ನಾಯ್ಡು ಕನಸಿನ ರಾಜಧಾನಿ ಅಮರಾವತಿಗೆ ಎಳ್ಳುನೀರು, ಒಪ್ಪಂದ ರದ್ದು!
ನಾಯ್ಡು ಕನಸಿನ ರಾಜಧಾನಿ ಅಮರಾವತಿಗೆ ಎಳ್ಳುನೀರು| ರಾಜಧಾನಿ ನಿರ್ಮಾಣಕ್ಕೆ ಸಿಂಗಾಪುರ ಒಕ್ಕೂಟದೊಂದಿಗೆ ಮಾಡಿದ್ದ ಒಪ್ಪಂದ ರದ್ದು
ಸಿಂಗಾಪುರ[ನ.14]: ಅಧಿಕಾರಕ್ಕೆ ಬಂದ ಬಳಿಕ ಈ ಹಿಂದಿನ ಸರ್ಕಾರದ ಯೋಜನೆಗಳನ್ನೆಲ್ಲಾ ರದ್ದು ಮಾಡುತ್ತಿರುವ ಜಗನ್ಮೋಹನ್ ರೆಡ್ಡಿ ನೇತೃತ್ವದ ಅಂಧ್ರ ಪ್ರದೇಶ ಸರ್ಕಾರ, ಈಗ ಅಮರಾವತಿ ರಾಜಧಾನಿಯನ್ನಾಗಿ ಮಾಡುವ ಚಂದ್ರಬಾಬು ನಾಯ್ಡು ಸರ್ಕಾರದ ನಿರ್ಧಾರವನ್ನು ರದ್ದು ಮಾಡಿದ್ದಾರೆ.
ರಾಜಧಾನಿ ನಿರ್ಮಾಣಕ್ಕೆ ಸಿಂಗಾಪುರ ಒಕ್ಕೂಟದೊಂದಿಗೆ ಮಾಡಿದ್ದ ಒಪ್ಪಂದವನ್ನು ರದ್ದು ಮಾಡುವ ಮೂಲಕ, ಅಮರಾವತಿ ರಾಜಧಾನಿ ಯೋಜನೆಯನ್ನು ಆಂಧ್ರ ಸರ್ಕಾರ ಅಧಿಕೃತವಾಗಿ ಕೈ ಬಿಟ್ಟಿದೆ.
ದೇಶದ ಹೊಸ ನಕ್ಷೆಯಲ್ಲಿ ಆಂಧ್ರ ರಾಜಧಾನಿ ಅಮರಾವತಿ ಇಲ್ಲ!
ಅಮರಾವತಿ ಕ್ಯಾಪಿಟಲ್ ಸಿಟಿ ಸ್ಟಾರ್ಟಪ್ ಪ್ರಾಜೆಕ್ಟ್ ಅನ್ನು ರದ್ದು ಮಾಡಿ ಆಂಧ್ರ ಸರ್ಕಾರ ಸೋಮವಾರ ತೀರ್ಮಾನ ಕೈಗೊಂಡಿತ್ತು. ಮಂಗಳವಾರ ಈ ಬಗ್ಗೆ ಈ ಬಗ್ಗೆ ಸಿಂಗಾಪುರ ವ್ಯಾಪಾರ ಹಾಗೂ ವಾಣಿಜ್ಯ ಸಚಿವಾಲಯ ಹೇಳಿಕೆ ನೀಡಿದ್ದು, ಸಿಂಗಾಪುರ ಗ್ರೂಪ್ ಹಾಗೂ ಆಂಧ್ರ ಸರ್ಕಾರ ನಡುವಿನ ಪರಸ್ಪರ ಒಪ್ಪಿಗೆ ಮೇರೆಗೆ ಒಪ್ಪಂದ ಕೈ ಬಿಡಲಾಗಿದೆ ಎಂದು ಹೇಳಿದೆ.
ಕಲಾಂ ಹೆಸರಿನ ಪ್ರಶಸ್ತಿಗೆ ವೈಎಸ್‌ಆರ್ ಹೆಸರು: ವಿವಾದದ ಬಳಿಕ ಹಿಂದಕ್ಕೆ
ಒಟ್ಟು 7.93 ಲಕ್ಷ ಕೋಟಿ ವೆಚ್ಚದಲ್ಲಿ ರಾಜಧಾನಿ ನಿರ್ಮಾಣಕ್ಕೆ ಒಪ್ಪಂದ ನಡೆದಿತ್ತು. ಯೋಜನೆಗೆ ೨೫೦೦ ಕೋಟಿ ಬಿಡುಗಡೆ, ಶೇ.90ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿತ್ತು