
ವಿಜಯವಾಡ(ಜು.05): ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್ ಸಿಗದೆ ನವಜಾತ ಶಿಶುಗಳು ಮತ್ತು ರೋಗಿಗಳ ಸಾವು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಸರ್ಕಾರ, ಏಕಕಾಲದಲ್ಲಿ 1088 ಆ್ಯಂಬುಲೆನ್ಸ್‌ಗಳನ್ನು ಸೇವೆಗೆ ಮುಕ್ತಗೊಳಿಸಿದೆ.
‘108’ ಮತ್ತು ‘104’ ತುರ್ತು ವಾಹನಗಳ ಸೇವೆಯ ಮೂಲಕ ನಗರ ಪ್ರದೇಶದಲ್ಲಿ ಕರೆ ಬಂದ 15 ನಿಮಿಷದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕರೆ ಬಂದ 20 ನಿಮಿಷಗಳಲ್ಲಿ ಸೇವೆ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಯೋಜನೆ ಜಾರಿ ಬಳಿಕ ಪ್ರತಿ 75000 ಜನರಿಗೆ ಒಂದು ಆ್ಯಂಬುಲೆನ್ಸ್ ಲಭ್ಯವಾಗಲಿದೆ. ಈ ಯೋಜನೆಗೆ 200 ಕೋಟಿ ರು. ವೆಚ್ಚ ಮಾಡಲಾಗಿದೆ.
‘108’ ಸಂಖ್ಯೆಯ 412 ಆ್ಯಂಬುಲೆನ್ಸ್‌ಗಳಲ್ಲಿ 26 ಅನ್ನು ವಿಶೇಷವಾಗಿ ನವಜಾತ ಶಿಶುಗಳಿಗೆಂದೇ ಮೀಸಲಿಟ್ಟಿದ್ದು, ಅದಕ್ಕೆ ಬೇಕಾದ ಎಲ್ಲಾ ಅಗತ್ಯ ಸೌಕರ್ಯ ಕಲ್ಪಿಸಲಾಗಿದೆ. ಈ ಪೈಕಿ 102 ಆ್ಯಂಬುಲೆನ್ಸ್‌ಗಳಲ್ಲಿ ಅತ್ಯಾಧುನಿಕ ಜೀವರಕ್ಷಣಾ ವ್ಯವಸ್ಥೆ, 282ರಲ್ಲಿ ಸಾಮಾನ್ಯ ಜೀವರಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ. ಇನ್ನು ‘104’ ಸಂಖ್ಯೆಯ 676 ಮೊಬೈಲ್ ಮೆಡಿಕಲ್ ಯುನಿಟ್ಸ್‌ಗಳಲ್ಲಿ ಗ್ರಾಮೀಣ ಭಾಗದ ಜನರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಆ್ಯಂಬುಲೆನ್ಸ್‌ಗಳ ಮೂಲಕ ವೈದ್ಯ ಸಿಬ್ಬಂದಿ ತಿಂಗಳಿಗೆ ಒಂದು ಬಾರಿ ಕುಗ್ರಾಮಗಳಿಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.
ಈ ಯೋಜನೆಯಡಿ ಆ್ಯಂಬುಲೆನ್ಸ್ ಚಾಲಕರ ವೇತನವನ್ನು ಪ್ರಸಕ್ತ ಇದ್ದ 10000 ರು.ನಿಂದ 18000-28000 ರು.ಗೆ, ತುರ್ತು ಆರೋಗ್ಯ ತಂತ್ರಜ್ಞರ ವೇತನವನ್ನ 12000 ರು.ನಿಂದ 20000-30000 ರು.ಗೆ ಹೆಚ್ಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ