ಪಟನಾ(ಜೂ.05): ಭಾರತೀಯ ಪುರಾತತ್ವ ಇಲಾಖೆಯು ಪಟನಾದಲ್ಲಿ ಸುಮಾರು 2,000 ವರ್ಷಗಳಷ್ಟು ಪುರಾತನವಾದ ಇಟ್ಟಿಗೆ ಗೋಡೆಗಳ ಅವಶೇಷವನ್ನು ಪತ್ತೆಹಚ್ಚಿದ್ದು, ಇದು ಕುಶಾನರ ಕಾಲಕ್ಕೆ ಸೇರಿದ್ದಾಗಿರಬಹುದು ಎಂದು ಅಂದಾಜಿಸಿದೆ.
ಕೇಂದ್ರ ಸರ್ಕಾರದ ‘ಅಮೃತ ಸರೋವರ’ ಉಪಕ್ರಮದಡಿಯಲ್ಲಿ ಪುರಾತತ್ವ ಇಲಾಖೆಯು ಕುಮ್ರಾಹಾರ್‌ನಲ್ಲಿರುವ ಸಂರಕ್ಷಿತ ಕೊಳವನ್ನು ಪುನರುಜ್ಜೀವನಗೊಳಿಸುವ ಕಾರ್ಯ ಕೈಗೊಂಡಿತ್ತು. ಈ ವೇಳೆ ಕೊಳದೊಳಗಡೆ ಪುರಾತನ ಇಟ್ಟಿಗೆಯ ಗೋಡೆ ಕಂಡು ಬಂದಿದೆ ಎಂದು ಪಟನಾದ ಪುರಾತತ್ವ ಶಾಸ್ತ್ರಜ್ಞೆ ಗೌತಮಿ ಭಟ್ಟಾಚಾರ್ಯ ತಿಳಿಸಿದ್ದಾರೆ.
‘ಈ ಇಟ್ಟಿಗೆಯ ಗೋಡೆಯು ಕುಶಾನರ ಕಾಲಕ್ಕೆ ಸೇರಿದ್ದಾಗಿರಬಹುದು. ಕುಶಾನರು ಅಪ್ಘಾನಿಸ್ತಾನ ಸೇರಿದಂತೇ ಇಡೀ ಉತ್ತರ ಭಾರತದ ಭಾಗದಲ್ಲಿ ಕ್ರಿಸ್ತಶಕ 30 ರಿಂದ ಸುಮಾರು ಕ್ರಿ.ಶ 375ರವರೆಗೆ ಆಳ್ವಿಕೆ ನಡೆಸಿದ್ದರು. ಇಟ್ಟಿಗೆ ಗೋಡೆಯ ವಿವರವಾದ ಅಧ್ಯಯನದ ಬಳಿಕ ಇನ್ನಷ್ಟುಮಾಹಿತಿ ತಿಳಿಯಲಿದೆ’ ಎಂದಿದ್ದಾರೆ.
ಕುಮ್ರಾಹಾರ್‌ನಲ್ಲಿ ಈ ಹಿಂದೆ ಮೌರ್ಯರ ಕಾಲಕ್ಕೆ ಸೇರಿದ ಪುರಾತನ ಅವಶೇಷಗಳೂ ಪತ್ತೆಯಾಗಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ