
ಭುವನೇಶ್ವರ(ಜೂ.05): ಮಹತ್ವದ ವಿದ್ಯಮಾನವೊಂದರಲ್ಲಿ ತಮ್ಮ ಮಂತ್ರಿಮಂಡಲದ ಎಲ್ಲ 20 ಸಚಿವರ ರಾಜೀನಾಮೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ಪಡೆದಿದ್ದಾರೆ. ಈ ಮೂಲಕ ‘ಕಾಮರಾಜ್ ಮಾದರಿ’ ಸಂಪುಟ ಪುನಾರಚನೆಗೆ ಅವರು ಮುಂದಾಗಿದ್ದು, ಭಾನುವಾರ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಎಲ್ಲ ಸಚಿವರ ರಾಜೀನಾಮೆ ಪಡೆದು ಹೊಸ ಸಂಪುಟ ರಚಿಸುವುದೇ ‘ಕಾಮರಾಜ್ ಸೂತ್ರ’. 60ರ ದಶಕದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದ ಕೆ. ಕಾಮರಾಜ್ ಈ ಸೂತ್ರ ಜಾರಿಗೆ ತಂದಿದ್ದರು.
‘ಈಗ ಇದನ್ನೇ ಅನುಸರಿಸಲು ಪಟ್ನಾಯಕ್ ಮುಂದಾಗಿದ್ದಾರೆ. ಎಲ್ಲ ಸಚಿವರ ರಾಜೀನಾಮೆ ಪಡೆದು ನೂತನ ಮಂತ್ರಿಮಂಡಲ ರಚಿಸಲಿದ್ದಾರೆ. ಭಾನುವಾರ ಬೆಳಗ್ಗೆ 11.45ಕ್ಕೆ ನೂತನ ಸಚಿವರ ಪ್ರಮಾಣವಚನ ನಡೆಯಲಿದೆ’ ಎಂದು ಮೂಲಗಳು ಹೇಳಿವೆ.
2024ರ ಚುನಾವಣೆಗೆ ಪಕ್ಷ ಬಲಪಡಿಸಲು ಈ ತಂತ್ರವನ್ನು ಪಟ್ನಾಯಕ್ ಅನುಸರಿಸಿದ್ದಾರೆ ಎಂದು ಅವು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ