ಮೋದಿಗೆ ಬೆಂಗಳೂರಿನ ಶಿಲ್ಪಿ ಕೆತ್ತಿದ ವಿಗ್ರಹ ಉಡುಗೊರೆ

Kannadaprabha News   | Asianet News
Published : Aug 02, 2020, 07:55 AM IST
ಮೋದಿಗೆ ಬೆಂಗಳೂರಿನ ಶಿಲ್ಪಿ ಕೆತ್ತಿದ ವಿಗ್ರಹ ಉಡುಗೊರೆ

ಸಾರಾಂಶ

ಬೆಂಗಳೂರಿನ ಶಿಲ್ಪಿ ರಾಮಮೂರ್ತಿ ಅವರು ಕೆತ್ತಿದ ಕೋದಂಡ ರಾಮನ ಮೂರ್ತಿ ಹಾಗೂ ಲವ- ಕುಶರ ವಿಗ್ರಹಗಳನ್ನು ರಾಮ ಮಂದಿರ ಭೂಮಿ ಪೂಜೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲು ಸಿದ್ಧತೆ ನಡೆದಿದೆ.

ಬೆಂಗಳೂರು(ಆ.02): ಬೆಂಗಳೂರಿನ ಶಿಲ್ಪಿ ರಾಮಮೂರ್ತಿ ಅವರು ಕೆತ್ತಿದ ಕೋದಂಡ ರಾಮನ ಮೂರ್ತಿ ಹಾಗೂ ಲವ- ಕುಶರ ವಿಗ್ರಹಗಳನ್ನು ರಾಮ ಮಂದಿರ ಭೂಮಿ ಪೂಜೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆಯಾಗಿ ನೀಡಲಾಗುತ್ತದೆ.

ಸಾಗವಾನಿ ಮರದಿಂದ ಕೆತ್ತಿದ ಒಂದೂವರೆ ಅಡಿ ಎತ್ತರದ ಮೂರ್ತಿಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಸ್ತಾಂತರಿಸಲಿದ್ದಾರೆ. ದಕ್ಷಿಣ ಭಾರತದ ವಾಸ್ತುಶಿಲ್ಪಿ ಹಾಗೂ ಚೋಳರ ಕಾಲದ ಕೆತ್ತನೆಗಳನ್ನು ಈ ಮೂರ್ತಿಗಳಲ್ಲಿ ಕಾಣಬಹುದಾಗಿದೆ.

ಇಂದಿನಿಂದ ಸಂಡೇ ಲಾಕ್‌ಡೌನ್‌ ಇಲ್ಲ, ರಾತ್ರಿ ಕರ್ಫ್ಯೂ ಕೂಡ ತೆರವು

ಈ ಮುನ್ನ 7.5 ಅಡಿ ಎತ್ತರದ ಕೋದಂಡ ರಾಮನ ಮೂರ್ತಿಯ ಕೆತ್ತನೆಗೆ 2016ರಲ್ಲಿ ರಾಮಮೂರ್ತಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಈ ಮೂರ್ತಿಯನ್ನು ಇಷ್ಟಪಟ್ಟಯೋಗಿ ಆದಿತ್ಯನಾಥ್‌ ಮೋದಿ ಅವರಿಗೆ ಉಡುಗೊರೆ ನೀಡಲು ಮೂರ್ತಿಗಳನ್ನು ನಿರ್ಮಿಸಿಕೊಡುವಂತೆ ಕೇಳಿಕೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ
ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್