
ನವದೆಲಿ(ಆ.02): ಗಲ್ವಾನ್ ಗಡಿ ಕ್ಯಾತೆ ಬೆನ್ನಲ್ಲೇ ಚೀನೀ ಆ್ಯಪ್, ಚೀನಾ ಟೀವಿ ಆಮದು, ಚೀನಾ ಕಂಪನಿಗಳಿಗೆ ಭಾರತೀಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿಷೇಧ ಹೇರಿದ ಭಾರತ ಸರ್ಕಾರ, ಇದೀಗ ಚೀನಾಕ್ಕೆ ಇನ್ನೊಂದು ಶಾಕ್ ನೀಡಿದೆ.
ಕಳೆದ ಬುಧವಾರವಷ್ಟೇ ಕೇಂದ್ರ ಸಚಿವ ಸಂಪುಟದಿಂದ ಅನುಮೋದನೆ ಪಡೆಯಲ್ಪಟ್ಟನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ವಿದೇಶಿ ಭಾಷೆಗಳ ಕಲಿಕೆ ವಿಭಾಗದಿಂದ ಚೀನಾದ ಮ್ಯಾಂಡರಿನ್ ಭಾಷೆಯನ್ನು ಕೈಬಿಡಲಾಗಿದೆ.
TikTok ಖರೀದಿಗೆ ಮೈಕ್ರೋಸಾಫ್ಟ್ ಯತ್ನ, ಬ್ಯಾನ್ ಮಾಡ್ತೀನಿ, ಖರೀದಿಗೆ ಬಿಡಲ್ಲ ಎಂದ ಟ್ರಂಪ್
2019ರಲ್ಲಿ ಬಿಡುಗಡೆ ಮಾಡಲಾಗಿದ್ದ ಶಿಕ್ಷಣ ನೀತಿಯ ಕರಡಿನಲ್ಲಿ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ಫ್ರೆಂಚ್, ಜರ್ಮನ್, ಸ್ಪಾ್ಯನಿಷ್, ಚೀನೀ ಹಾಗೂ ಜಪಾನ್ ಭಾಷೆಗಳ ಕಲಿಕೆಗೆ ಅವಕಾಶವಿತ್ತು. ಆದರೆ, ಇದೀಗ ನೂತನ ಶಿಕ್ಷಣ ನೀತಿಯಲ್ಲಿ ವಿದೇಶಿ ಭಾಷೆಗಳ ಪಟ್ಟಿಯಲ್ಲಿ ಮ್ಯಾಂಡರಿನ್ ಕೈಬಿಡಲಾಗಿದೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಚೀನಾ ಭಾಷೆ ಕಲಿಕೆ ನಿಧಾನವಾಗಿ ಜನಪ್ರಿಯವಾಗುತ್ತಿತ್ತು. ಅಷ್ಟರಲ್ಲೇ ಕೇಂದ್ರ ಸರ್ಕಾರ ಮ್ಯಾಂಡರಿನ್ ಅನ್ನು ವಿದ್ಯಾರ್ಥಿಗಳ ಕಲಿಕಾಪಟ್ಟಿಯಿಂದ ಹೊರಗಿಡುವ ಮೂಲಕ ನೆರೆ ದೇಶಕ್ಕೆ ಸಾಂಸ್ಕೃತಿಕವಾಗಿ ಪೆಟ್ಟು ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ