
ಶ್ರೀನಗರ(ಜೂ.04): ದೇಶದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಅಮರನಾಥ ಗುಹೆಯೂ ಒಂದು. ಪ್ರತಿ ವರ್ಷ ಆಯೋಜಿಸಲಾಗುವ ಅಮರನಾಥ ಯಾತ್ರೆಯಲ್ಲಿ ಅನೇಕ ಮಂದಿ ಭಕ್ತರು ಪಾಲ್ಗೊಳ್ಳುತ್ತಾರೆ. ಆದರೆ ಕೊರೋನಾ ಮಹಾಮಾರಿಯಿಂದಾಗಿ ಈ ಬಾರಿ ಅಸಮಂಜಸ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ಅಮರನಾಥ ಗುಹರೆಯ ಶಿವಲಿಂಗದ ಮೊದಲ ಫೋಟೋ ಭಾರೀ ವೈರಲ್ ಆಗಿದೆ.
ಗುಹೆಯ ಸುತ್ತಲೂ ಹಿಮ ಆವರಿಸಿದ್ದು, ಶಿವ ಲಿಂಗವಿದೆ. ಸದ್ಯ ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಹೀಗಿದ್ದರೂ ಈ ಫೋಟೋ ಕ್ಲಿಕ್ಕಿಸಿದವರು ಯಾರು? ಹಾಗೂ ಶೇರ್ ಮಾಡಿದದ್ದು ಯಾರು ಎಂಬ ವಿಚಾರ ತಿಳಿದು ಬಂದಿಲ್ಲ.
ಜೂನ್ 23ರಿಂದ ಆರಂಭವಾಗಲಿದೆ ಅಮರನಾಥ ಯಾತ್ರೆ
ಪ್ರತಿ ವರ್ಷ ಅಮರನಾಥ ಯಾತ್ರೆ ಕೈಗೊಳ್ಳುವ ಭಕ್ತರಲ್ಲಿ ವಿಭಿನ್ನವಾದ ಹುಮ್ಮಸ್ಸು ಇರುತ್ತದೆ. ಈ ಯಾತ್ರೆಗೆ ಬೇಕಾದ ತಯಾರಿಯೂ ಹಲವಾರು ತಿಂಗಳ ಮೊದಲೇ ಆರಂಭಿಸುತ್ತಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಎಲ್ಲಾ ವ್ಯವಸ್ಥೆಗಳು ಕೊಂಚ ಕಳೆಗುಂದಿವೆ. ಅಮರನಾಥ ಯಾತ್ರೆ ಇರುತ್ತಾ? ಇರುವುದಿಲ್ಲವಾ ಎಂಬುವುದೂ ಕೂಡಾ ಸ್ಪಷ್ಟವಿಲ್ಲ. ಏಪ್ರಿಲ್ 22ರಂದು ಅಮರನಾಥ ದೇಗುಲದ ಆಡಳಿತ ಮಂಡಳಿ ಈ ಯಾತ್ರೆ ರದ್ದುಗೊಳಿಸುವ ಬಗ್ಗೆ ಸುದ್ದಿಗೋಷ್ಠಿ ನಡೆಸಿತ್ತು. ಆದರೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ತನ್ನ ನಿರ್ಧಾರವನ್ನು ಹಿಂಪಡೆದು, ಜೂನ್ 23 ರಿಂದ ಯಯಾತ್ರೆ ಆರಮಭಿಸುವುದಾಗಿ ತಿಳಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ