Russia-Ukraine Conflict: 472 ಡ್ರೋನ್‌ ಬಳಸಿ ಉಕ್ರೇನ್‌ಮೇಲೆ ರಷ್ಯಾ ಭಯಾನಕ ದಾಳಿ!

Published : Jun 02, 2025, 12:29 AM ISTUpdated : Jun 02, 2025, 10:06 AM IST
Russia ukrain war update

ಸಾರಾಂಶ

ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ದೇಶಗಳು ಭಾನುವಾರ ಪರಸ್ಪರ ಭಾರೀ ಪ್ರಮಾಣದ ದಾಳಿ-ಪ್ರತಿದಾಳಿ ನಡೆಸಿವೆ. 

ಕೀವ್/ ಮಾಸ್ಕೋ ಜೂ.2: ರಷ್ಯಾ ಮತ್ತು ಉಕ್ರೇನ್ ನಡುವಿನ ಸಮರ ಇದೀಗ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ದೇಶಗಳು ಭಾನುವಾರ ಪರಸ್ಪರ ಭಾರೀ ಪ್ರಮಾಣದ ದಾಳಿ-ಪ್ರತಿದಾಳಿ ನಡೆಸಿವೆ. ಉಕ್ರೇನ್ ಮೇಲೆ ರಷ್ಯಾ ನಡೆಸಿದ ಈವರೆಗಿನ ಅತಿ ಭೀಕರ ವೈಮಾನಿಕ ದಾಳಿಯಲ್ಲಿ 12 ಸೈನಿಕರು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ಉಕ್ರೇನ್, ರಷ್ಯಾ ವಾಯುನೆಲೆಯಲ್ಲಿನ 40 ಯುದ್ಧ ವಿಮಾನಗಳನ್ನು ಧ್ವಂಸ ಮಾಡಿದೆ.

‘ಉಕ್ರೇನ್‌ ಮೇಲೆ ರಷ್ಯಾ 472 ಡ್ರೋನ್‌ ಹಾಗೂ 7 ಕ್ಷಿಪಣಿ ಬಳಸಿ ದಾಳಿ ಮಾಡಿದೆ. 3 ವರ್ಷದ ಯುದ್ಧದಲ್ಲಿ ನಮ್ಮ ಮೇಲೆ ಇಷ್ಟೊಂದು ಭೀಕರ ದಾಳಿ ಇದೇ ಮೊದಲು’ ಎಂದು ಉಕ್ರೇನ್ ವಾಯುಪಡೆ ಸಂಪರ್ಕಾಧಿಕಾರಿ ಯೂರಿ ಇಗ್ನಟ್‌ ಹೇಳಿದ್ದಾರೆ.

ಭಾರಿ ದಾಳಿ-ಪ್ರತಿದಾಳಿ:

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್ಸ್ಕಿ, ಇಸ್ತಾನ್‌ಬುಲ್‌ನಲ್ಲಿ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧ ಎಂದ ಬೆನ್ನಲ್ಲೇ ಸಂಘರ್ಷ ಮತ್ತಷ್ಟು ಕಾವು ಪಡೆದುಕೊಂಡಿದೆ.

ರಷ್ಯಾ ಭಾನುವಾರ ಉಕ್ರೇನ್‌ನ ಸೇನಾ ತರಬೇತಿ ಕೇಂದ್ರದ ಮೇಲೆ ಕ್ಷಿಪಣಿ ಹಾಗೂ ಡ್ರೋನ್‌ ದಾಳಿ ನಡೆಸಿದೆ. ಈ ದಾಳಿಯಲ್ಲಿ 12 ಉಕ್ರೇನಿ ಯೋಧರು ಬಲಿಯಾಗಿದ್ದು, ಸುಮಾರು 60ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ಈ ನಡುವೆ ಉಕ್ರೇನ್‌ನ ಉತ್ತರ ಸುಮಿ ಪ್ರದೇಶದ ಒಲೆಕ್ಸಿವಾ ಗ್ರಾಮದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ.

ಮತ್ತೊಂದೆಡೆ ಉಕ್ರೇನ್ ಕೂಡ ರಷ್ಯಾದ ಮೇಲೆ ದಾಳಿ ನಡೆಸಿದ್ದು, ವಾಯುನೆಲೆ ಮೇಲೆ ನಡೆದ ಬೃಹತ್‌ ಡ್ರೋನ್ ದಾಳಿಯಲ್ಲಿ ಉಕ್ರೇನ್‌ ರಷ್ಯಾದ 40 ವಿಮಾನಗಳನ್ನು ನಾಶ ಮಾಡಿದೆ ಎಂದು ವರದಿಯಾಗಿದೆ. ರಷ್ಯಾದ ಇರ್ಕುಟ್ಸ್ಕ್ ಪ್ರದೇಶದಲ್ಲಿರುವ ಮಿಲಿಟರಿ ಘಟಕದ ಮೇಲೆ ದಾಳಿ ಸಂಭವಿಸಿದೆ. ವಿಮಾನಗಳು ಹಾಗೂ ಉಕ್ರೇನ್ ಮೇಲಿನ ದಾಳಿಗೆ ಬಳಸಲು ಯೋಜಿಸಿದ್ದ ಕ್ಷಿಪಣಿಗಳನ್ನು ನಾಶ ಮಾಡಲಾಗಿದೆ ಎಂದು ಉಕ್ರೇನ್ ಹೇಳಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana