
ನವದೆಹಲಿ(ಜೂ.05): ಕಳೆದ ತಿಂಗಳು ಭಾರೀ ಉಷ್ಣ ಅಲೆಯ ಪ್ರಭಾವ ಒಳಗಾಗಿದ್ದ ರಾಜಸ್ಥಾನ, ಪೂರ್ವ ವಿದರ್ಭ, ದೆಹಲಿ, ಮಧ್ಯಪ್ರದೇಶದಲ್ಲಿ ಮತ್ತೆ ಉಷ್ಣ ಅಲೆ ಕಾಣಿಸಿಕೊಂಡಿದೆ. ಈ ರಾಜ್ಯಗಳ ಹಲವು ನಗರಗಳಲ್ಲಿ ಶುಕ್ರವಾರ ಸರಾಸರಿ 45 ಡಿ.ಸೆ.ಉಷ್ಣಾಂಶ ದಾಖಲಾಗಿದೆ. ಮಹಾರಾಷ್ಟ್ರದ ಪೂರ್ವ ವಿದರ್ಭದಲ್ಲಿರುವ ಚಂದ್ರಾಪುರದಲ್ಲಿ ದೇಶದಲ್ಲೇ ಅತಿ ಹೆಚ್ಚು 46.4 ಡಿಗ್ರಿ ತಾಪಮಾನ ದಾಖಲಾಗಿದೆ.
ಈ ಹಿಂದೆ ಐಎಂಡಿ, ‘ಮುಂದಿನ ದಿನಗಳಲ್ಲಿ ಮತ್ತೆ ಉಷ್ಣ ಅಲೆಯಾಗುವ ಸಾಧ್ಯತೆಯಿಲ್ಲ ಎಂದು ಅಂದಾಜಿಸಿತ್ತು. ಆದರೆ ಇದು ಸುಳ್ಳಾಗಿದ್ದು, ಜೂ.1 ರಿಂದಲೂ ಉತ್ತರ ಹಾಗೂ ಮಧ್ಯಭಾರತದ ದೆಹಲಿ-ಎನ್‌ಸಿಆರ್, ವಿದರ್ಭ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಸುಮಾರು 44-45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಜೂ. 5-6ರವರೆಗೂ ಉಷ್ಣ ಅಲೆಯು ಮುಂದುವರೆಯಲಿದೆ ಎಂದು ಐಎಂಡಿ ತಿಳಿಸಿದೆ.
ದಕ್ಷಿಣದಲ್ಲಿ ಭಾರೀ ಮಳೆ:
ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡು, ಕೇರಳ, ಮಾಹೆ ಹಾಗೂ ಲಕ್ಷದ್ವೀಪದಲ್ಲಿ ಗುಡುಗು ಮಿಂಚಿನ ಸಹಿತ ಭಾರೀ ಮಳೆಯಾಗಲಿದೆ. ಆಲ್ಲದೇ ಉತ್ತರ ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್‌ನಲ್ಲಿ ಮುಂದಿನ 5 ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಯಲ್ಲೋ ಅಲರ್ಚ್ ಘೋಷಿಸಲಾಗಿದೆ.
ಮುಂಗಾರು ಆರಂಭಕ್ಕೂ ಮುನ್ನವೇ ಸಾಂಕ್ರಾಮಿಕ ರೋಗಗಳ ಆತಂಕ
ಕೊರೋನಾ ಮಹಾಮಾರಿ ತಣ್ಣಗಾಗಿರುವುದು ಆತಂಕ ದೂರ ಮಾಡಿದ್ದರೆ, ಡೆಂಘೀ, ಚಿಕೂನ್‌ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚುತ್ತಿದೆ. ಇತ್ತೀಚೆಗೆ ಸುರಿದ ಮಳೆಯ ಹಿನ್ನೆಲೆಯಲ್ಲಿ ಈ ಸಲ ಮುಂಗಾರು ಆರಂಭಕ್ಕೂ ಮುನ್ನವೇ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ.
ಕೆಲವು ದಿನಗಳ ಹಿಂದೆ ಸುರಿದ ನಿರಂತರ ಮಳೆಯಿಂದ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ 25 ಡೆಂಘಿಘೀ ಪ್ರಕರಣ ದೃಢಪಟ್ಟಿದ್ದು, ಚಿಕೂನ್ ಗುನ್ಯಾ ಕೂಡ ವ್ಯಾಪಿಸುತ್ತಿದೆ. ಮಕ್ಕಳು, ವೃದ್ಧರು ಶೀತ, ನೆಗಡಿ, ಜ್ವರದಿಂದ ಬಳಲುತ್ತಿದ್ದು, ಚಿಕೂನ್ ಗುನ್ಯಾ, ಡೆಂಘೀ ಜ್ವರದ ಆತಂಕ ಹೆಚ್ಚುತ್ತಿದೆ.
ಸಾಮಾನ್ಯವಾಗಿ ಮುಂಗಾರು ಆರಂಭವಾದ ಬಳಿಕ ಜನರ ಆರೋಗ್ಯವನ್ನು ಕಾಡುವ ಸಾಂಕ್ರಾಮಿಕ ರೋಗಗಳು ಈಗಲೇ ಹೆಚ್ಚುತ್ತಿದೆ. ಎರಡು ವರ್ಷ ಬಿಡದಂತೆ ಕಾಡಿದ್ದ ಕೊರೋನಾ ಈ ಸಲ ದೂರವಾಗಿರುವುದು ನೆಮ್ಮದಿ ತರಿಸಿದೆ. ಹಿಂದಿನ ಎರಡು ವರ್ಷಗಳ ಕಾಲ ಕೊರೋನಾ ವೇಳೆ ಡೆಂಘೀ, ಚಿಕೂನ್‌ಗುನ್ಯಾ ಪ್ರಕರಣಗಳು ಜಿಲ್ಲೆಯಲ್ಲಿ ಕಡಿಮೆಯಿದ್ದವು. ಈ ಸಲ ಅವಧಿಗಿಂತ ಮುನ್ನವೇ ಸಾಂಕ್ರಾಮಿಕ ರೋಗಗಳ ಕಾಟ ಹೆಚ್ಚುತ್ತಿದೆ. ಗ್ರಾಮೀಣ ಭಾಗದಲ್ಲಿ ಸೊಳ್ಳೆಯಿಂದ ಬರುವ ರೋಗಗಳು ಹೆಚ್ಚುತ್ತಿವೆ. ಇದಲ್ಲದೇ ಅತಿಸಾರ, ವಿಷಮಶೀತ ಜ್ವರ, ಕರುಳುಬೇನೆ, ಮಲೇರಿಯಾ ರೋಗಗಳೂ ವ್ಯಾಪಿಸುತ್ತಿವೆ.
25 ಡೆಂಘೀ ಪ್ರಕರಣ ಪತ್ತೆ:
ಜೂನ್ ಮತ್ತು ಜುಲೈ ತಿಂಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದು ಸಾಮಾನ್ಯ. ಈ ಸಲ ಮುಂಚಿತವಾಗಿಯೇ ಅನೇಕರು ಶಂಕಿತ ಡೆಂಘಿಘಿಘಿಘೀ ಜ್ವರದಿಂದ ಬಳಲುತ್ತಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 25 ಡೆಂಘಿಘಿಘಿಘೀ ಪ್ರಕರಣ ದೃಢಪಟ್ಟಿದೆ. ನೂರಕ್ಕೂ ಹೆಚ್ಚು ಶಂಕಿತ ಡೆಂಘಿಘಿಘಿಘೀ ಪ್ರಕರಣಗಳಿದ್ದು, ಲ್ಯಾಬ್ ವರದಿ ಬರಬೇಕಿದೆ.
ಡೆಂಘಿಘಿಘಿಘೀ ಹತೋಟಿಗೆ ಆರೋಗ್ಯ ಇಲಾಖೆ ವಹಿಸುತ್ತಿರುವ ಮುನ್ನೆಚ್ಚರಿಕೆ ಕ್ರಮ ಸಾಲುತ್ತಿಲ್ಲ ಎಂಬ ಆರೋಪವಿದೆ. ಜಿಲ್ಲಾದ್ಯಂತ ಶಂಕಿತ ಜ್ವರ ವ್ಯಾಪಿಸುತ್ತಿದ್ದು, ಹಲವು ಗ್ರಾಮಗಳಲ್ಲಿ ತೀವ್ರಗೊಂಡಿದೆ. ತಕ್ಷಣ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಸಿಬ್ಬಂದಿ ಗಮನ ಹರಿಸುತ್ತಿರುವ ರೀತಿಯಲ್ಲೇ ಇನ್ನಿತರ ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಆದ್ಯತೆ ನೀಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ