ನವದೆಹಲಿ(ಮಾ.18): ದೇಶಾದ್ಯಂತ ಹೋಳಿ ಸಂಭ್ರಮ ಮುಗಿಲು ಮುಟ್ಟಿದೆ. ಮನೆ ಮಠಗಳನ್ನು ಬಿಟ್ಟು ದೂರದಲ್ಲಿ ದೇಶ ಕಾಯುತ್ತಿರುವ ಯೋಧರು ಕೂಡ ತಾವಿದ್ದಲ್ಲೇ ಬಣ್ಣದ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸಿಆರ್‌ಪಿಎಫ್ ಹಾಗೂ ಬಿಎಸ್‌ಎಫ್(BSF) ಯೋಧರು ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ತಾನ(Rajastan) ಸೇರಿದಂತೆ ತಾವಿರುವಲ್ಲೆಲ್ಲಾ ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಕುಟುಂಬದವರು, ಸ್ನೇಹಿತರು, ನೆರೆಹೊರೆಯವರ ಜೊತೆ ದೇಶದ ಜನ ಹೋಳಿ(HOLI) ಆಚರಿಸುತ್ತಾರೆ. ಆದರೆ ಮನೆ ಬಿಟ್ಟು ದೂರದಲ್ಲಿ ಕರ್ತವ್ಯದಲ್ಲಿರುವ ಯೋಧರಿಗೆ ಈ ಅವಕಾಶವಿಲ್ಲ. ಹಾಗಂತ ಅವರೇನು ಆಚರಣೆಯಿಂದ ದೂರ ಉಳಿದಿಲ್ಲ. ತಾವಿದ್ದಲ್ಲೇ ತಮ್ಮ ಸಹೋದ್ಯೋಗಿಗಳು ಸ್ನೇಹಿತರೊಡಗೂಡಿ ಹೋಳಿ ಆಚರಿಸುತ್ತಿದ್ದಾರೆ. ಯೋಧರ ಸಂಭ್ರಮದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Holi 2022: ಬಣ್ಣದ ಜೊತೆ ಹಣ ಮನೆಗೆ ಬರ್ಬೇಕೆಂದ್ರೆ ಹೋಳಿ ದಿನ ಮಾಡಿ ಈ ಕೆಲಸ
ಗಡಿ ಭದ್ರತಾ ಪಡೆಯ ಸಿಬ್ಬಂದಿ ಪಂಜಾಬ್‌ನ ಅಮೃತಸರದ (Amritsar) ಅಜ್ನಲಾ (Ajnala) 73ನೇ ಬೆಟಾಲಿಯನ್‌ನ ಹೆಡ್‌ಕ್ವಾಟರ್‌ನಲ್ಲಿ ಹೋಳಿ ಆಚರಣೆ ಮಾಡುತ್ತಿದ್ದಾರೆ.
ಹಾಗೆಯೇ ರಾಜಸ್ತಾನದಲ್ಲಿರುವ (Rajasthan) ಗಡಿ ಭದ್ರತಾ ಪಡೆಯ ಸಿಬ್ಬಂದಿ ಜೈಸಲ್ಮೇರ್‌ನಲ್ಲಿ(Jaisalmer) ಹೋಳಿ ಆಚರಣೆ ಮಾಡಿದರು, ಅದ್ಧೂರಿ ಸಂಗೀತಾದ ಜೊತೆ ಪರಸ್ಪರ ಬಣ್ಣವನ್ನು ಎರಚುತ್ತ ಸಂಭ್ರಮ ಪಟ್ಟರು.
ಹಾಗೆಯೇ ಜಮ್ಮು(Jammu) ಮತ್ತು ಕಾಶ್ಮೀರದಲ್ಲಿ (Kashmir) ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಲ್ಲಿನ ಸ್ಥಳೀಯರು ಹಾಗೂ ಸಹೋದ್ಯೋಗಿಗಳೊಂದಿಗೆ ಸಂಭ್ರಮಾಚರಣೆ ನಡೆಸಿದರು. ಬೊನಿಯಾರ್‌ನಲ್ಲಿ(Boniyar) ಸ್ಥಳೀಯರು ಸಿಆರ್‌ಪಿಎಫ್ ಸಿಬ್ಬಂದಿ ಜೊತೆ ಡಾನ್ಸ್ ಮಾಡಿದರು. ಹಾಗೆಯೇ ಬಾರಮುಲ್ಲಾ (Baramulla) ಜಿಲ್ಲೆಯಲ್ಲಿ ಡಾನ್ಸ್ ಮಾಡುತ್ತಾ ಯೋಧರು ಹೋಳಿಯನ್ನು ಆಚರಿಸಿದರು.
ಶ್ರಿನಗರದಲ್ಲೂ(Srinagar) ಕೂಡ ಯೋಧರು ಪರಸ್ಪರ ಬಣ್ಣಗಳನ್ನು ಎರಚುತ್ತಾ ಡಾನ್ಸ್ ಮಾಡುತ್ತಾ ಹೋಳಿ ಆಚರಿಸಿದರು.
HoLi 2022: ನವವಿವಾಹಿತೆ ಕಾಮದಹನ ನೋಡ್ಲೇಬಾರ್ದು, ಅತ್ತೆ ಸೊಸೆ ಜೊತೆಯಾಗಿ ನೋಡಿದ್ರಂತೂ ಕಷ್ಟ ಕಷ್ಟ
ಬಣ್ಣ(Colour)ಗಳ ಹಬ್ಬ (Festival ) ಹೋಳಿ (Holi )ಯನ್ನು ದೇಶಾದ್ಯಂತ (Country) ಸಡಗರದಿಂದ ಆಚರಿಸಲಾಗುತ್ತದೆ. ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಈ ಮಂಗಳಕರ ದಿನದಂದು ಕೆಲವು ವಿಶೇಷ ವಾಸ್ತು ಕ್ರಮಗಳನ್ನು ಅಳವಡಿಸಿಕೊಳ್ಳುವುದು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಇದು ಸಾಲ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ