ರಾಹುಲ್‌ ಗಾಂಧಿ ಜಾತಿ ಕೆದಕಿ ವಿವಾದ ಸೃಷ್ಟಿಸಿದ ಅನುರಾಗ್‌ ಠಾಕೂರ್‌, ಇದು ನಿಂದನೆ ಎಂದ ಕಾಂಗ್ರೆಸ್‌ ನಾಯಕ!

By Santosh Naik  |  First Published Jul 30, 2024, 5:35 PM IST

ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾತಿನ ಗುದ್ದಾಟ ನಡೆಸಿದ್ದು, ಲೋಕಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು.


ನವದೆಹಲಿ (ಜು.30):  ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಕ್ಸಮರ ನಡೆಸಿದರು. ಇದು ಲೋಕಸಭೆಯಲ್ಲಿ ಮಂಗಳವಾರ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಕೋಲಾಹಲಕ್ಕೆ ಕಾರಣವಾಯಿತು. ತಮ್ಮ ಜಾತಿಯೇ ಗೊತ್ತಿಲ್ಲದ ವ್ಯಕ್ತಿಗಳು ಜಾತಿ ಗಣತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅನುರಾಗ್‌ ಠಾಕೂರ್‌ ಹೇಳಿದ ಮಾತು ವಿವಾದಕ್ಕೆ ಕಾರಣವಾಯಿತು. ‘ಜಾತಿ’ ಮಾತು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು, ಠಾಕೂರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ರಾಹುಲ್ ಗಾಂಧಿ, “ನೀವು ನನ್ನನ್ನು ಎಷ್ಟು ಬೇಕಾದರೂ ಅವಮಾನಿಸಬಹುದು, ಆದರೆ ನಾವು ಸಂಸತ್ತಿನಲ್ಲಿ ಜಾತಿ ಗಣತಿ ಮಸೂದೆಯನ್ನು ಅಂಗೀಕರಿಸುತ್ತೇವೆ ಎಂಬುದನ್ನು ನೀವು ಮರೆಯಬಾರದು' ಎಂದು ಹೇಳಿದರು.

ಲೋಕಸಭೆ ಕಲಾಪಗಳ ಅಧ್ಯಕ್ಷತೆ ವಹಿಸಿದ್ದ ಜಗದಾಂಬಿಕಾ ಪಾಲ್ ಅವರು ಸದನವನ್ನು ಸುವ್ಯವಸ್ಥೆಗೆ ತರಲು ಪ್ರಯತ್ನಿಸಿದರು. ಆದರೆ, ಸಂಸದರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದರು. ಈ ಗದ್ದಲದ ನಡುವೆ ಮತ್ತೆ ಮಾತನಾಡಿದ ರಾಹುಲ್ ಗಾಂಧಿ, "ಈ ದೇಶದಲ್ಲಿ ಯಾರೇ ದೀನದಲಿತರ ಪರವಾಗಿ ಮಾತನಾಡುತ್ತಾರೆ, ಅವರಿಗಾಗಿ ಹೋರಾಡುತ್ತಾರೆ, ಅವರು ಇತರರಿಂದ ನಿಂದನೆಗಳನ್ನು ತೆಗೆದುಕೊಳ್ಳಬೇಕು, ನಾನು ಎಲ್ಲಾ ನಿಂದನೆಗಳನ್ನು ಸಂತೋಷದಿಂದ ತೆಗೆದುಕೊಳ್ಳುತ್ತೇನೆ. ಮಹಾಭಾರತದಲ್ಲಿ ಅರ್ಜುನನಂತೆ ನಾನು ಮೀನಿನ ಕಣ್ಣನ್ನು ಮಾತ್ರವೇ ನೋಡಬಲ್ಲದೆ. ನಾವು ಅಧಿಕಾರಕ್ಕೆ ಬಂದರೆ ಜಾತಿ ಗಣತಿ ಮಾಡುತ್ತೇವೆ ಅಷ್ಟೇ. ಅದರ ಬಗ್ಗೆ ಯಾವುದೇ ಗೊಂದಲಿಲ್ಲ. ನೀವು ನನ್ನನ್ನು ನಿಮಗೆ ಎಷ್ಟು ಇಷ್ಟವಾಗುತ್ತದೆಯೋ ಅಲ್ಲಿಯವರೆಗೂ ನಿಂದನೆ ಮಾಡಬಹುದು' ಎಂದು ಹೇಳಿದ್ದಾರೆ.

Paris Olympics 2024: ಬ್ಯಾಡ್ಮಿಂಟನ್ ಕ್ವಾರ್ಟರ್‌ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದ ಚಿರಾಗ್-ಸಾತ್ವಿಕ್ ಜೋಡಿ..!

ಅನುರಾಗ್ ಠಾಕೂರ್ ಅವರನ್ನು ನಿಂದಿಸಿದ್ದಾರೆ ಮತ್ತು ಅವಮಾನಿಸಿದ್ದಾರೆ ಎಂದು ರಾಹುಲ್‌ ಗಾಂಧಿ ಹೇಳೀದರು.  ಆದರೆ "ನಾನು ಅವರಿಂದ ಕ್ಷಮೆಯನ್ನು ಬಯಸುವುದಿಲ್ಲ, ನನಗೆ ಅದರ ಅಗತ್ಯವಿಲ್ಲ" ಎಂದು ಸೇರಿಸಿದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಕೂಡ ಧ್ವನಿಗೂಡಿಸಿ, "ನೀವು ಯಾರೊಬ್ಬರ ಜಾತಿಯನ್ನು ಹೇಗೆ ಕೇಳುತ್ತೀರಿ? ನೀವು ಯಾರ ಜಾತಿಯನ್ನು ಕೇಳಲು ಸಾಧ್ಯವಿಲ್ಲ" ಎಂದು ಪ್ರಶ್ನಿಸಿದರು.

Latest Videos

undefined

 

ರಾಹುಲ್ ಗಾಂಧಿ ಹಲ್ವಾ ಹೇಳಿಕೆಗೆ ಹಣೆ ಚಚ್ಚಿಕೊಂಡ ನಿರ್ಮಲಾ ಸೀತಾರಾಮನ್

click me!