Mukesh Ambani: 1 ಕೋಟಿಯ 2 ಆಲಿವ್‌ ಮರ ಆಂಧ್ರದಿಂದ ಅಂಬಾನಿ ಮನೆಗೆ ರವಾನೆ!

Published : Nov 27, 2021, 11:24 AM ISTUpdated : Nov 27, 2021, 11:28 AM IST
Mukesh Ambani: 1 ಕೋಟಿಯ 2 ಆಲಿವ್‌ ಮರ ಆಂಧ್ರದಿಂದ ಅಂಬಾನಿ ಮನೆಗೆ ರವಾನೆ!

ಸಾರಾಂಶ

*ಮುಕೇಶ್‌ ಅಂಬಾನಿ ಮನೆಗೆ 1 ಕೋಟಿಯ 2 ಆಲಿವ್‌ ಮರ *ಪ್ರತಿಯೊಂದು ಮರಕ್ಕೂ ತಲಾ 47 ಲಕ್ಷ ರು.ನಂತೆ 94 ಲಕ್ಷ ರು. *ಪ್ರತಿಯೊಂದೂ ಮರವು  ಸುಮಾರು 2-ಟನ್‌ಗಳಷ್ಟು ತೂಕ

ಹೈದ್ರಾಬಾದ್‌(ನ.27): ಸುಮಾರು 185 ವರ್ಷದಷ್ಟುಹಳೆಯದು ಎನ್ನಲಾದ ಎರಡು ಆಲಿವ್‌ ಮರಗಳನ್ನು (Olive tree) ಆಂಧ್ರಪ್ರದೇಶದ (Andhra Pradesh) ಪೂರ್ವ ಗೋದಾವರಿ ಜಿಲ್ಲೆಯಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ (Jamngar), ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಅವರ ಮನೆಗೆ ರವಾನಿಸಲಾಗಿದೆ. ಮನೆಯಲ್ಲಿ ಅಲಿವ್‌ ಮರ ಇದ್ದರೆ ಶುಭ (Lucky) ತರುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಕೆಲ ವರ್ಷಗಳ ಹಿಂದೆ ಮುಕೇಶ್‌ ಕೋರಿಕೆಯಂತೆ ಇವುಗಳನ್ನು ಸ್ಪೇನ್‌ನಿಂದ (Spain) ತರಿಸಲಾಗಿತ್ತು. ಬಳಿಕ ಪೂರ್ವ ಗೋದಾವರಿ ಜಿಲ್ಲೆಯ ಕದಿಯಂ ನರ್ಸರಿಯಲ್ಲಿ ( Gautami nursery in Kadiam) ಅದನ್ನು ವಿಶೇಷ ಅರೈಕೆ ವಹಿಸಿ ಪೋಷಿಸಲಾಗಿತ್ತು. ಜೊತೆಗೆ ಮರವು ಯಾವುದೇ ಹಂತದಲ್ಲೂ 12 ಅಡಿಗಿಂತ ಹೆಚ್ಚಿನ ಎತ್ತರಕ್ಕೆ ಬೆಳೆದಯಂತೆ ಅದನ್ನು ನಿರ್ವಹಿಸಲಾಗಿದ್ದು, ಬುಧವಾರ ಅದನ್ನು ವಿಶೇಷ ಟ್ರಕ್‌ ಮೂಲಕ ಗುಜರಾತ್‌ಗೆ ಕಳುಹಿಸಿಕೊಡಲಾಗಿದೆ.

ಈ ಮರಗಳು ಅಂದಾಜು 1000 ವರ್ಷಗಳ ಕಾಲ ಬದುಕುತ್ತವೆ. ಪ್ರತಿಯೊಂದು ಮರಕ್ಕೂ ತಲಾ 47 ಲಕ್ಷ ರು.ನಂತೆ 94 ಲಕ್ಷ ರು.ಗಳನ್ನು ಮುಕೇಶ್‌ ಅಂಬಾನಿ ಆಲಿವ್‌ ಮರಗಳಿಗಾಗಿ ವ್ಯಯಿಸಿದ್ದಾರೆ. ಆಂಧ್ರದ ಕಡಿಯಂನಲ್ಲಿರುವ ಗೌತಮಿ ನರ್ಸರಿಯ ಮಾಲೀಕ ಮಾರ್ಗನಿ ವೀರಬಾಬು (Margani Veerababu) ಅವರು ಸುಮಾರು ಒಂದು ವಾರದ ಹಿಂದೆ ಆರ್ಡರ್ ಸ್ವೀಕರಿಸಿದ್ದರು ಎಂದು ತಿಳಿಸಿದ್ದಾರೆ. "ನಮ್ಮನ್ನು ವಾಸ್ತುಶಿಲ್ಪಿಯೊಬ್ಬರು (Architect) ಅಂಬಾನಿಯವರಿಗೆ ಪರಿಚಯಿಸಿದರು. ರಿಲಯನ್ಸ್‌ನ ಸಿಬ್ಬಂದಿ ಕಳೆದ ವಾರ ಆರ್ಡರ್ ಮಾಡಿದರು. ಅವರು ನಿರಂತರವಾಗಿ ನಮ್ಮ ಕೆಲಸದ ಅಪ್ಢೇಟ್ಸ್‌ ಪಡೆದರು ಮತ್ತು ಆದ್ಯತೆಯ ಮೇಲೆ ಮರಗಳು ಬೇಕು ಎಂದು ನಮಗೆ ಹೇಳಿದರು. ಅಂಬಾನಿ ಅವರ ಮಗ ತಮ್ಮ ಹೊಸ ಬಂಗಲೆಯನ್ನು ಅಲಂಕರಿಸಲು ಆಲಿವ್ ಮರಗಳನ್ನು ಆಯ್ಕೆ ಮಾಡಿದ್ದಾರೆ ಎಂದು ನಮಗೆ ತಿಳಿಸಲಾಯಿತು."  ಎಂದು ಮಾರ್ಗನಿ ವೀರಬಾಬು ಹೇಳಿದ್ದಾರೆ.

ಆಲಿವ್ ಮರಗಳ ಜೊತೆಗೆ, ನರ್ಸರಿಯು ಒಂದು ಡಜನ್ ಇತರ ಮರಗಳು

ಪ್ರತಿಯೊಂದೂ ಮರವು  ಸುಮಾರು 2-ಟನ್‌ಗಳಷ್ಟು ತೂಕವಿದ್ದು, ಬೇರುಗಳನ್ನು ಎಚ್ಚರಿಕೆಯಿಂದ ಭೂಮಿಯಲ್ಲಿ ಹೂಳಲಾಗಿತ್ತು ಮತ್ತು ನಂತರ ಅವುಗಳ ಬೆಳವಣಿಗೆಗಾಗಿ ಮಣ್ಣಿನಿಂದ ಮುಚ್ಚಿ ರಕ್ಷಿಸಲಾಗಿದೆ. ವಿಶೇಷ ಟ್ರಕ್‌ಗೆ ಮರಗಳನ್ನು ಲೋಡ್ ಮಾಡಲು 25 ಜನರ ತಂಡ ಮತ್ತು ಹೈಡ್ರಾಲಿಕ್ ಕ್ರೇನ್‌ಗಳನ್ನು (Hydraulic Crane) ಬಳಸಲಾಗಿದೆ. ಹೆಚ್ಚಿನ ಹೊರೆ ಮತ್ತು ಮರಗಳ ದುರ್ಬಲ ಸ್ವಭಾವದಿಂದಾಗಿ ವಾಹನವು ಗಂಟೆಗೆ ಕೇವಲ 30-40 ಕಿಮೀ ವೇಗದಲ್ಲಿ ಚಲಿಸಿದೆ.  ಆದ್ದರಿಂದ ಜಾಮ್‌ನಗರವನ್ನು ತಲುಪಲು ಸುಮಾರು 5 ದಿನಗಳನ್ನು ತೆಗೆದುಕೊಂಡಿದೆ.

Nita Ambani: 40 ಲಕ್ಷದ ಬಾಟಲಿ ನೀರು ಕುಡಿದರಾ ಅಂಬಾನಿ ಪತ್ನಿ?

"ಅಂಬಾನಿಗಳು ಮೃಗಾಲವೊಂದನ್ನು (Zoo) ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು ಈ ಬೆನ್ನಲ್ಲೇ ಸಂಪೂರ್ಣ ಪರಿಸರ ವ್ಯವಸ್ಥೆಯೊಂದನ್ನು (Environment) ನಿರ್ಮಿಸುತ್ತಿದ್ದಾರೆ. ಅವರು ತಮ್ಮ ಸಂಗ್ರಹಕ್ಕೆ ಸೇರಿಸಲು ಹಲವಾರು ಜಾತಿಯ ಅಪರೂಪದ ಮರಗಳನ್ನು ಸಂಗ್ರಹಿಸುತ್ತಿದ್ದಾರೆ" ಎಂದು ವೀರಬಾಬು ಹೇಳಿದ್ದಾರೆ. ಎರಡು ಆಲಿವ್ ಮರಗಳ ಜೊತೆಗೆ, ನರ್ಸರಿಯು ಒಂದು ಡಜನ್ ಇತರ ಮರಗಳು ಮತ್ತು ಪೊದೆಗಳನ್ನು ಸಹ ಕಳುಹಿಸಿದೆ, ಅದನ್ನು ಮತ್ತೊಂದು ಟ್ರಕ್‌ಗೆ ಲೋಡ್ ಮಾಡಲಾಗಿದೆ. ಈ ಒಪ್ಪಂದವು ಈಗಾಗಲೇ ದೇಶಾದ್ಯಂತ ಹಲವಾರು ಕಾರ್ಪೊರೇಟ್ ಕಂಪನಿಗಳು (Corporate Company) , ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳಿಗೆ ಸರಬರಾಜು ಮಾಡುತ್ತಿರುವ ಆಂಧ್ರ ನರ್ಸರಿಗೆ ಹೊಸ ಮಾರ್ಗಗಳನ್ನು ತೆರೆದಿದೆ. ಈ ನರ್ಸರಿಯ ಸಸ್ಯಗಳು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ (Rajiv Gandhi International Airport)  ಬಳಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು