ಜಾಮೀನು ಸಿಕ್ಕರೂ ಆರ್ಯನ್ ಖಾನ್‌ಗೆ ಸಂಕಷ್ಟ ತಪ್ಪಿಲ್ಲ; ಪ್ರತಿ ಶುಕ್ರವಾರ NCB ಮುಂದೆ ಹಾಜರಾಗಬೇಕು!

By Suvarna NewsFirst Published Oct 29, 2021, 4:23 PM IST
Highlights
  • ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಸಿಕ್ಕರೂ ಸಂಕಷ್ಟ
  • ಇಂದು ಸಂಜೆ 5.30ಕ್ಕೆ ಜೈಲಿನಿಂದ ಬಿಡಗಡೆ ಸಾಧ್ಯತೆ
  • ಹಲವು ಷರತ್ತಿನ ಮೇಲೆ ಬಿಡುಗಡೆಯಾಗಲಿರುವ ಆರ್ಯನ್ ಖಾನ್

ಮುಂಬೈ(ಅ.29): ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಬಾಲಿವುಡ್(Bollywood) ಸೂಪರ್ ಸ್ಟಾರ್ ಶಾರುಖ್ ಖಾನ್(Shah Rukh Khan) ಪುತ್ರ ಆರ್ಯನ್ ಖಾನ್‌(Aryan Khan) ಇಂದು(ಅ.29) ಸಂಜೆ 5.30ಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಕಳೆದ 26 ದಿನಗಳಿಂದ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಆರ್ಯನ್ ಖಾನ್‌ಗೆ ನಿನ್ನೆ(ಅ.28)ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು(Aryan Kan Bail) ಮಾಡಿದೆ. ಜೈಲಿನಿಂದ ಬಿಡುಗಡೆಯಾದರೂ ಆರ್ಯನ್ ಖಾನ್‌ಗೆ ಸಂಕಷ್ಟ ತಪ್ಪಿಲ್ಲ. ಹಲವು ಷರತ್ತು ಪಾಲಿಸಲೇಬೇಕಿದೆ.

ಕೊನೆಗೂ ಆರ್ಯನ್ ಖಾನ್‌ಗೆ ಸಿಕ್ತು ಜಾಮೀನು; ಇಂದು ಜೈಲಿನಿಂದ ಬಿಡುಗಡೆ ಇಲ್ಲ!

ಆರ್ಯನ್ ಖಾನ್ ಮುಂಬೈ ಬಿಟ್ಟು ಹೋಗುವಂತಿಲ್ಲ. ಆರ್ಯನ್ ಖಾನ್ ತನ್ನ ಪಾಸ್‍‌ಪೋರ್ಟ್ ದಾಖಲೆಗಳನ್ನು ಮುಂಬೈ ಕೋರ್ಟ್‌ಗೆ ಸಲ್ಲಿಸಬೇಕು. ಇನ್ನು ಪ್ರತಿ ಶುಕ್ರವಾರ ಆರ್ಯನ್ ಖಾನ್ NCB ಅಧಿಕಾರಿಗಳ ಮುಂದೆ ಹಾಜರಾಗಬೇಕು. ಇದರ ನಡುವೆ NCB ಅಧಿಕಾರಿಗಳು ಕರೆದಾಗ ಕಚೇರಿಗೆ ತೆರಳಿ ಅಧಿಕಾರಿಗಳ ಮುಂದೆ ಹಾಜರಾಗಬೇಕು. ಇನ್ನುಅನಿವಾರ್ಯ ಹಾಗೂ ತುರ್ತು ಕಾರಣಗಳನ್ನು ಹೊರತು ಪಡಿಸಿ ಕೋರ್ಟ್ ವಿಚಾರಣೆಗೆ ತಪ್ಪದೆ ಹಾಜರಾಗಬೇಕು.

ಇವಿಷ್ಟು ಷರತ್ತುಗಳು ಆರ್ಯನ್ ಖಾನ್ ಮುಂದಿದೆ. ಅಂದರೆ ಜಾಮೀನು ಸಿಕ್ಕರೂ ಆರ್ಯನ್ ಖಾನ್‌ಗೆ ಸಂಕಷ್ಟ ತಪ್ಪಿಲ್ಲ. ಷರತ್ತು ಇಲ್ಲಿಗೆ ಮುಗಿದಿಲ್ಲ. ಆರ್ಯನ್ ಖಾನ್ ಹಾಗೂ ಮತ್ತಿಬ್ಬರು ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಹಾಗೂ ಮುನ್ಮುನ್ ಧಮೇಚಾ ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡುವಂತಿಲ್ಲ. ಸದ್ಯದ ವಿಚಾರಣೆ ಕುರಿತು ಯಾವುದೇ ಮಾಹಿತಿಯನ್ನು ಬಾಯ್ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.

Aryan Khanಗೆ ಬೇಲ್: ವಕೀಲರ ತಂಡದ ಜೊತೆ ಪೋಸ್ ಕೊಟ್ಟ ಶಾರೂಖ್ ಮುಖದಲ್ಲಿ ಬಿಗ್ ಸ್ಮೈಲ್

ಆರ್ಯನ್ ಖಾನ್ ಈ ಷರತ್ತುಗಳನ್ನು ಉಲ್ಲಂಘನೆ ಮಾಡಿದರೆ ಜಾಮೀನು ರದ್ದು ಮಾಡಿ ಮತ್ತೆ ಬಂಧನ ಮಾಡಲು ಅವಕಾಶ ಕೋರಿ NCBಗೆ ಕೋರ್ಟ್ ಬಳಿ ಮನವಿ ಮಾಡಬಹುದು ಎಂದು ಬಾಂಬೆ ಹೈಕೋರ್ಟ್ ತನ್ನ ಜಾಮೀನು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಆರ್ಯನ್ ಖಾನ್ ಸೇರಿ ಮೂವರಿಗೆ 1 ಲಕ್ಷ PR ಬಾಂಡ್ ಹಾಗೂ ಶ್ಯುರಿಟಿ ಆಧಾರದಲ್ಲಿ ಬೇಲ್ ನೀಡಲಾಗಿದೆ.  

ಅಕ್ಟೋಬರ್ 3 ರಂದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ 8 ಮಂದಿಯನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಮುಂಬೈ ಕರಾಳವಳಿ ತೀರದಲ್ಲಿ ಕ್ರ್ಯೂಸ್ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿ ಮೇಲೆ NCB ಅಧಿಕಾರಿಗಳು ಮುಫ್ತಿಯಲ್ಲಿ ದಾಳಿ ಮಾಡಿದ್ದರು. ಈ ವೇಳೆ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ಇಷ್ಟೇ  ಅಲ್ಲ ಆರ್ಯನ್ ಖಾನ್ ಬಂಧನಕ್ಕೊಳಗಾಗಿದ್ದರು.

ಜಾಮೀನುಗಾಗಿ ಶಾರುಖ್ ಕಾನ್ ಕುಟುಂಬ ಇನ್ನಿಲ್ಲದ ಹರಸಾಹಸ ಪಟ್ಟಿತ್ತು. ಬಾಂಬೆ ಸೆಷನ್ ಕೋರ್ಟ್‌ನಲ್ಲಿ ಜಾಮೀನು ಸಿಗದ ಕಾರಣ, ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಇದಕ್ಕಾಗಿ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಆರ್ಯನ್ ಖಾನ್ ಪರ ವಾದ ಮಂಡಿಸಿದ್ದರು. 

ಆರ್ಯನ್ ಖಾನ್‌ ಜಾಮೀನು ನೀಡಿದರಲು ಕಾರಣಗಳೇ ಇಲ್ಲ. ಬಂಧನದ ವೇಳೆ ಆರ್ಯನ್ ಖಾನ್ ಬಳಿಯಿಂದ ಡ್ರಗ್ಸ್ ಪತ್ತೆಯಾಗಿಲ್ಲ. ಆರ್ಯನ್ ಖಾನ್ ಡ್ರಗ್ಸ್ ಸೇವನೆ ಕುರಿತು ಯಾವುದೇ ಪರೀಕ್ಷೆ ನಡೆಸಿಲ್ಲ. ಎನ್‌ಸಿಬಿ ಅಧಿಕಾರಿಗಳು ಆರ್ಯನ್ ಖಾನ್ ಬಂಧಿಸಿರುವುದೇ ಕಾನೂನು ಬಾಹಿರ ಎಂದು ರೋಹ್ಟಗಿ ವಾದಿಸಿದ್ದರು. ಆರ್ಯನ್ ಖಾನ್ ಜೊತ ಸ್ನೇಹಿತ ಅರ್ಬಾಜ್ ಖಾನ್ ಹಾಗೂ ಮುನ್ಮು ದಮೇಚಾಗೂ ಬಾಂಬೆ ಹೈಕೋರ್ಟ್ ಜಾಮೀನು ನೀಡಿತ್ತು. 

ಇಂದು ಸಂಜೆ 5.30ರೊಳಗೆ ಕೋರ್ಟ್ ಜಾಮೀನು ಆರ್ಡರ್ ಆರ್ಥರ್ರ್ ರೋಡ್ ಜೈಲು ತಲುಪಿದರೆ ಆರ್ಯನ್ ಖಾನ್ ಇಂದೇ ಬಿಡುಗಡೆಯಾಗಲಿದ್ದಾರೆ. ಕೋರ್ಟ್ ಆರ್ಡರ್ ತಲುಪಲು ವಿಳಂಬವಾದರೆ ಮತ್ತೆ ಒಂದು ದಿನ ಜೈಲಿನಲ್ಲೇ ಕಳೆಯಬೇಕಾಗಿದೆ.
 

click me!