8 ವರ್ಷ ಆದ್ರೂ ಮೋದಿ ಜನಪ್ರಿಯತೆ ಕುಸಿದಿಲ್ಲ: ನಮೋ ವಿರುದ್ಧ ಆಡಳಿತ ವಿರೋಧಿ ಅಲೆ ಕಮ್ಮಿ, ಸಮೀಕ್ಷೆ

By Kannadaprabha News  |  First Published Oct 19, 2022, 1:30 AM IST

ಸುದ್ದಿ ಸಂಸ್ಥೆ  ‘ಐಎಎನ್‌ಎಸ್‌’ ಹಾಗೂ ‘ಸಿ-ವೋಟರ್‌’ ನಡೆಸಿದ ಸಮೀಕ್ಷೆಯಲ್ಲಿ, ‘ಮೋದಿ ಬಗ್ಗೆ ಅತೃಪ್ತಿ ಪ್ರಮಾಣ ತುಂಬಾ ಕಡಿಮೆ ಇದೆ. 


ನವದೆಹಲಿ(ಅ.19):  ‘ಅಧಿಕಾರಕ್ಕೆ ಬಂದು 8 ವರ್ಷವಾದರೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಅತೃಪ್ತಿ ಇಲ್ಲ. ಬಹುತೇಕ ಜನರು ತೃಪ್ತಿ ಹೊಂದಿದ್ದಾರೆ. ಅವರ ವಿರುದ್ಧ ಆಡಳಿತ ವಿರೋಧಿ ಅಲೆ ತುಂಬಾ ಕಡಿಮೆ’ ಎಂದು ಸಮೀಕ್ಷೆಯೊಂದರಲ್ಲಿ ವ್ಯಕ್ತವಾಗಿದೆ. ಸುದ್ದಿಸಂಸ್ಥೆ  ‘ಐಎಎನ್‌ಎಸ್‌’ ಹಾಗೂ ‘ಸಿ-ವೋಟರ್‌’ ನಡೆಸಿದ ಸಮೀಕ್ಷೆಯಲ್ಲಿ, ‘ಮೋದಿ ಬಗ್ಗೆ ಅತೃಪ್ತಿ ಪ್ರಮಾಣ ತುಂಬಾ ಕಡಿಮೆ ಇದೆ. ಅತಿ ಕನಿಷ್ಠ ಆಡಳಿತ ವಿರೋಧಿ ಅಲೆ ಛತ್ತೀಸ್‌ಗಢದಲ್ಲಿ (ಶೇ.6.7), ದಿಲ್ಲಿಯಲ್ಲಿ (ಶೇ.8.6) ಹಾಗೂ ಪ.ಬಂಗಾಳದಲ್ಲಿ (ಶೇ.9.8) ಇದೆ. ಇಲ್ಲಿ ಎಲ್ಲೂ ಬಿಜೆಪಿ ಸರ್ಕಾರಗಳು ಇಲ್ಲ. ಆದರೂ ಜನರಲ್ಲಿ ಮೋದಿ ಬಗ್ಗೆ ತೃಪ್ತಿ ಇದೆ’ ಎಂದು ತಿಳಿದುಬಂದಿದೆ. ಆದರೆ, ಬಿಜೆಪಿ ಆಡಳಿತ ರಾಜ್ಯಗಳಾದ ಗೋವಾ (ಶೇ.35.8), ಜಾರ್ಖಂಡ್‌ (ಶೇ.25.9) ಹಾಗೂ ಕರ್ನಾಟಕದಲ್ಲಿ (ಶೇ.25.6) ಮೋದಿ ಬಗ್ಗೆ ಅತೃಪ್ತಿ ಪ್ರಮಾಣ ಹೆಚ್ಚಿದೆ ಎಂದು ಸಮೀಕ್ಷೆ ವಿವರಿಸಿದೆ.

ಶಾಸಕರಿಂಗಿಂತ ಸಿಎಂಗಳ ವಿರುದ್ಧ ಹೆಚ್ಚು ಆಕ್ರೋಶ:

Tap to resize

Latest Videos

ಇದೇ ವೇಳೆ ಶಾಸಕರ ವಿರುದ್ಧ ಆಕ್ರೋಶ ಕಡಿಮೆ. ಮುಖ್ಯಮಂತ್ರಿಗಳ ವಿರುದ್ಧ ಆಕ್ರೋಶ ಹೆಚ್ಚು ಎಂದು ಸಮೀಕ್ಷೆ ವಿವರಿಸಿದೆ. ಮುಖ್ಯಮಂತ್ರಿಗಳ ವಿರುದ್ಧ ಸರಾಸರಿ ಶೇ.24.6ರಷ್ಟುಜನರು ಅತೃಪ್ತಿ ಹೊಂದಿದ್ದರೆ, ಶಾಸಕರ ಬಗ್ಗೆ ಸರಾಸರಿ ಶೇ.11.2ರಷ್ಟುಜನ ಮಾತ್ರ ಅತೃಪ್ತಿ ಹೊಂದಿದ್ದಾರೆ.

Gujarat Elections 2022: ದೊಡ್ಡ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಸಮೀಕ್ಷೆ

ಶಾಸಕರ ಬಗ್ಗೆ ಕೇರಳದಲ್ಲಿ ಅತೃಪ್ತಿ ಕಮ್ಮಿ:

‘ಶಾಸಕರ ಬಗ್ಗೆ ಜನರು ಎಲ್ಲಿ ಹೆಚ್ಚು ಅತೃಪ್ತಿ ಹೊಂದಿದ್ದಾರೆ?’ ಎಂಬ ಪ್ರಶ್ನೆ ಮುಂದಿಟ್ಟು ಸಮೀಕ್ಷೆ ನಡೆಸಿದಾಗ, ‘ಕೇರಳದಲ್ಲಿ ಅತಿ ಕಮ್ಮಿ’ ಎಂಬ ಉತ್ತರ ಬಂದಿದೆ. ಕೇರಳದಲಿ ಶೇ.2.3ರಷ್ಟುಜನರು ಮಾತ್ರ ಶಾಸಕರ ಬಗ್ಗೆ ಅತೃಪ್ತಿ ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ (ಶೇ.4.7) ಹಾಗೂ ಗುಜರಾತ್‌ (ಶೇ.5.7) ಇವೆ. ಆದರೆ ಹಿಮಾಚಲ ಪ್ರದೇಶದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಮಾಣದ (ಶೇ.33.2) ಜನಾಕ್ರೋಶ ಶಾಸಕರ ವಿರುದ್ಧ ಇದೆ. ನಂತರದ ಸ್ಥಾನದಲ್ಲಿ ತೆಲಂಗಾಣ (ಶೇ.32.9), ಛತ್ತೀಸ್‌ಗಢ (ಶೇ.30.8) ಇವೆ.

ಸಂಸದರ ಪೈಕಿ ಉತ್ತರಾಖಂಡದಲ್ಲಿ ಅತಿ ಕಮ್ಮಿ (ಶೇ.5) ಜನಾಕ್ರೋಶ ಇದೆ. ನಂತರದ ಸ್ಥಾನದಲ್ಲಿ ಬಂಗಾಳ (ಶೇ.5.1) ಹಾಗೂ ಕೇರಳ (ಶೇ.5.5) ಇವೆ. ದಿಲ್ಲಿಯಲ್ಲಿ ಅತಿ ಹೆಚ್ಚು (ಶೇ.21.1) ಜನಾಕ್ರೋಶ ಸಂಸದರ ವಿರುದ್ಧ ವ್ಯಕ್ತವಾಗಿದೆ.
 

click me!