ದೀಪಾವಳಿ ಹಬ್ಬಕ್ಕೆ ಉಚಿತ 3 ಸಿಲಿಂಡರ್ ನೀಡಲಾಗುತ್ತಿದೆ. ಹಬ್ಬದ ಸಂಭ್ರಮ ಹೆಚ್ಚಿಸಲು ದೀಪಂ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರ ಅಡಿ 3 ಸಿಲಿಂಡರ್ ಉಚಿತವಾಗಿ ಪಡೆಯಲು ಸಾಧ್ಯವಿದೆ.
ವಿಶಾಖಪಟ್ಟಣಂ(ಅ.27) ದೀಪಾವಳಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಉಚಿತವಾಗಿ 3 ಎಲ್‌ಪಿಜಿ ಸಿಲಿಂಡರ್ ಸರ್ಕಾರ ನೀಡುತ್ತಿದೆ. ಕೇಂದ್ರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಹಲವು ರಾಜ್ಯಗಳು ಈ ಯೋಜನೆಯನ್ನು ಅರ್ಹರಿಗೆ ನೀಡುತ್ತಿದೆ. ಇದೀಗ ಆಂಧ್ರ ಪ್ರದೇಶ ಸರ್ಕಾರ ಈ ದೀಪಾವಳಿ ಹಬ್ಬಕ್ಕೆ 3 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುತ್ತಿದೆ. ಈಗಾಗಲೇ ಉತ್ತರ ಪ್ರದೇಶ ಈ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಆಂಧ್ರ ಪ್ರದೇಶ ದೀಪಂ ಯೋಜನೆಯಡಿ ದೀಪಾವಳಿ ಹಬ್ಬಕ್ಕೆ 3 ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿದೆ.
ಯಾರಿಗೆಲ್ಲಾ ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್
ಹಲವು ರಾಜ್ಯಗಳಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಎಲ್‌ಪಿಜಿ ಗ್ಯಾಸ್ ಸಂಪರ್ಕ ಪಡೆದ ಕುಟುಂಬಗಳು ಈ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಹರಾಗಿದ್ದಾರೆ. ಉಜ್ವಲ ಯೋಜನೆಯಡಿ ನೋಂದಾಯಿತ ಕುಟುಂಬಗಳಿಗೆ ಮಾತ್ರ ಈ ಉಚಿತ ಗ್ಯಾಸ್ ಸೌಲಭ್ಯ ಸಿಗಲಿದೆ.
undefined
ಹಬ್ಬಕ್ಕೆ ಸಿಗುತ್ತೆ ಫ್ರೀ ಸಿಲಿಂಡರ್, ಪಡೆಯಲು ಯಾರು ಅರ್ಹರು?
ಉಚಿತ ಗ್ಯಾಸ್ ಪಡೆಯುವುದು ಹೇಗೆ?
ಆಂಧ್ರ ಪ್ರದೇಶದ ಸರ್ಕಾರ ತನ್ನ ನಾಗರೀಕರಿಗೆ ದೀಪಾವಳಿ ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಗ್ಯಾಸ್ ಬುಕಿಂಗ್ ಮಾಡಿ ಡೆಲವರಿ ವೇಳೆ ಅಥವಾ ಮುಂಗಡವಾಗಿ ಪಾವತಿಸಬೇಕು. ಹೀಗೆ ಪಾವತಿಸಿದ ಕಟುಂಬಕ್ಕೆ 48 ಗಂಟೆಗಳ ಒಳಗೆ ಹಣವನ್ನು ಸರ್ಕಾರ ನೇರವಾಗಿ ಖಾತೆಗೆ ವರ್ಗಾಯಿಸುತ್ತದೆ.
ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ನೋಂದಣಿ ಮಾಡಿಕೊಂಡಿರುವ ಕುಟುಂಬಗಳು ತಮ್ಮ ಆಧಾರ್ ಕಾರ್ಡ್ ಜೊತೆ ಇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿರಬೇಕು. ಇ ಕೆವೈಸಿ ಪೂರ್ಣಗೊಂಡಿಲ್ಲದಿದ್ದರೆ ಯೋಜನೆ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ. ಇದುವರೆಗೆ ಮಾಡಿಕೊಂಡಿಲ್ಲದಿದ್ದರೆ, ತಕ್ಷಣವೇ ಇ ಕೆವೈಸಿ ಪೂರ್ಣಗೊಳಿಸಿ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೀಪಂ ಯೋಜನೆಗೆ ಚಾಲನೆ ನೀಡಿ ಮಾತನಾಡಿದ್ದಾರೆ. ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ. ದೀಪಾವಳಿ ಹಬ್ಬಕ್ಕೆ ಬಡ ಕುಟುಂಬಗಳು ಸಂಭ್ರಮದಿಂದ ಹಬ್ಬ ಆಚರಿಸಲು ನೆರವಾಗಲಿದೆ ಎಂದು ನಾಯ್ಡು ಹೇಳಿದ್ದಾರೆ.
ಈ ಯೋಜನೆಯಿಂದ ಆಂಧ್ರ ಪ್ರದೇಶದ ಸರ್ಕಾರದ ಬೊಕ್ಕಸಕ್ಕೆ 2,684 ಕೋಟಿ ರೂಪಾಯಿ ಹೊರೆಯಾಗಲಿದೆ. ದೀಪಾವಳಿ ಹಬ್ಬದ ಮೂರು ದಿನಗಳ ಮೊದಲು ಉಚಿತ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಂಡರೆ, ಹಬ್ಬದ ದಿನ ಸಿಲಿಡಂರ್ ವಿತರಣೆಯಾಗಲಿದೆ. ತ್ವರಿತ ಡೆಲಿವರಿಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ನಾಡೆಂದ್ಲ ಮನೋಹರ್ ಹೇಳಿದ್ದಾರೆ.
LPG ಗ್ಯಾಸ್ ಸೋರ್ತಿದೆ ಅಂತ ಗೊತ್ತಾದ್ರೆ, ಸೇಫ್ ಆಗಿಡೋದು ಹೇಗೆ?