ಆಗಿದ್ದು ನೆಗಡಿ, ಕೊರೋನಾ ವೈರಸ್ ಎಂದು ಆತ್ಮಹತ್ಯೆಗೆ ಶರಣಾದ!

By Suvarna NewsFirst Published Feb 12, 2020, 2:37 PM IST
Highlights

ಕೊರೋನಾ ವೈರಸ್ ಹಾವಳಿಗೆ ವಿಶ್ವವೇ ಕಂಗಾಲು| ಭಾರತದಲ್ಲಿ ಮೂವರಿಗೆ ಸೋಂಕು| ನೆಗಡಿಯಾಗಿದ್ದಕ್ಕೆ ಕೊರೋನಾ ವೈರಸ್ ತಗುಲಿದೆ ಎಂದು ಆತ್ಮಹತ್ಯೆಗೆ ಶರಣಾದ ಆಂಧ್ರದ ವ್ಯಕ್ತಿ

ಮರಾವತಿ[ಫೆ.12]: ಆಂಧ್ರಪ್ರದೇಶದ ಚಿತ್ತೂರ್ ನಲ್ಲಿ ವ್ಯಕ್ತಿಯೊಬ್ಬ ತನಗೆ ಮಾರಕ ಕೊರೋನಾ ವೈರಸ್ ಸೋಂಕು ತಗುಲಿದೆ ಎಂಬ ಅನುಮಾನದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಸ್ತುತ ಈ ಭೀಕರ ಕೊರೋನಾ ವೈರಸ್ ನಿಂದ ಚೀನಾದಲ್ಲಿ 11 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ವಿಶ್ವದ 20 ದೇಶಗಳಿಗೆ ವ್ಯಾಪಿಸಿದೆ. 

ಏನಿದು ಘಟನೆ

ಕೊರೋನಾ ವೈರಸ್ ಕುರಿತು ಹಬ್ಬುತ್ತಿರುವ ವದಂತಿಗಳು ವಿಶ್ವದಾದ್ಯಂತ ಜನರನ್ನು ಕಂಗಾಲು ಮಾಡಿದೆ. ಹೀಗಿರುವಾಗ ಆಂಧ್ರದ ಬಾಲಕೃಷ್ಣ ಎಂಬವರು ಇದೇ ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೌದು ಬಾಲಕೃಷ್ಣರಿಗೆ ನೆಗಡಿಯಾಗಿದ್ದು, ಪರೀಕ್ಷೆಗೆಂದು ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅವರನ್ನು ಪರೀಕ್ಷಿಸಿದ ವೈದ್ಯರು ಮಾಸ್ಕ್ ಧರಿಸುವಂತೆ ಸೂಚಿಸಿದ್ದಾರೆ. ಹೀಗಿರುವಾಗ ತಮಗೆ ಕೊರೋನಾ ವೈರಸ್ ಸೋಂಕು ತಗುಲಿರಬಹುದು ಎಂಬ ಭೀತಿ ಅವರನ್ನಾವರಿಸಿದೆ. ಕೂಡಲೇ ಮನೆಗೆ ತೆರಳಿದ ಅವರು ಕುಟುಂಬ ಸದಸ್ಯರಿಗೆ ಇದು ಹರಡಬಾರದೆಂಬ ನಿಟ್ಟಿನಲ್ಲಿ ಯಾರಿಗೂ ತಮ್ಮ ಮನಸ್ಥಿತಿ ವಿವರಿಸದೆ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ಸಂಬಂಧ ಪ್ರತಿಕ್ರಿಯಿಸಿರುವ ಬಾಲಕೃಷ್ಣ ರವರ ಮಗ 'ತಂದೆ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದರು. ಅಲ್ಲಿ ವೈದ್ಯರು ಅವರಿಗೆ ಮಾಸ್ಕ್ ಧರಿಸಲು ಸೂಚಿಸಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ತಂದೆ ತನಗೆ ಕೊರೋನಾ ವೈರಸ್ ತಗುಲಿದೆ ಎಂದು ಭಾವಿಸಿದ್ದಾರೆ. ಅವರು ನಮ್ಮನ್ನು ತಮ್ಮ ಬಳಿ ಸುಳಿಯಲೂ ಬಿಡುತ್ತಿರಲಿಲ್ಲ. ಅವರಿಗೆ ಅದೆಷ್ಟೇ ತಿಳಿ ಹೇಳಿದರೂ ಅವರು ಕೇಳಲು ತಯಾರಿರಲಿಲ್ಲ. ಅವರಿಗೆ ಉತ್ತಮ ಕೌನ್ಸೆಲಿಂಗ್ ಸಿಗುತ್ತಿದ್ದರೆ ಬದುಕುತ್ತಿದ್ದರು' ಎಂದಿದ್ದಾರೆ.

ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೋನಾ ಪೀಡಿತ ಮಹಿಳೆ!

ಘಟನೆ ಕುರಿತು ವಿವರಿಸಿರುವ ಪುತ್ರ 'ಚಿಕಿತ್ಸೆ ಬಳಿಕ ಮನೆಗೆ ಬಂದ ತಂದೆ ಇಂಟರ್ನೆಟ್ ನಲ್ಲಿ ಕೊರೋನಾ ವೈರಸ್ ಸಂಬಂಧಿತ ವಿಡಿಯೋಗಳನ್ನು ನೋಡಿದ್ದಾರೆ. ಅಲ್ಲಿರುವ ರೋಗ ಲಕ್ಷಣಗಳು ತಮಗೂ ಇದೆ ಎಂದು ಭಾವಿಸಿದ್ದಾರೆ. ಇದರಿಂದ ಮತ್ತಷ್ಟು ಚಿಂತಿತರಾದ ತಂದೆ ಸೋಮವಾರ ನಮ್ಮನ್ನೆಲ್ಲಾ ಮನೆಯೊಳಗೆ ಕೂಡಿ ಹಾಕಿದ್ದಾರೆ. ಅವರ ಸಹಾಯಕ್ಕೆ ಧಾವಿಸುವುದಕ್ಕೂ ಮುನ್ನ ಮನೆ ಬಳಿ ಇದ್ದ ಮರಕ್ಕೆ ನೇಣು ಹಾಕಿ ಆಥ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಅಳುತ್ತಾ ವಿವರಿಸಿದ್ದಾನೆ.

ಆಂಧ್ರ ಪ್ರದೇಶದಲ್ಲಿ ಈವರೆಗೂ ಕೊರೋನಾ ವೈರಸ್ ಪ್ರಕರಣ ವರದಿಯಾಗಿಲ್ಲ. ಆದರೆ ಕೇರಳದಲ್ಲಿ ಕಳೆದ ವಾರ ಮೂವರಿಗೆ ಕೊರೋನಾ ಸೋಂಕು ಇರುವುದು ಧೃಡವಾಗಿದೆ. ಈ ಮೂವರು ಚೀನಾದ ವುಹಾನ್ ನಿಂದ ಮರಳಿದವರು ಎಂಬುವುದು ಖಚಿತವಾಗಿದೆ.

ವುಹಾನ್‌ನಲ್ಲಿ ಭಾರೀ ಪ್ರಮಾಣದ ಸಲ್ಫರ್‌: ಕೊರೋನಾಗೆ ಅಸಂಖ್ಯಾತ ಬಲಿ?

click me!