Christian Conversions ಪ್ರೀತಿ ಸಿಗದೆ ಸಿಖ್ಖರು ಕ್ರಿಶ್ಚಿಯನ್‌ಗೆ ಮತಾಂತರ, ಸಿಎಂ ಚರಣಜಿತ್ ಹೇಳಿಕೆಗೆ ವ್ಯಾಪಕ ಖಂಡನೆ!

Published : Feb 04, 2022, 04:58 PM ISTUpdated : Feb 04, 2022, 05:02 PM IST
Christian Conversions ಪ್ರೀತಿ ಸಿಗದೆ ಸಿಖ್ಖರು ಕ್ರಿಶ್ಚಿಯನ್‌ಗೆ ಮತಾಂತರ, ಸಿಎಂ ಚರಣಜಿತ್ ಹೇಳಿಕೆಗೆ ವ್ಯಾಪಕ ಖಂಡನೆ!

ಸಾರಾಂಶ

ಸಿಖ್‌ರನ್ನು ಕ್ರಿಶ್ಚಿಯನ್‌ಗೆ ಮತಾಂತರಕ್ಕೆ ಸಿಎಂ ಚರಣ್‌ಜಿತ್ ಸಿಂಗ್ ಬೆಂಬಲ ಸಿಖ್‌ರು ಪ್ರೀತಿ ನೀಡಲಿಲ್ಲ, ಇದರಿಂದ ಕ್ರಿಶ್ಚಿಯನ್‌ಗೆ ಮತಾಂತರ ಪ್ರೀತಿ, ಧೈರ್ಯಕ್ಕೆ, ಸಾಹಸಕ್ಕೆ ಹೆಸರಾದ ಸಿಖ್ ಧರ್ಮಕ್ಕೆ ಅಪಮಾನವೆಸಗಿದ ಸಿಎಂ ಚರಣಜಿತ್ ಸಿಂಗ್ ಹೇಳಿಕೆ ಖಂಡಿಸಿದ ಬಿಜೆಪಿ ನಾಯಕ 

ಪಂಜಾಬ್(ಫೆ.04): ಚುನಾವಣೆ ಸಮೀಪಿಸುತ್ತಿದ್ದಂತೆ ಪಂಜಾಬ್‌ನಲ್ಲಿ(Punjab Election) ಮತದಾರರು, ಸಮುದಾಯ, ಧರ್ಮಗಳ ಒಲೈಕೆ ಹೆಚ್ಚಾಗುತ್ತಿದೆ. ಕ್ರಿಶ್ಚಿಯನ್ ಸಮುದಾಯದ ಮತ ಪಂಜಾಬ್ ಚುನಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಕ್ರಿಶ್ಚಿಯನ್ ಸಮುದಾಯದ ಒಲೈಕೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನಿ(charanjit singh channi) ಇದೀಗ ಮತಾಂತರ(Christian Conversions) ಬೆಂಬಲಿಸಿದ್ದಾರೆ. ಸಿಖ್‌ ಧರ್ಮದಿಂದ ಕ್ರಿಶ್ಚಿಯನ್ ಮತಾಂತರವನ್ನು ಬೆಂಬಲಿಸಿರುವುದು ಮಾತ್ರವಲ್ಲ, ಸಮರ್ಥನೆಯನ್ನು ಮಾಡಿಕೊಂಡು ಇದೀಗ ಸಿಖ್(Sikh) ಧರ್ಮೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಸಿಎಂ ಚನಿ ಹೇಳಿಕೆಯನ್ನು ಬಿಜೆಪಿ ನಾಯಕ, ಮನ್ಜಿಂದರ್ ಸಿಂಗ್ ಸಿರ್ಸಾ ಖಂಡಿಸಿದ್ದಾರೆ.

ಪಂಜಾಬ್‌ನಲ್ಲಿ ಸಿಖ್ ಧರ್ಮೀಯರನ್ನು ಕ್ರಿಶ್ಚಿಯನ್‌ಗೆ ಮತಾಂತರ ಮಾಡುವ ಕಾರ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ ಅನ್ನೋ ಆರೋಪ ಇತ್ತೀಚೆಗೆ ಹೆಚ್ಚಾಗಿದೆ. ಒಂದೇ ದಿನ 25,000 ಸಿಖ್ ಧರ್ಮೀಯರನ್ನು ಕ್ರಿಶ್ಚಿಯನ್‌ಗೆ ಮತಾಂತರ ಮಾಡಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಈ ಕುರಿತು ಕೇಳಿದ ಪ್ರಶ್ನೆಗೆ ಸಿಎಂ ಚರಣ್‌ಜಿತ್ ಸಿಂಗ್ ಸಿಖ್ ಧರ್ಮಕ್ಕೆ ಆಕ್ರೋಶಕ್ಕೆ ಗುರಿಯಾಗುವ ಹೇಳಿಕೆ ನೀಡಿದ್ದಾರೆ. ಸಿಖ್ ಧರ್ಮ ಪ್ರೀತಿ ನೀಡದ ಕಾರಣ ಸಿಖ್‌ರು ಕ್ರಿಶ್ಟಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದಿದ್ದಾರೆ. ಇಷ್ಟೇ ಅಲ್ಲ ಮತಾಂತರವನ್ನು ಬೆಂಬಲಿಸಿ ಹೇಳಿಕೆ ನೀಡಿದ ಚರಣಜಿತ್ ಸಿಂಗ್ ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದೀಗ ಚರಣಜಿತ್ ಸಿಂಗ್ ನಡೆಯನ್ನು ಮನ್ಜಿಂದರ್ ಸಿಂಗ್(manjinder singh sirsa) ತೀವ್ರ ವಿರೋಧಿಸಿದ್ದಾರೆ. ರಾಜ್ಯದ ಸಿಎಂ, ಸಿಖ್ ಸಮುದಾಯದ ನಾಯಕನೇ ಈ ರೀತಿ ಹೇಳಿಕೆ ನೀಡಿರುವುದು ಅಕ್ಷ್ಯಮ್ಯ ತಪ್ಪು ಎಂದಿದ್ದಾರೆ.

Punjab Elections 2022: ಆಪ್ ಕೈಗೆ ಅಧಿಕಾರ ಸಾಧ್ಯತೆ, ಚುನಾವಣಾ ಪೂರ್ವ ಸಮೀಕ್ಷೆ ವರದಿ

ಚರಣಜಿತ್ ಸಿಂಗ್ ಮಾತುಗಳು ತೀವ್ರ ದುಃಖ ಹಾಗೂ ಆತಂಕ ತಂದಿದೆ. ಕಾರಣ ಪಂಜಾಬ್‌ ರಾಜ್ಯದ ಮುಖ್ಯಮಂತ್ರಿಯಾಗಿ ಕೇವಲ ಮತ ಹಾಗೂ ಸಮುದಾಯದ ಒಲೈಕೆಗೆ ಸಿಖ್ ಧರ್ಮದವರನ್ನು ಕ್ರಿಶ್ಟಿಯನ್‌ಗೆ ಮತಾಂತರವಾಗಲು ಬೆಂಬಲಿಸುತ್ತಿದ್ದಾರೆ. ಗುರುಗೋವಿಂದ್ ಸಿಂಗ್ ಸ್ಥಾಪಿಸಿದ , ಗುರುತೇಜ್ ಬಹದ್ದೂರ್ ಅವರ ಮಾರ್ಗದರ್ಶನದ ಈ ಪಂಥ ಸಿಖ್ ಜನರಿಗೆ ಪ್ರೀತಿ ನೀಡಿಲ್ಲ ಅದರಿಂದ ಮತಾಂತರವಾಗಿದ್ದಾರೆ ಅನ್ನೋದು ಹೇಳಿಕೆ ಬಾಲಿಶವಾಗಿದೆ. ಸಿಖ್ ಧರ್ಮ ಪ್ರೀತಿ, ಧೈರ್ಯ, ವೀರತ್ವಕ್ಕೆ ಹೆಸರುವಾಸಿ, ಪ್ರೀತಿಸಿದವನಿಗೆ ಪ್ರಾಣವನ್ನೇ ಕೊಡುವ ಮಂದಿ ಸಿಖ್‌ರು. ಆದರೆ ಚರಣ್‌ಜಿತ್ ಸಿಂಗ್ ಮಾತು ಧರ್ಮಕ್ಕೆ ಮಾಡಿದ ಅಪಮಾನವಾಗಿದೆ ಎಂದು ಮನ್ಜಿಂದರ್ ಸಿಂಗ್ ಹೇಳಿದ್ದಾರೆ.

ಸಿಖ್ ಧರ್ಮೀಯರು ಈಗಾಗಲೇ ಚರಣ್‌ಜಿತ್ ಸಿಂಗ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಚನಿ ಪರೋಕ್ಷವಾಗಿ ಕ್ರಿಶ್ಚಿಯನ್ ಮತಾಂತರಕ್ಕೆ ಬೆಂಬಲ ನೀಡುತ್ತಿದ್ದಾರೆ ಅನ್ನೋ ಮಾತುಗಳು ಹಲವು ದಿನಗಳಿಂದ ಕೇಳಿಬರುತ್ತಿದೆ. ಈಗಾಗಲೇ ಮತಕ್ಕಾಗಿ ಹೊರಗಿನಿಂದ ಸಿಖ್ ಎಂದು ಹೇಳಿಕೊಂಡು ಸಿಖ್‌ರ ಮತಗಳನ್ನು ಹಾಗೂ ಒಳಗೆ ಕ್ರಿಶ್ಚಿಯನ್‌ ಮತಾಂತರಕ್ಕೆ ಬೆಂಬಲ ಹಾಗೂ ಕ್ರಿಶ್ಚಿಯನ್ ಆಗಿ ಮತಾಂತರಗೊಂಡಿರುವ ನಿಮ್ಮಿಂದ ಇದಕ್ಕಿಂತ ಹೆಚ್ಚಿನದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮನ್ಜಿಂದರ್ ಸಿಂಗ್ ಹೇಳಿದ್ದಾರೆ.

 

ಅಕ್ರಮ ಹಣ ವರ್ಗಾವಣೆ: ಪಂಜಾಬ್ ಸಿಎಂ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಬಂಧನ!

ಓರ್ವ ಸಿಖ್ ಆಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಈ ರೀತಿಯ ಹೇಳಿಕೆ, ಅದನ್ನು ಸಮರ್ಥಿಸಿಕೊಂಡಿರುವ ರೀತಿ ಸಿಖ್ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ಮನ್ಜಿಂದರ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಿಖ್ ಸಮುದಾಯದ ಪ್ರೀತಿ, ವಿಶ್ವಾಸ ಎಲ್ಲವನ್ನೂ ಪಡೆದು ಮುಖ್ಯಮಂತ್ರಿಯಾಗಿದ್ದೀರಿ. ಇದೀಗ ಮತಕ್ಕಾಗಿ ಸಿಖ್‌ರಿಂದ ಪ್ರೀತಿ ಸಿಗಲಿಲ್ಲ. ಹೀಗಾಗಿ ಸಿಖ್‌ರು ಮತಾಂತರವಾಗುತ್ತಿದ್ದಾರೆ ಅನ್ನೋ ಹೇಳಿಕೆ ಯಾವತ್ತೂ ಒಪ್ಪುವ ಮಾತಲ್ಲ ಎಂದು ಮನ್ಜಿಂದರ್ ಸಿಂಗ್ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಸಿಖ್ ಧರ್ಮದವನ್ನು ಕ್ರಿಶ್ಚಿಯನ್‌ಗೆ ಮತಾಂತರ ಮಾಡುವ ಮಿಷನರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಇಂಡಿಯನ್ ಅಮೆರಿಕನ್ ಕ್ರಿಶ್ಟಿಯನ್ ಗ್ರೂಪ್ ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು,ಈ  ವರದಿಯಲ್ಲಿ ಪಂಜಾಬ್‌ನಲ್ಲಿ ಕ್ರಿಶ್ಚಿಯನ್ ಮತಾಂತರ ಪ್ರಗತಿ ಶೇಕಡಾ 600 ಎಂದಿದೆ. ಇಷ್ಟೇ ಅಲ್ಲ 18,000 ಹೊಸ ಚರ್ಚ್ ನಿರ್ಮಾಣಗೊಂಡಿದೆ ಎಂಬ ವರದಿ ಭಾರಿ ಕೋಲಾಹಲ ಸೃಷ್ಟಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ