ಹೈದರಾಬಾದ್(ಎ.01): AIMIM ಪಕ್ಷದ ನಾಯಕ ಅಸದ್ ಖಾನ್‌ನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹೈದರಾಬಾದ್‌ನ ವಟ್ಟಪಾಲಿ ಪ್ರದೇಶದಲ್ಲಿನ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ. 41 ವರ್ಷದ ಅಸದ್ ಖಾನ್ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಇದು ಸೇಡು ತೀರಿಸಿಕೊಳ್ಳಲು ಮಾಡಿರುವ ಕೊಲೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಯುವಕನ ಬರ್ಬರ ಕೊಲೆ: ರೌಡಿಗಳ ಅಟ್ಟಹಾಸಕ್ಕೆ ನಲುಗಿದ ಕಲಬುರಗಿ..!.

AIMIM ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭದ್ರಕೋಟೆಯಲ್ಲಿ ಪಕ್ಷದ ಮುಖಂಡನ ಹತ್ಯೆಯಾಗಿದೆ. ಹತ್ಯೆ ದೃಶ್ಯ ರಸ್ತೆಯಲ್ಲಿ ಅಳವಡಿಸಿದ್ದ ಸಿಟಿವಿಯಲ್ಲಿ ಸೆರೆಯಾಗಿದೆ. 40 ವರ್ಷದ ಅಸಾದ್ ಖಾನ್ ವಾಹನದ ಮೂಲಕ ತೆರಳುತ್ತಿದ್ದ ವೇಳೆ ಶಾಂತಿಪುರಂ ರಸ್ತೆಯಲ್ಲಿನ ಪಬ್ಲಿಕ್ ಹಾಲ್ ಬಳಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.

ಸದಾ ಜನ ಹಾಗೂ ವಾಹನಗಳಿಂದ ತುಂಬಿರುವ ರಸ್ತೆಯಲ್ಲಿ ಹಾಡಹಗಲೇ ಅಸಾದ್ ಖಾನ್‌ನ್ನು ಹತ್ಯೆ ಮಾಡಲಾಗಿದೆ. ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳು ತಮ್ಮ ಕೆಲಸ ಮುಗಿಸಿ ಪರಾರಿಯಾಗಿದ್ದಾರೆ. ಇತ್ತ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಸಾದ್ ಖಾನ್‌ನ್ನು ತಕ್ಷವೇ ಒಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಮದುವೆ ಆಗಲು ಮುಂದಾದ ಬಾರ್‌ ಡ್ಯಾನ್ಸರ್‌ಳನ್ನು ಕೊಂದ..!

ಆದರೆ ಆಸ್ಪತ್ರೆ ತಲುಪುದೊರೊಳಗೆ ಅಸದ್ ಖಾನ್ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ಹಿಂದೆ ಅಸಾದ್ ಖಾನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಈಗಾಗಲೇ ಹಲವು ಕ್ರಿಮಿನಲ್ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಅಸಾದ್ ಖಾನ್ ಇದೀಗ ದಾರುಣವಾಗಿ ಹತ್ಯೆಯಾಗಿದ್ದಾನೆ.