3 ವರ್ಷದಲ್ಲಿ 6 ಬಾರಿ ಕಾಶಿ ವಿಶ್ವನಾಥನ ಮೊರೆ ಹೋದ ಅನಂತ್ ಅಂಬಾನಿ, ಈ ಬಾರಿ ಕೊಟ್ಟ ದೇಣಿಗೆ ಎಷ್ಟು?

Published : Nov 25, 2026, 09:30 AM IST
Anant Ambani in temple

ಸಾರಾಂಶ

ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಕಾಶಿಗೆ ಭೇಟಿ ನೀಡಿ ವಿಶ್ವನಾಥ ಹಾಗೂ ಅನ್ನಪೂರ್ಣ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ವರದಿಗಳ ಪ್ರಕಾರ ಅವರು ದೇವಾಲಯಗಳಿಗೆ ಕೋಟಿಗಟ್ಟಲೆ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.

ವಾರಣಾಸಿ: ಉದ್ಯಮಿ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಪವಿತ್ರ ನಗರ ಕಾಶಿಗೆ ಭೇಟಿ ನೀಡಿದ್ದರು. ಸೋಮವಾರ ವಾರಣಾಸಿಗೆ ಆಗಮಿಸಿದ್ದ ಅಂಬಾನಿ, ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಮತ್ತು ಜಲಾಭಿಷೇಕ ನೆರವೇರಿಸಿದರು. ನಂತರ ಅನ್ನಪೂರ್ಣ ದೇವಿಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರು.

ವಿಶೇಷ ಚಾರ್ಟರ್ ವಿಮಾನದ ಮೂಲಕ ಅನಂತ್ ಅಂಬಾನಿ ವಾರಣಾಸಿ ತಲುಪಿದ್ದರು. ಬಬತ್‌ಪುರ ವಿಮಾನ ನಿಲ್ದಾಣದಿಂದ ಅವರ ಬೆಂಗಾವಲು ಪಡೆ ಬಿಗಿ ಭದ್ರತೆಯ ನಡುವೆ ಕಾಶಿ ವಿಶ್ವನಾಥ ಧಾಮಕ್ಕೆ ಆಗಮಿಸಿತು. ಇಲ್ಲಿ ಅವರು ವಿಶೇಷ ಪೂಜಾ ಕೈಂಕಾರ್ಯ ನೆರವೇರಿಸಿದರು. ದೇವರಿಗೆ ಜಲಾಭಿಷೇಕ ಮಾಡಿದ ಬಳಿಕ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು. ಪೂಜೆ ಬಳಿಕ ದೇವಾಲಯದ ಆಡಳಿತ ಮಂಡಳಿಯು ಅವರಿಗೆ ರುದ್ರಾಕ್ಷ ಮಾಲೆ ಮತ್ತು ಶಾಲು ನೀಡಿ ಗೌರವಿಸಿತು.

ಅನ್ನಪೂರ್ಣ ದೇವಸ್ಥಾನಕ್ಕೆ ಭೇಟಿ

ವಿಶ್ವನಾಥನ ದರ್ಶನ ಬಳಿಕ ಅನಂತ್ ಅಂಬಾನಿ ಅನ್ನಪೂರ್ಣ ದೇವಸ್ಥಾನಕ್ಕೆ ಬಂದರು. ಅಲ್ಲಿ ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿತು. ದೇವಾಲಯದ ಅರ್ಚಕ ಪಪ್ಪು ಮಹಾರಾಜ್ ಮಾರ್ಗದರ್ಶನದಲ್ಲಿ ವಿಶೇಷ ಕುಂಕುಮಾರ್ಚನೆ ನೆರವೇರಿಸಿದರು. ಅಂಬಾನಿ ಮಾ ಅನ್ನಪೂರ್ಣೆಯ ಪಾದಗಳಿಗೆ ತಲೆಬಾಗಿ ನಮಸ್ಕರಿಸಿದರು.

ಅನಂತ್ ಅಂಬಾನಿ ಕಾಶಿ ಭೇಟಿಯ ಜೊತೆಗೆ ದೇವಾಲಯಗಳಿಗೆ ನೀಡಿದ ದೇಣಿಗೆಗಳ ಮೊತ್ತವೂ ಸುದ್ದಿಯಲ್ಲಿದೆ. ಕೆಲವು ವರದಿಗಳ ಪ್ರಕಾರ, ಕಾಶಿ ವಿಶ್ವನಾಥ ಧಾಮಕ್ಕೆ 5 ಕೋಟಿ ರೂಪಾಯಿ ಮತ್ತು ಅನ್ನಪೂರ್ಣ ದೇವಸ್ಥಾನಕ್ಕೆ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ಮೂರು ವರ್ಷದಲ್ಲಿ 6 ಬಾರಿ ಕಾಶಿಗೆ ಭೇಟಿ

ಕಾಶಿ ವಿಶ್ವನಾಥನ ಸನ್ನಿಧಿಗೆ ಅಂಬಾನಿ ಕುಟುಂಬ ನಿರಂತರವಾಗಿ ಭೇಟಿ ನೀಡ್ತಿದೆ. ಕಳೆದ ಮೂರು ವರ್ಷಗಳಲ್ಲಿ ಕುಟುಂಬದ ಸದಸ್ಯರು ಹಲವು ಬಾರಿ ಭೇಟಿ ನೀಡಿದ್ದಾರೆ. ಜೂನ್ 16, 2026 ರಂದು ಅನಂತ್ ಅಂಬಾನಿ ಕೂಡ ಕಾಶಿಗೆ ಭೇಟಿ ನೀಡಿದ್ದರು. ಈ ವೇಳೆ ಕೆಲವು ವರದಿಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಅನಂತ್ ಅಂಬಾನಿ ಆರು ಬಾರಿ ವಿಶ್ವನಾಥನ ಸನ್ನಿಧಿಗೆ ಭೇಟಿ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ಅನಂತ್ ಅಂಬಾನಿ ಸನಾತನ ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯಗಳಲ್ಲಿ ಆಳವಾದ ನಂಬಿಕೆ ಹೊಂದಿದ್ದಾರೆ. ಅವರು ಶ್ರೀಕೃಷ್ಣನ ಪರಮ ಭಕ್ತ. ಈ ಹಿಂದೆ ಜಾಮ್‌ನಗರದಿಂದ ದ್ವಾರಕಾದವರೆಗೆ ಸುಮಾರು 140 ರಿಂದ 170 ಕಿಲೋಮೀಟರ್‌ಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕೇಶ ಮುಂಡನ ಹರಕೆಯನ್ನೂ ತೀರಿಸಿದ್ದಾರೆ. ದೇಶದ ಪ್ರಮುಖ ಪುಣ್ಯಕ್ಷೇತ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ಕಾಶಿ ವಿಶ್ವನಾಥ, ಸೋಮನಾಥ, ಕೇರಳದ ಗುರುವಾಯೂರು, ಕರ್ನಾಟಕದ ಕೊಲ್ಲೂರು ಮೂಕಾಂಬಿಕೆ, ಮುಂಬೈನ ಬಾಬುಲ್‌ನಾಥ್ ಹಾಗೂ ಶಿರಡಿ ಸಾಯಿಬಾಬಾ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರೇನ್‌ ವಿಳಂಬದಿಂದ ತಪ್ಪಿದ ವಿಮಾನ ಪ್ರಯಾಣ, ದಂಪತಿಗೆ ಪರಿಹಾರ ನೀಡುವಂತೆ ರೈಲ್ವೇಸ್‌ಗೆ ಸೂಚಿಸಿದ ಗ್ರಾಹಕ ಆಯೋಗ
ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಹುಟ್ಟಿನಿಂದಲೇ ಹಕ್ಕಿದೆಯೇ? ಸುಪ್ರೀಂ ಕೋರ್ಟ್‌ ಹೇಳೀದ್ದೇನು