ಪೂರ್ವಜರ ಭೂಮಿಯಲ್ಲಿ ಸ್ವಂತವಾಗಿ ಅರಣ್ಯ ಬೆಳೆಸಿದ ಪ್ರಕೃತಿ ಪ್ರೇಮಿ

Suvarna News   | Asianet News
Published : Mar 18, 2022, 05:37 PM IST
ಪೂರ್ವಜರ ಭೂಮಿಯಲ್ಲಿ ಸ್ವಂತವಾಗಿ ಅರಣ್ಯ ಬೆಳೆಸಿದ ಪ್ರಕೃತಿ ಪ್ರೇಮಿ

ಸಾರಾಂಶ

70 ಎಕರೆ ಪೂರ್ವಜರ ಭೂಮಿಯಲ್ಲಿ ಅರಣ್ಯಾಭಿವೃದ್ಧಿ ಇಲ್ಲಿವೆ 32 ಜಾತಿಯ ಪಕ್ಷಿಗಳ ಉಪಸ್ಥಿತಿ ಈ ಅರಣ್ಯ ಭೂಮಿಯಲ್ಲಿದೆ ಐದು ಕೋಟಿಗೂ ಅಧಿಕ ಮರಗಳು

ಸೂರ್ಯಪೇಟ್ (ಮಾ.18): ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಪ್ರಕೃತಿ ಪ್ರೇಮಿಯೊಬ್ಬರು ತಮ್ಮ 70 ಎಕರೆ ಪೂರ್ವಜರ ಭೂಮಿಯಲ್ಲಿಅರಣ್ಯವನ್ನು ಅಭಿವೃದ್ಧಿಪಡಿಸಿದ್ದಾರೆ.  ದುಶಾರ್ಲಾ ಸತ್ಯನಾರಾಯಣ ಎಂಬ ಹೆಸರಿನ ಪ್ರಕೃತಿ ಪ್ರೇಮಿ ಬೆಳೆಸಿದ ಬೆಳೆಸಿದ ಅರಣ್ಯದಲ್ಲಿ 32 ಜಾತಿಯ ಪಕ್ಷಿಗಳ ಉಪಸ್ಥಿತಿಯನ್ನು ಪಕ್ಷಿ ವೀಕ್ಷಕರು ಖಚಿತಪಡಿಸಿದ್ದಾರೆ. ಈ ಅರಣ್ಯದಲ್ಲಿ ಡೆಕ್ಕನ್ ಬರ್ಡರ್ಸ್ ಹೆಚ್ಚು ವೈವಿಧ್ಯಮಯ ಸಸ್ಯಗಳನ್ನು ಪತ್ತೆಹಚ್ಚುವ ದೃಷ್ಟಿಯಿಂದ ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡಲು ಬಯಸಿದೆ. ಅಲ್ಲದೇ ಈ ಅರಣ್ಯವು ಅಂದಾಜು ಐದು ಕೋಟಿ ಮರಗಳನ್ನು ಹೊಂದಿದೆ. ಇವು ಹಣ್ಣುಗಳನ್ನು ವರ್ಷವಿಡೀ ಪಕ್ಷಿಗಳು, ಮಂಗಗಳು ಮತ್ತು ಇತರ ಪ್ರಾಣಿಗಳಿಗೆ ನೀಡುತ್ತವೆ.

ಈ ಅರಣ್ಯಕ್ಕೆ ಯಾವುದೇ ಗೇಟ್‌ ಆಗಲಿ ಬೇಲಿಗಳಾಗಲಿ ಇಲ್ಲ. ಇದರಲ್ಲಿ ಏಳು ಕೊಳ ಹಾಗೂ ಸಣ್ಣ ಕೆರೆಗಳಿದ್ದು, ಇವುಗಳನ್ನು ಸ್ವತಃ ನಿರ್ಮಿಸಲಾಗಿದೆ. ಅದರಲ್ಲಿ ಅತ್ಯಂತ ಗಮನಾರ್ಹವಾದವು ಕಮಲದ ಕೊಳವಾಗಿದೆ. ಈ ಭೂಮಿಯ ಮಾಲೀಕರಾಗಿರುವ ಸತ್ಯನಾರಾಯಣ ಅವರು ಇನ್ನು 10 ಕೆರೆಗಳನ್ನು ಈ ಅರಣ್ಯದೊಳಗೆ ಸ್ಥಾಪಿಸುವ ಗುರಿ ಹೊಂದಿದ್ದಾರೆ. ತಮಗೆ ಬಾಲ್ಯದಿಂದಲೇ ಪೃಕೃತಿ ಮೇಲೆ ಆಸಕ್ತಿ ಬಂತು ಎಂದು ಹೇಳುತ್ತಾರೆ ಸತ್ಯನಾರಾಯಣ್‌. ಸೂರ್ಯಪೇಟ್‌ ಜಿಲ್ಲೆಯ ರಾಘವಪುರಂ ಜಿಲ್ಲೆಯಲ್ಲಿ ತಮ್ಮ ಮಕ್ಕಳನ್ನು ಸಲಹುತ್ತಿರುವ ಸತ್ಯನಾರಾಯಣ್‌  ಈ ಭೂಮಿಯಲ್ಲಿ ನಿಮಗ್ಯಾವುದೇ ಪಾಲು ಇಲ್ಲ ಎಂಬುದನ್ನು ಮಕ್ಕಳಿಗೆ ಈಗಾಗಲೇ ತಿಳಿಸಿದ್ದಾರಂತೆ. ಈ ಅರಣ್ಯ ಎಂದಿಗೂ ಪ್ರಾಣಿಗಳಿಗೆ ಪಕ್ಷಿಗಳಿಗೆ ಮರಗಳಿಗೆ ಮೀಸಲು ಎಂದು ಅವರು ಹೇಳಿದ್ದಾರೆ. 

ಪರಿಸರಕ್ಕಾಗಿ ಉರಗ ರಕ್ಷಣೆ: ಮಂಗಳೂರಿನಲ್ಲೊಬ್ಬ ಪ್ರಕೃತಿ ಪ್ರೇಮಿ

ಅಲ್ಲದೇ ಈ ಭೂಮಿಯನ್ನು ಕೊಳ್ಳುವುದಾಗಿ ಅನೇಕರು ಭಾರಿ ಮೊತ್ತದ ಹಣ ನೀಡಿ ಖರೀದಿಸಲು ಮುಂದೆ ಬಂದಿದ್ದರು. ಆದರೆ ಹಣದಿಂದ ಅರಣ್ಯವನ್ನು ಖರೀದಿಸಲು ಆಗದು ಎಂದ ಸತ್ಯನಾರಾಯಣ್‌ ಈ ಭೂಮಿಯ ಸಣ್ಣ ಪಾಲನ್ನು ಕೂಡ ಮಾರುವ ಯೋಚನೆ ತಮಗಿಲ್ಲ ಎಂದರು. 68 ವರ್ಷ ಪ್ರಾಯದ ಸತ್ಯನಾರಾಯಣ ಅವರು 60 ದಶಕದಿಂದಲೂ ಈ ಪ್ರಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. 

ತಾವು ಏಳು ವರ್ಷದವರಿದ್ದಾಗ ಆದ ಘಟನೆಯೊಂದನ್ನು ನೆನೆಸಿಕೊಂಡ ಸತ್ಯನಾರಾಯಣ್, ವ್ಯಕ್ತಿಯೊಬ್ಬ ತನ್ನ ಜಾನುವಾರುಗಳನ್ನು ಕರೆದುಕೊಂಡು ಈ ಅರಣ್ಯದೊಳಗೆ ಬಂದ. ಬಳಿಕ ಆತ ಮರದ ಕೊಂಬೆಯೊಂದನ್ನು ಕಡಿದು ಪ್ರಾಣಿಗಳಿಗೆ ತಿನ್ನಲು ಆಹಾರವಾಗಿ ಅದನ್ನು ಹಾಕಿದ್ದ ಇದರಿಂದ ಸಿಟ್ಟಿಗೆದ್ದ ನಾನು ಆತನಿಗೆ ಥಳಿಸಿದೆ. ಈ ಪ್ರಕರಣ ನಮ್ಮ ತಂದೆಯವರ ಬಳಿ ಹೋಯಿತು. ಆಗ ತಂದೆ ಪ್ರಕೃತಿಯ ಜೊತೆ ಮಧ್ಯಪ್ರವೇಶಿಸಬೇಡಿ ನನ್ನ ಪುತ್ರ ಪರಿಸರದ ಸಂರಕ್ಷಕ ಎಂದು ಆತನಿಗೆ ಹೇಳಿದರು ಎಂದು ಸತ್ಯನಾರಾಯಣ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದರು. 

Uttara Kannada: ನಿವೃತ್ತ ಅರಣ್ಯಾಧಿಕಾರಿಯಿಂದ ನೂತನ ಶೈಲಿಯಲ್ಲಿ ಪರಿಸರ ಸಂರಕ್ಷಣೆ..!
 

ಹೈದರಾಬಾದ್‌ನ ಕೃಷಿ ವಿಶ್ವವಿದ್ಯಾಲಯದಿಂದ (Hyderabad Agriculture Univercity) ಕೃಷಿ ವಿಷಯದಲ್ಲಿ ಬಿಎಸ್ಸಿ  ಪದವಿ ಪಡೆದಿರುವ ಸತ್ಯನಾರಾಯಣ(sathyanarayana), ಬ್ಯಾಂಕ್ ಅಧಿಕಾರಿಯಾಗಿ (Bank Officer) ಸೇವೆ ಸಲ್ಲಿಸಿದವರು. ಆದರೆ ನಂತರ ನಲ್ಗೊಂಡ ಜಿಲ್ಲೆಯನ್ನು ದೀರ್ಘಕಾಲ ಕಾಡುತ್ತಿದ್ದ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುವ ಸಲುವಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.

ಇಲ್ಲಿ ಪರಿಸರವೂ ನೈಸರ್ಗಿಕವಾಗಿ ಬೆಳೆಯುತ್ತಿದೆ.  ಮರದ ಕೊಂಬೆಗಳನ್ನು ಇಲ್ಲಿ ಕತ್ತರಿಸಲಾಗುವುದಿಲ್ಲ. ಅವುಗಳಷ್ಟಕ್ಕೆ ತುಂಡಾಗಿ ಬಿದ್ದರೆ ಅವುಗಳನ್ನು ಹೆಕ್ಕುವುದಿಲ್ಲ. ಇಲ್ಲಿರುವ ಬೋರ್‌ವೆಲ್‌ಗಳು ತನ್ನಷ್ಟಕ್ಕೆ ಮರುಫೂರಣಗೊಂಡಿವೆ ಎಂದು ಅವರು ಹೇಳುತ್ತಾರೆ. ಇನ್ನು ಈ ಸ್ಥಳಕ್ಕೆ ವೀಕ್ಷಕರನ್ನು ಬಿಡಲು ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿದ ಅವರು ನೋಡುಗರ ಆಗಮನದಿಂದ ಇಲ್ಲಿನ ಜೀವ ವೈವಿಧ್ಯಕ್ಕೆ ಅಡಚಣೆಯಾಗುತ್ತದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು