
ನವದೆಹಲಿ: ನೀವು ಮೊಬೈಲ್‌ನಲ್ಲಿ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೋಗಳನ್ನು ವೀಕ್ಷಣೆ ಮಾಡಿದ್ರೆ ನಿಮ್ಮ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತದೆ. ಮಕ್ಕಳ ಅಶ್ಲೀಲ ವಿಡಿಯೋಗಳು ನೋಡಿರುವ ಆರೋಪ ಸಾಬೀತಾದ್ರೆ ದೀರ್ಘಕಾಲ ಜೈಲು ಸೇರಬೇಕಾಗುತ್ತದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿ, ಮದ್ರಾಸ್ ಹೈಕೋರ್ಟ್ ಆರ್ಡರ್‌ನ್ನು ವಜಾಗೊಳಿಸಿದೆ. ಮದ್ರಾಸ್ ಹೈಕೋರ್ಟ್ ಆರ್ಡರ್‌ನಲ್ಲಿ ಖಾಸಗಿಯಾಗಿ ಚೈಲ್ಡ್ ಪೋರ್ನೊಗ್ರಾಫಿ ವೀಕ್ಷಣೆ ಮತ್ತು ವಿಡಿಯೋ ಡೌನ್‌ಲೋಡ್ ಮಾಡಿಕೊಳ್ಳುವುದು ಪೋಕ್ಸೋ ಕಾಯ್ದೆಯಡಿ ಬರಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಡಿವೈ ಚಂದ್ರಚೂಡ ನೇತೃತ್ವದ ಪೀಠ, ಫೋನ್‌ನಲ್ಲಿ ಯಾವುದೇ ತರಹದ ಮಕ್ಕಳ ಪೋರ್ನೊಗ್ರಾಫಿ ವಿಡಿಯೋ ಇರಿಸಿಕೊಳ್ಳುವುದು ಪೋಕ್ಸೋಯಡಿ ಅಪರಾಧವೆನಿಸುತ್ತದೆ ಎಂದು ಹೇಳಿದೆ.
ಲೈವ್ ಲಾ ವರದಿ ಪ್ರಕಾರ, ಚೀಫ್ ಜಸ್ಟಿಸ್ ಚಂದ್ರಚೂಡ ನೇತೃತ್ವದ ಸುಪ್ರೀಂಕೋರ್ಟ್ ಪೀಠ, ಆರೋಪಿಯ ವಿರುದ್ಧದ ಅಪರಾಧ ಪ್ರಕರಣಗಳನ್ನು ರದ್ದುಪಡಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಟೀಕಿಸಿದೆ. POCSO ಕಾಯ್ದೆಯಲ್ಲಿನ 'ಮಕ್ಕಳ ಅಶ್ಲೀಲತೆ' ಎಂಬ ಪದವನ್ನು ಮಕ್ಕಳ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ವಸ್ತು' ಎಂದು ಬದಲಿಸಲು ಪ್ರಸ್ತಾಪಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಮಕ್ಕಳ ಅಶ್ಲೀಲ ಚಿತ್ರ/ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಹೊಂದುವುದು ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮದ್ರಾಸ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದೆ.
ಹಳಿ ಮೇಲೆ ಫಾಗ್ ಡಿಟೋನೇಟರ್ ಸ್ಫೋಟ, ಸಿಲಿಂಡರ್ ಪತ್ತೆ; ಕರ್ನಾಟಕದತ್ತ ಬರುತ್ತಿದ್ದ ಯೋಧರ ರೈಲು ಪಾರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ