
ಮುಂಬೈ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, ಉದ್ಯಮಿ ಅನಂತ್ ಅಂಬಾನಿ ಹಾಗೂ ಆಧ್ಯಾತ್ಮಿಕ ಗುರು ಸದ್ಗುರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹರಿದಾಡ್ತಿದೆ. ವೇದಿಕೆಯ ಮೇಲೆ ನಡೆದ ಒಂದು Awkward Moment ಇಂಟರ್ನೆಟ್‌ನಲ್ಲಿ ಹಲ್‌ಚೆಲ್ ಎಬ್ಬಿಸಿದೆ.
ಇತ್ತೀಚೆಗೆ ಮುಂಬೈನ ಗೇಟ್‌ವೇ ಆಫ್ ಇಂಡಿಯಾದಲ್ಲಿ Global Peace Honours 2026 ಕಾರ್ಯಕ್ರಮ ನಡೆಯಿತು. ವೇದಿಕೆಯ ಮೇಲೆ ಅನಂತ್ ಅಂಬಾನಿ ಅವರು ಸದ್ಗುರು ಜೊತೆ ಮಾತಾಡ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ಶಾರುಖ್ ಖಾನ್.. ಇಬ್ಬರ ನಡುವಿನ ಮಾತುಕತೆಯಲ್ಲಿ ಪಾಲ್ಗೊಳ್ಳಲು ಮುಂದಾಗುತ್ತಾರೆ.
ಶಾರುಖ್ ಖಾನ್ ಮಧ್ಯ ಪ್ರವೇಶಿಸಿದ ನಂತರ ಅನಂತ್ ಅಂಬಾನಿ 'ಸುಮ್ಮನಿರಿ' (Stay quiet) ಎಂದು ಬೆರಳಿನಲ್ಲಿ ಸನ್ನೆ ಮಾಡ್ತಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅನಂತ್ ಅಂಬಾನಿ ರಿಯಾಕ್ಷನ್ ನೋಡಿ ಶಾರುಖ್ ಖಾನ್, ಒಂದು ಕ್ಷಣ ಆಘಾತಕ್ಕೊಳಗಾದಂತೆ ಕಂಡುಬಂದರು. ಶಾರುಖ್ ಪ್ರತಿಕ್ರಿಯೆ ನೋಡಿ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಒಂದು ಕ್ಷಣ ಡಲ್ ಆದ ಶಾರುಖ್ ನಂತರ ಸುಧಾರಿಸಿಕೊಂಡು ವೇದಿಕೆ ಮೇಲೆ ಬರುತ್ತಿದ್ದ ಇತರೆ ಗಣ್ಯರೊಂದಿಗೆ ಮಾತನಾಡಲು ಮುಂದಾಗಿದ್ದಾರೆ.
ವಿಡಿಯೋ ನೋಡಿದ ನೆಟ್ಟಿಗರು ಅನಂತ್ ಅಂಬಾನಿ ಹಾಗೂ ಶಾರುಖ್ ಖಾನ್ ಅವರನ್ನು ಟ್ರೋಲ್ ಮಾಡ್ತಿದ್ದಾರೆ. ಅನಂತ್ ಅಂಬಾನಿಯ ಅಸಲಿ ಔರಾ ಫಾರ್ಮಿಂಗ್ (Proper Aura Farming) ಎನ್ನುತ್ತಿದ್ದಾರೆ. ಸದ್ಗುರು ಜೊತೆ ಮಾತನಾಡುತ್ತಿದ್ದಾಗ ಮಧ್ಯೆ ಬಾರದಂತೆ ಅನಂತ್ ಕೇವಲ 'ಒಂದು ನಿಮಿಷ ತಾಳಿ' ಎಂದು ಸನ್ನೆ ಮಾಡಿರಬಹುದು ಅಷ್ಟೇ ಎಂದು ಕೆಲವರು ಹೇಳ್ತಿದ್ದಾರೆ. ಆದರೆ ಶಾರುಖ್ ಅಭಿಮಾನಿಗಳು ಅನಂತ್ ಅಂಬಾನಿ ವರ್ತನೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೂಪರ್‌ಸ್ಟಾರ್‍ಗೆ ಸೌಜನ್ಯ ತೋರದೆ ಹೀಗೆ ಬೆರಳು ತೋರಿಸಿದ್ದು ಸರಿಯಲ್ಲ. ಇದು 'ಹಣದ ಪವರ್' ಎಂದು ಟ್ರೋಲ್ ಮಾಡ್ತಿದ್ದಾರೆ. ಅನಂತ್ ಅಂಬಾನಿ, ಶಾರುಖ್ ಖಾನ್ ಮತ್ತು ಸದ್ಗುರು ನಡುವಿನ ಈ ಕೆಲವೇ ಸೆಕೆಂಡುಗಳ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ.
Anant Ambani literally said keep quiet to SRK 😭😭
- Anant Ambani was having some chat with Sadhguru and suddenly SRK said something about Anant .
- Anant didn't like it and he said something and signaled SRK 🤫 look at the expression of Shahrukh Khan after that 😭
Anant Ambani ka alag hi AURA hai 🗿
— Jeet (@JeetN25) November 21, 2026
Global Peace Honours 2026 ಎಂಬುದು 26/11 ಮುಂಬೈ ಭಯೋತ್ಪಾದಕ ದಾಳಿಯ ಹುತಾತ್ಮರಿಗೆ ಗೌರವ ಸಲ್ಲಿಸಲು ಹಾಗೂ ಶಾಂತಿ, ಧೈರ್ಯ ಮತ್ತು ಮಾನವೀಯತೆ ಸಂಭ್ರಮಿಸಲು ಆಯೋಜಿಸಲಾದ ವಾರ್ಷಿಕ ಕಾರ್ಯಕ್ರಮ. ಈ ಕಾರ್ಯಕ್ರಮವು ನಿನ್ನೆ ನಡೆದಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಸ್ಥಾಪಿಸಿರುವ Divyaj Foundation ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು.
ಕಾರ್ಯಕ್ರಮದ ಉದ್ದೇಶ 2008ರ 26/11 ಮುಂಬೈ ದಾಳಿಯ 18ನೇ ವರ್ಷದ ಸ್ಮರಣಾರ್ಥವಾಗಿ, ಭಯೋತ್ಪಾದನೆಯ ವಿರುದ್ಧ ಹೋರಾಡಿದ ವೀರರು, ಭದ್ರತಾ ಸಿಬ್ಬಂದಿ ಹಾಗೂ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಶಾಂತಿಯ ಸಂದೇಶ ಸಾರುವುದು ಇದರ ಮುಖ್ಯ ಉದ್ದೇಶವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ