜೆಪಿ ನಾಯರೊಬ್ಬರು ತಾಯಿಯ ಚಿತಾಭಸ್ಮ ವಿಸರ್ಜನೆಗಾಗಿ ಹರಿದ್ವಾರಕ್ಕೆ ತೆರಳುತ್ತಿದ್ದರು. ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಕಳ್ಳನೊಬ್ಬ ಚಿತಾಭಸ್ಮ ತುಂಬಿದ್ದ ಚೀಲ ಕದ್ದು ಓಡಿ ಹೋಗುತ್ತಿದ್ದನು. ಈ ವೇಳೆ ಸಹ ಪ್ರಯಾಣಿಕರ ಸಹಾಯದಿಂದ ಕಳ್ಳನನ್ನು ಹಿಡಿದು ರೈಲ್ವೆ ಪೊಲೀಸರ ವಶಕ್ಕೆ ನೀಡಲಾಗಿದೆ. ಪೊಲೀಸರ ಕಳ್ಳನನ್ನು ಬಂಧಿಸಿದ್ದು, ಆತನ ಅಪರಾಧ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.
ಇಂದೋರ್ ನಗರದ ಬಿಜೆಪಿ ನಾಯಕ ದೇವೇಂದ್ರ ಇನಾನಿ ಅವರು ರಿಷಿಕೇಶ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಪ್ರಯಾಣದ ವೇಳೆ ದೇವೇಂದ್ರೆ ಇನಾನಿ ನಿದ್ದೆಗೆ ಜಾರಿದ್ದರು. ಎಚ್ಚರವಾದಾಗ ತಾಯಿ ಚಿತಾಭಸ್ಮ ತುಂಬಿದ್ದ ಕಳಸವಿರೋ ಚೀಲ ನಾಪತ್ತೆಯಾಗಿತ್ತು. ಕೂಡಲೇ ಜೋರಾಗಿ ಕೂಗಿದಾಗ ಓಡಿ ಹೋಗ್ತಿದ್ದ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಯಿಯ ಚಿತಾಭಸ್ಮವನ್ನು ವಿಸರ್ಜಿಸಲು ದೇವೇಂದ್ರ ಇನಾನಿ ಹರಿದ್ವಾರಕ್ಕೆ ತೆರಳುತ್ತಿದ್ದರು. ಕಳ್ಳನನ್ನು ಹಿಡಿದ ಪ್ರಯಾಣಿಕರು ಧರ್ಮದೇಟು ನೀಡಿ, ಆಗ್ರಾ ನಿಲ್ದಾಣ ಬರುತ್ತಿದ್ದಂತೆ ಪೊಲೀಸರ ವಶಕ್ಕೆ ನೀಡಿದ್ದಾರೆ.
ದೇವೇಂದ್ರ ಇನಾನಿ ತಮ್ಮ ಕುಟುಂಬದ 9 ಸದಸ್ಯರೊಂದಿಗೆ ರಿಷಿಕೇಶ್ ಎಕ್ಸ್‌ಪ್ರೆಸ್ ಮೂಲಕ ಹರಿದ್ವಾರಕ್ಕೆ ಪ್ರಯಾಣಿಸುತ್ತಿದ್ದರು. ಜುಲೈ 20 ರ ರಾತ್ರಿ ಇಂದೋರ್‌ನ ಲಕ್ಷ್ಮಿಬಾಯಿ ನಗರ ನಿಲ್ದಾಣದಿಂದ ದೇವೇಂದ್ರ ಇನಾನಿ ತಮ್ಮ ಕುಟುಂಬದಿಂದ ಪ್ರಯಾಣ ಆರಂಭಿಸಿದ್ದರು. ಪ್ರಯಾಣದಲ್ಲಿ ಆಗ್ರಾ ನಿಲ್ದಾಣಕ್ಕೂ ಮುಂಚೆಯೇ ಈ ಕಳ್ಳತನ ನಡೆದಿದೆ. ದೇವೇಂದ್ರ ತಾಯಿ ಸೇರಿದಂತೆ ಮೂವರು ಸಂಬಂಧಿಕರ ಚಿತಾಭಸ್ಮ ಚೀಲದಲ್ಲಿತ್ತು. ಕಳ್ಳನನ್ನು ರೆಡಹ್ಯಾಂಡ್ ಆಗಿ ಹಿಡಿದು ಚಿತಾಭಸ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಳಗಿನ ಜಾವ ಸುಮಾರು 4 ಗಂಟೆಗೆ ಮೊರೆನಾ ಮತ್ತು ಆಗ್ರಾ ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಓರ್ವ ವ್ಯಕ್ತಿ S-4 ಕೋಚ್‌ನಿಂದ ಅವರ S-2 ಕೋಚ್‌ಗೆ ಬಂದನು. ಚಿತಾಭಸ್ಮ ಇರಿಸಿದ್ದ ಚೀಲ ತೆಗೆದುಕೊಂಡು ಓಡಿ ಹೋಗಲು ಆರಂಭಿಸಿದರು. ನನಗೆ ಕೂಡಲೇ ಎಚ್ಚರವಾಗಿ ಕೂಗಿಕೊಂಡೆ. ತಕ್ಷಣ ಇತರೇ ಪ್ರಯಾಣಿಕರು ಸಹ ಎಚ್ಚರಗೊಂಡು ಓಡಿ ಹೋಗುತ್ತಿದ್ದ ಕಳ್ಳನನ್ನು ಹಿಡಿದರು. ಪ್ರಯಾಣಿಕರು ಆರೋಪಿಯನ್ನ ಹಿಡಿದು ಥಳಿಸಿದರು. ನಾವಿದ್ದ ಕೋಚ್‌ನ ಶೌಚಾಲಯದಲ್ಲಿ ಎರಡು ಖಾಲಿ ಪರ್ಸ್‌ಗಳು ಸಿಕ್ಕಿವೆ ಎಂದು ದೇವೇಂದ್ರ ಇನಾನಿ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಕಳ್ಳ ಕದ್ದ ಮೊಬೈಲ್‌ನ್ನು ರೈಲಿನ ಹೊರಗೆ ಎಸೆದಿದ್ದಾನೆ ಎಂದು ವರದಿಯಾಗಿದೆ. ಕಳ್ಳನನ್ನು ಗ್ವಾಲಿಯಾರ್ ನಿವಾಸಿ ಎಂದು ತಿಳಿದು ಬಂದಿದೆ. ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ ಬಳಿಕ ಪ್ರಯಾಣಿಕರು ತಮ್ಮ ಪ್ರಯಾಣ ಮುಂದುವರಿಸಿದ್ದಾರೆ. ಇನ್ನು ಮೊಬೈಲ್ ಕಳೆದುಕೊಂಡ ಪ್ರಯಾಣಿಕ ತನ್ನ ಪ್ರಯಾಣವನ್ನು ಮೊಟಕುಗೊಳಿಸಿ ದೂರು ದಾಖಲಿಸಿಸಲು ಆಗ್ರಾ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದರು. ಪೊಲೀಸರು ಕಳ್ಳನ ಗುರುತು ಮತ್ತು ಹಿಂದಿನ ಕ್ರಿಮಿನಲ್ ದಾಖಲೆಯನ್ನು ತನಿಖೆ ಮಾಡುತ್ತಿದ್ದಾರೆ.
ಪೂಂಛ್: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಶುಕ್ರವಾರ ಸಂಭವಿಸಿದ ನೆಲಬಾಂಬ್ ಸ್ಫೋಟದಲ್ಲಿ ಒಬ್ಬ ಅಗ್ನಿವೀರ ಯೋಧ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.ಕೃಷ್ಣ ಘಾಟಿ ಪ್ರದೇಶದಲ್ಲಿ ಸೈನಿಕರು ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಈ ವೇಳೆ 7 ಜೆಎಟಿ ರೆಜಿಮೆಂಟ್‌ನ ಅಗ್ನಿವೀರ ಲಲಿತ್ ಕುಮಾರ್ ಮರಣವನ್ನಪ್ಪಿದ್ದಾರೆ. ಇನ್ನಿಬ್ಬರು ಸೈನಿಕರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಗ್ನಿವೀರ ಲಲಿತ್ ಕುಮಾರ್ ಅವರ ಬಲಿದಾನಕ್ಕೆ ಭಾರತೀಯ ಸೇನೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಕುಟುಂಬದ ಜೊತೆ ನಿಲ್ಲುವುದಾಗಿ ಭರವಸೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ