
ಮೇರತ್ /ರಾಯ್‌ಪುರ್ (ಏ.03): ರಾಮಾಯಣ ಧಾರಾವಾಹಿಯ ರಾಮನ ಪಾತ್ರಧಾರಿ ಅರುಣ್ ಗೋವಿಲ್ ಉತ್ತರ ಪ್ರದೇಶ ಮೇರಠ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಹಲವು ಹಿರಿಯ ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಮತ್ತೊಂದೆಡೆ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಫೇಲ್ ರಾಜನಂದಗಾಂವ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದರು.
ಅರುಣ್ ಗೋವಿಲ್: ಅರುಣ್ ಗೋವಿಲ್ ತಮ್ಮ ಬಳಿ ಮರ್ಸಿಡಿಸ್ ಕಾರು ಇದೆ. ಆದರೆ ಯಾವುದೇ ಶಸ್ತ್ರಾಸ್ತ್ರಗಳು ಇಲ್ಲ. ಉಳಿದಂತೆ 2.76 ಕೋಟಿ ರು. ಮೌಲ್ಯದ ಚರಾಸ್ಥಿ ಮತ್ತು 5.67 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇದರಲ್ಲಿ 10.92 ಲಕ್ಷ ಮೌಲ್ಯದ 220 ಗ್ರಾಂ ಚಿನ್ನಾಭರಣ, ಕೈಯಲ್ಲಿ 3.75 ಲಕ್ಷ ನಗದು, ಬ್ಯಾಂಕ್ ಖಾತೆಯಲ್ಲಿ 1,34,09,071 ಠೇವಣಿ ಇದೆ ಎಂದು ಸಲ್ಲಿಸಿದ್ದಾರೆ. ಇನ್ನು ತಮ್ಮ ಪತ್ನಿ ಲೇಖಾ ಬಳಿ 2.76 ಕೋಟಿ ಮೌಲ್ಯದ ಆಸ್ತಿ, 32.89 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾ ಭರಣ, 4 ಲಕ್ಷನಗದು, ಬ್ಯಾಂಕಿನಲ್ಲಿ 80 ಲಕ್ಷ ರು. ಠೇವಣಿ ಇದೆ. ಇಬ್ಬರ ಬಳಿಯೂ ಯಾವುದೇ ಕೃಷಿ/ಕೃಷಿಯೇತರ ಭೂಮಿ, ಪಿತ್ರಾರ್ಜಿತ ಆಸ್ತಿಯಿಲ್ಲ ಎಂದು ಆಯೋಗಕ್ಕೆ ತಿಳಿಸಿದ್ದಾರೆ.
ಮೋದಿಗೆ ಧನ್ಯವಾದ: ರಾಮನ ಪಾತ್ರವನ್ನು ಮಾಡುವ ಮೂಲಕ ಅಸಂಖ್ಯಾತ ಹೃದಯಗಳಲ್ಲಿ ರಾಮನೇ ಆಗಿ ಉಳಿದಿರುವ ನಟ ಅರುಣ್ ಗೋವಿಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಬಾರಿ ಲೋಕಸಭೆ ಅಖಾಡದಲ್ಲಿ ಅರುಣ್ ಗೋವಿಲ್ ಕಾಣಿಸಿಕೊಂಡಿದ್ದು, ಟಿಕೆಟ್ ನೀಡಿದ್ದಕ್ಕಾಗಿ ಭಾರತಿ ಜನತಾ ಪಾರ್ಟಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಕಾಂಗ್ರೆಸ್‌ಗೆ ನಿಷೇಧಿತ ಪಿಎಫ್‌ಐನ ರಾಜಕೀಯ ಮುಖವಾಣಿ ಎಸ್‌ಡಿಪಿಐ ಬೆಂಬಲ!
ಅಭ್ಯರ್ಥಿಯೇ ಬದಲು: ದೂರದರ್ಶನದಲ್ಲಿ ಹಿಂದೆ ಪ್ರಸಾರವಾಗ್ತಿದ್ದ ಜನಪ್ರಿಯ ‘ರಾಮಾಯಣ’ ಧಾರಾವಾಹಿಯ ‘ಶ್ರೀರಾಮ’ನ ಪಾತ್ರಧಾರಿ ಅರುಣ್ ಗೋವಿಲ್‌ರನ್ನು ಕಣಕ್ಕಿಳಿಸಿತ್ತು. ಇದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ನಿದ್ದೆಗೆಡಿಸಿತ್ತು ಬಿಜೆಪಿಯ ಹಿಂದುತ್ವದ ಅಸ್ತ್ರ ಇದೀಗ ಮೀರತ್ ಕ್ಷೇತ್ರದ ಎಸ್ಪಿ ಅಭ್ಯರ್ಥಿಯನ್ನು ಬದಲಾವಣೆ ಮಾಡುವಂತೆ ಮಾಡಿದೆ. ಹೊಸ ಅಭ್ಯರ್ಥಿಯಾಗಿ ಎಸ್ಪಿ ಶಾಸಕ ಅತುಲ್ ಪ್ರಧಾನ್ ರನ್ನು ಕಣಕ್ಕೆ ಇಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ