ಪ್ಯಾಂಗೋಂಗ್‌ನಲ್ಲಿ ಸೇತುವೆ ಕಟ್ಟಿದ ಜಾಗ 60 ವರ್ಷದಿಂದ ಚೀನಾ ವಶದಲ್ಲಿದೆ: ಭಾರತ!

By Kannadaprabha NewsFirst Published Jan 7, 2022, 6:09 AM IST
Highlights

* ಪ್ಯಾಂಗೋಂಗ್‌ನಲ್ಲಿ ಭಾರತಕ್ಕೆ ಸೇರಿದ ಜಾಗದಲ್ಲಿ ಚೀನಾ ಹೊಸದಾಗಿ ಸೇತುವೆ ನಿರ್ಮಾಣ ಆರೋಪ

* ವರದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ 

ನವದೆಹಲಿ(ಜ.07): ಪೂರ್ವ ಲಡಾಖ್‌ನ ಪ್ಯಾಂಗೋಂಗ್‌ನಲ್ಲಿ ಸರೋವರದ ಬಳಿ ಭಾರತಕ್ಕೆ ಸೇರಿದ ಜಾಗದಲ್ಲಿ ಚೀನಾ ಹೊಸದಾಗಿ ಸೇತುವೆ ಕಟ್ಟಿದೆ ಎಂಬ ವರದಿಗಳನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಅಲ್ಲಗಳೆದಿದೆ.

ಚೀನಾ ಸೇತುವೆ ಕಟ್ಟಿರುವ ಜಾಗವು, ಕಳೆದ 60 ವರ್ಷಗಳಿಂದ ಚೀನಾ ಅಕ್ರಮವಾಗಿ ತನ್ನ ಬಳಿ ಇಟ್ಟುಕೊಂಡಿರುವ ಪ್ರದೇಶದಲ್ಲಿ ನಿರ್ಮಿಸಿದ್ದು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿದೆ. ಈ ಕುರಿತು ಗುರುವಾರ ಮಾಧ್ಯಮಗೊಳೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಅರುಣಾಚಲ ಪ್ರದೇಶದ ಕೆಲವು ಭಾಗಗಳನ್ನು ಚೀನಾ ಮರುನಾಮಕರಣ ಮಾಡಲು ಯತ್ನಿಸಿದ್ದು, ‘ಅಸಮರ್ಥನೀಯ ಪ್ರಾದೇಶಿಕ ಹಕ್ಕುಗಳನ್ನು ಪ್ರತಿಪಾದಿಸುವ ಹಾಸ್ಯಾಸ್ಪದ ಪ್ರಯತ್ನ

’. ನೆರೆಯ ರಾಷ್ಟ್ರ ಇಂತಹ ಸಂಚು ಮಾಡುವ ಬದಲಾಗಿ ಪೂರ್ವ ಲಡಾಖ್‌ ಪ್ರದೇಶದಲ್ಲಿದ್ದ ಘರ್ಷಣೆಯನ್ನು ತಗ್ಗಿಸಲು ಭಾರತದೊಂದಿಗೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ. ಅಲ್ಲದೇ ಪೂರ್ವ ಲಡಾಖ್‌ನಲ್ಲಿ ಸೇತುವೆ ನಿರ್ಮಾಣ ಕಾರ್ಯದ ಮೇಲೆ ಭಾರತೀಯ ಸೇನೆ ನಿಗಾವಹಿಸಿದೆ. ದೇಶದ ಸುರಕ್ಷತೆಗೆ ಬೇಕಾದ ಎಲ್ಲ ಕ್ರಮಗಳನ್ನು ಈ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

click me!