ಸಾವಿಗೂ ಮುನ್ನ ಕೊನೆಯದಾಗಿ ಕಂದನ ನೋಡಲು ವಿಡಿಯೋ ಕಾಲ್ ಮಾಡಿದ್ದ ಹುತಾತ್ಮ ಹುಮಾಯುನ್!

By Suvarna News  |  First Published Sep 16, 2023, 8:55 PM IST

ಕಾಶ್ಮೀರದಲ್ಲಿ ಉಗ್ರರ ವಿರುದ್ದ ಕಾರ್ಯಚರಣೆಯಲ್ಲಿ ಹುತಾತ್ಮರಾದ ಪೊಲೀಸ್ ಅಧಿಕಾರಿ ಹುಮಾಯುನ್ ಭಟ್ ಸಾವಿಗೂ ಕೆಲವೇ ಕ್ಷಣಗಳ ಮುನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಕೊನೆಯದಾಗಿ 1 ತಿಂಗಳ ಕಂದನ ಮುಖ ತೋರಿಸಲು ಹೇಳಿದ ಮನಕಲುಕವ ಘಟನೆ ನಡೆದಿದೆ.


ಕಾಶ್ಮೀರ(ಸೆ.16) ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರ ಉಪಟಳ ಹೆಚ್ಚಾಗಿದೆ.  ಅನಂತನಾಗ್‌ ಜಿಲ್ಲೆಯ ಪೀರ್‌ ಪಂಜಾಲ್‌ ಪರ್ವತ ಶ್ರೇಣಿಯಲ್ಲಿ ನಡೆದ ಭಯೋತ್ಪಾದಕ ದಾಳಿಗೆ ನಾಲ್ವರು ಸೇನಾಧಿಕಾರಿಗಳು ಹಾಗೂ ಒಬ್ಬ ಪೊಲೀಸ್‌ ಅಧಿಕಾರಿ ಹುತಾತ್ಮಾರಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಎಸ್‌ಪಿ ಹುಮಾಯುನ್ ಭಟ್ ಈ ಕಾರ್ಯಾತರಣೆಯಲ್ಲಿ ಹುತಾತ್ಮರಾಗಿದ್ದಾರೆ. ಭಯೋತ್ಪಾದಕರ ಸಿಡಿಸಿದ ಗುಂಡುಗಳು ಹುಮಾಯುನ್ ದೇಹವನ್ನೇ ಸೀಳಿತ್ತು. ಇದರ ನಡುವೆ ಸಾವಿಗೂ ಕೆಲವೇ ಕ್ಷಣಗಳ ಮುನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿದ ಹುಮಾಯುನ್ ತನ್ನ ಒಂದು ತಿಂಗಳ ಕಂದನ ಮುಖ ತೋರಿಸುವಂತೆ ಕೇಳಿಕೊಂಡ ಮನಕಲುಕವ ಘಟನೆ ಇದೀಗ ಬಯಲಾಗಿದೆ.

ಪಾಕಿಸ್ತಾನ ಮೂಲಕ ಭಯೋತ್ಪಾದಕರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಡಿಎಸ್‌ಪಿ ಹುಮಾಯುನ್ ಭಟ್ ತೀವ್ರವಾಗಿ ಗಾಯಗೊಂಡಿದ್ದರು. ಹಲವು ಗುಂಡುಗಳು ಹುಮಾಯುನ್ ದೇಹ ಹೊಕ್ಕಿತ್ತು.  ರಕ್ತದ ಮಡುವಿನಲ್ಲಿ ಹುಮಾಯುನ್ ಕುಸಿದು ಬಿದ್ದಿದ್ದರು. ಇದರ ನಡುವೆ ಪತ್ನಿಗೆ ವಿಡಿಯೋ ಕಾಲ್ ಮಾಡಿದ ಹುಮಾಯುನ್, ನಾನು ಬದುಕುವ ಸಾಧ್ಯತೆ ಕಡಿಮೆ. ನನ್ನ ಕಂದನ ಮುಖ ತೋರಿಸುವಂತೆ ಪತ್ನಿ ಫಾತಿಮಾ ಬಳಿ ಕೇಳಿಕೊಂಡಿದ್ದರೆ. ಆತಂಕದಿಂದಲೇ ಪತ್ನಿ ಕಂದನನ್ನು ವಿಡಿಯೋ ಕಾಲ್ ಮೂಲಕ ತೂರಿಸಿದ್ದಾರೆ.

Tap to resize

Latest Videos

 

ಡ್ರೋನ್‌ ಮೂಲಕ ಉಗ್ರರನ್ನು ಸಾಗಿಸಲು ಲಷ್ಕರ್‌ ಪ್ರಯತ್ನ: ಪಂಜಾಬ್‌ನಲ್ಲಿ ಉಗ್ರನ ಇಳಿಸಿರೋ ದೃಶ್ಯ ಸೆರೆ!

ಆತಂಕದಲ್ಲೇ ಪತ್ನಿ ಏನಾಗಿದೆ. ನೀವು ಕ್ಷೇಮವೇ ಎಂದು ಕೇಳಿದ್ದಾರೆ. ಮತ್ತೆ ಪುನರುಚ್ಚರಿಸಿದ ಹುಮಾಯುನ್ ಗುಂಡು ದೇಹ ಹೊಕ್ಕಿದೆ. ಬದುಕವ ಸಾಧ್ಯತೆ ಕಡಿಮೆ. ನಮ್ಮ ಪುತ್ರನ ಚೆನ್ನಾಗಿ ನೋಡಿಕೋ ಎಂದು ಹೇಳಿ ಅಸ್ವಸ್ಥರಾಗಿದ್ದಾರೆ. ಇದಕ್ಕೂ ಮೊದಲು ನಿವೃತ್ತಿ ಪೊಲೀಸ್ ಅಧಿಕಾರಿ ಹಾಗೂ ತನ್ನ ತಂದೆ ಐಜಿ ಗುಲಾಮ್ ಹಸನ್ ಭಟ್‌ಗೆ ಕರೆ ಮಾಡಿದ್ದ ಹುಮಾಯುನ್ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದೇನೆ. ನೀವು ಆತಂಕಪಡುವ ಅಗತ್ಯವಿಲ್ಲ. ಧೈರ್ಯವಾಗಿರಿ, ಕುಟುಂಬ ನೋಡಿಕೊಳ್ಳಿ ಎಂದಿದ್ದಾರೆ.

ಹುಮಾಯುನ್ ಚಿಕಿತ್ಸೆಗೆ ತಕ್ಷಣವೇ ತಂದೆ ಗುಲಾಮ್ ಹಸನ್ ಭಟ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಷ್ಟರಲ್ಲಾಗಲೇ ಆಸ್ಪತ್ರೆ ದಾಖಲಿಸಲಾಗಿತ್ತು. ಹೆಚ್ಚಿನ ಗುಂಡುಗಳು ದೇಹ ಹೊಕ್ಕಿದ್ದ ಕಾರಣ ಹುಮಾಯುನ್ ಬದುಕಿ ಉಳಿಯಲಿಲ್ಲ. ಕರೆ ಮಾಡಿ ಮಾತನಾಡಿರುವ ಕಾರಣ ಹುಮಾಯನ್ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ಕಟುಂಬದಲ್ಲಿತ್ತು. ಆದರೆ ಪ್ರಾರ್ಥನೆ ಫಲಿಸಲಿಲ್ಲ. ಹುಮಾಯುನ್ ಹುತಾತ್ಮರಾಗಿದ್ದಾರೆ.  

ಬೆಟ್ಟದ ಮೇಲೆ ಹೇಡಿಗಳಂತೆ ಅಡಿಗಿ ಕೂತ ಉಗ್ರರು, ಮತ್ತೊಬ್ಬ ಸೈನಿಕ ಹುತಾತ್ಮ!

ಇತ್ತ ಮೂರನೇ ದಿನವೂ ಅನಂತನಾಗ್ ಜಿಲ್ಲೆಯಲ್ಲಿ ಉಗ್ರರ ವಿರುದ್ದ ಕಾರ್ಯಾಚರಣೆ ಮುಂದುವರಿದಿದೆ. ಡ್ರೋನ್ ಬಳಕೆ ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. 
 

click me!