ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿದ್ದಾಗಲೇ ಗುಂಡೇಟಿಗೆ ಬಲಿ! ಯಾರು ಈ ಪರ್ಮಿಂದರ್ ಸಿಂಗ್? ಕೊಂದಿದ್ದೇಕೆ?

Published : Oct 13, 2026, 01:11 PM ISTUpdated : Oct 13, 2026, 01:25 PM IST
Parminder Singh Jotta shot dead

ಸಾರಾಂಶ

ಪಂಜಾಬ್‌ನ ಮಾನ್ಸಾದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುತ್ತಿದ್ದ ಪ್ರಮುಖ ಕಾರ್ಯಕರ್ತ ಪರ್ಮಿಂದರ್ ಸಿಂಗ್ ಜೊಟ್ಟಾ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಫೇಸ್‌ಬುಕ್ ಲೈವ್ ಮಾಡುತ್ತಿದ್ದಾಗಲೇ ಈ ಆಘಾತಕಾರಿ ಘಟನೆ ನಡೆದಿದ್ದು, ಅವರ ಸಹಚರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪಂಜಾಬ್: ಮಾದಕ ದ್ರವ್ಯ ಸೇವನೆ, ಮಾರಾಟದ ವಿರುದ್ಧ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಮಾನ್ಸಾದ ಪ್ರಮುಖ ಕಾರ್ಯಕರ್ತ ಪರ್ಮಿಂದರ್ ಸಿಂಗ್ ಜೊಟ್ಟಾ ಅವರನ್ನ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಪಂಜಾಬ್‌ನಲ್ಲಿ ನಡೆದಿದ್ದು, ಈ ಘಟನೆಯಿಂದ ಪಂಜಾಬ್ ಮತ್ತೊಮ್ಮೆ ಬೆಚ್ಚಿಬಿದ್ದಿದೆ.

ಪರ್ಮಿಂದರ್ ಸಿಂಗ್ ಸಹಚರರು ಕೂಡ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ?

ಯಾರು ಪರ್ಮಿಂದರ್ ಸಿಂಗ್ ಜೊಟ್ಟಾ?

ಪಂಜಾಬ್‌ನಲ್ಲಿ ಮಾದಕ ವಸ್ತುಗಳ ಮಾರಾಟ, ಸೇವನೆ ಮೀತಿ ಮೀರಿದ್ದು ಇದರ ವಿರುದ್ಧ ಹಲವು ವರ್ಷಗಳಿಂದ ಪರ್ಮಿಂದರ್ ಸಿಂಗ್ ಹೋರಾಟ ನಡೆಸುತ್ತಿದ್ದಾರೆ. ಮಾದಕ ದ್ರವ್ಯದ ದುರುಪಯೋಗ, ಮಾದಕ ದ್ರವ್ಯಗಳ ಮಾರಾಟ ಮಾಡುವ ಮೆಡಿಕಲ್ ಅಂಗಡಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದರಿಂದ ಇದರಿಂದ ಡ್ರಗ್ಸ್ ಮಾಫಿಯಾಗಳ ಕೆಂಗಣ್ಣಿಗೆ ಗುರಿಯಾಗಿದ್ದ ಪರ್ಮಿಂದರ್ ಸಿಂಗ್. ಆದರೆ ಇಂದು ಮಂಗಳವಾರ (ಅಕ್ಟೋಬರ್ 13) ಬೆಳ್ಳಂಬ ಬೆಳಗ್ಗೆ ಔಷಧ ಅಂಗಡಿಯಿಂದ ಮಾದಕ ದ್ರವ್ಯಗಳನ್ನು ಖರೀದಿಸಿದ್ದ ಎಂಬ ವ್ಯಕ್ತಿಯೊಬ್ಬ ಗುಂಡಿಕ್ಕಿ ಹ ತ್ಯೆ ಮಾಡಿದ್ದಾನೆಂದು ವರದಿಯಾಗಿದೆ..

ಫೇಸ್‌ಬುಕ್ ಲೈವ್ ಮಾಡುವಾಗಲೇ ಗುಂಡೇಟು!

ಮಾದಕ ದ್ರವ್ಯಗಳ ಮಾರಾಟ, ಸೇವನೆ ವಿರುದ್ಧ ಸಮರವನ್ನೇ ಸಾರಿದ್ದ ಪರ್ಮಿಂದರ್ ಸಿಂಗ್ ಜೋಟ್ಟ ಅವರು ಇಂದು ಫಾರ್ಮಸಿಗೆ ಹೋದಾಗ ತಮ್ಮ ಫೇಸ್‌ಬುಕ್ ಲೈವ್‌ನಲ್ಲಿ ಸ್ಟ್ರೀಮ್‌ನಲ್ಲಿದ್ದರು. ಇದೇ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದ್ದಾರೆ ಎಂದು ವರದಿಯಾಗಿದೆ.

ಪರ್ಮಿಂದರ್ ಸಿಂಗ್ ಸಾವಿಗೆ ನಾಯಕರು ಕಂಬನಿ

ಪರ್ಮಿಂದರ್ ಸಿಂಗ್ ಅವರ ನಿಧನಕ್ಕೆ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ದುಃಖ ವ್ಯಕ್ತಪಡಿಸಿದ್ದಾರೆ. ಹಾಡುಹಗಲೇ ಪರ್ಮಿಂದರ್ ಅವರನ್ನ ಹ ತ್ಯೆ ಮಾಡಲಾಗಿದೆ. ಪಂಜಾಬ್‌ನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಡ್ರಗ್ಸ್ ಕ್ರಿಮಿನಲ್‌ಗಳ ಚಟುವಟಿಕೆ ಹೆಚ್ಚಿದೆ. ಪರ್ಮಿಂದರ್ ಡ್ರಗ್ಸ್ ವಿರುದ್ಧ ಸಮರವನ್ನೇ ಸಾರಿದ್ದರು ಆದರೆ ಅವರ ಹೋರಾಟಗಳಿಗೆ ಪಂಜಾಬ್ ಸರ್ಕಾರ ಎಂದಿಗೂ ಬೆಂಬಲ ನೀಡಲಿಲ್ಲ. ಇಂದು ಪರ್ಮಿಂದರ್ ಹ ತ್ಯೆಯಾಗಿದೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಸರ್ಕಾರದ ಗಂಭೀರ ವೈಫಲ್ಯ ಬಹಿರಂಗಪಡಿಸಿದೆ' ಎಂದು ಎಕ್ಸ್‌ ಪೋಸ್ಟ್ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ ಗಡಿಯಲ್ಲಿ ತಾವೇ ಇಟ್ಟ ಬಾಂಬ್​ನಿಂದ ಜೀವ ಕಳಕೊಂಡ ಉಗ್ರರು? ನುಸುಳಲು ಹೋಗಿ ಸತ್ತ ಪಾಕಿಗಳು
ಆರ್ಡರ್ ಮಾಡದಿದ್ದರೂ ಮನೆಗೆ ಬರುತ್ತಿದ್ದ ಟಿವಿ, ಫ್ರಿಡ್ಜ್‌ಗಳು; ಕೊನೆಗೆ ಮನೆ ಬಿಟ್ಟ ಇನ್‌ಫ್ಲುಯೆನ್ಸರ್!