ರಿಲಯನ್ಸ್‌ ಕುಟುಂಬದಲ್ಲಿ ಆದ ಒಡಕು ನಮ್ಮ ನಡುವೆ ಆಗೋದಿಲ್ಲ, ಅನಂತ್‌ ಅಂಬಾನಿ ವಿಶ್ವಾಸ!

Published : Feb 29, 2024, 05:10 PM IST
ರಿಲಯನ್ಸ್‌ ಕುಟುಂಬದಲ್ಲಿ ಆದ ಒಡಕು ನಮ್ಮ ನಡುವೆ ಆಗೋದಿಲ್ಲ, ಅನಂತ್‌ ಅಂಬಾನಿ ವಿಶ್ವಾಸ!

ಸಾರಾಂಶ

ಮದುವೆಗೂ ಮುನ್ನ ಖಾಸಗಿ ಟಿವಿಗೆ ನೀಡಿದ ಸಂದರ್ಶನಲ್ಲಿ ಅನಂತ್‌ ಅಂಬಾನಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಂದೆ ಮುಖೇಶ್‌ ಅಂಬಾನಿ, ಸಹೋದರ ಆಕಾಶ್‌ ಹಾಗೂ ಸಹೋದರಿ ಇಶಾ ಅಂಬಾನಿ ಜೊತೆಗಿನ ಸಂಬಂಧದ ಬಗ್ಗೆಯೂ ಅವರವು ವಿವರವಾಗಿ ತಿಳಿಸಿದ್ದಾರೆ.  

ಮುಂಬೈ (ಫೆ.29): ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಚೇರ್ಮನ್‌ ಮುಖೇಶ್‌ ಅಂಬಾನಿಯ ಕಿರಿಯ ಪುತ್ರ 28 ವರ್ಷದ ಅನಂತ್‌ ಅಂಬಾನಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ನಡುವೆ ಖಾಸಗಿ ಟಿವಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅನಂತ್‌ ಅಂಬಾನಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ತನ್ನ ಒಡಹುಟ್ಟಿದವರಾದ ಆಕಾಶ್‌ ಅಂಬಾನಿ ಹಾಗೂ ಇಶಾ ಅಂಬಾನಿ ಕುರಿತಾಗಿ ಅವರು ಮಾತನಾಡಿದ್ದು, ಮುಖೇಶ್‌ ಅಂಬಾನಿ-ಅನಿಲ್‌ ಅಂಬಾನಿ ನಡುವೆ ಬಂದಿರುವಂಥ ವೈಮನಸ್ಯಗಳು ತಮ್ಮಲ್ಲಿ ಬರುವುದಿಲ್ಲ ಎನ್ನುವ ವಿಶ್ವಾಸವನ್ನು ವ್ಯಕ್ತಪಟಟಿಸಿದ್ದಾರೆ. ಆಕಾಶ್‌ ಹಾಗೂ ಇಆ ಅವರೊಂದಿಗೆ ಆತ್ಮೀಯವಾದ ಬಾಂಧವ್ಯವನ್ನು ನಾನು ಹಂಚಿಕೊಂಡಿದ್ದು ಮಾತ್ರವಲ್ಲ ನನ್ನ ಜೀವನಕ್ಕೆ ಅವರೇ ಸಲಹೆಗಾರರು ಎಂದು ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ನಡುವೆ ಯಾವುದೇ ಪೈಪೋಟಿಗಳೇ ಇಲ್ಲ. ಯಾಕೆಂದರೆ, ಅಕ್ಕ-ಅಣ್ಣ ನೀಡುವ ಸಲಹೆಗಳನ್ನು ನಾನು ಜೀವನದುದ್ದಕ್ಕೂ ಅನುಸರಿಸಲು ಬಯಸುತ್ತೇನೆ ಎಂದು ಅನಂತ್‌ ಅಂಬಾನಿ ಹೇಳಿದ್ದಾರೆ. ವಿವಾಹಪೂರ್ವ ಕಾರ್ಯಕ್ರಮಗಳ ಸಂಭ್ರಮಗಳು ಆರಂಭವಾಗುತ್ತಿರುವಂತೆ ಅನಂತ್‌ ಅಂಬಾನಿ ನೀಡಿರುವ ಸಂದರ್ಶನ ಭಾರೀ ವೈರಲ್‌ ಆಗಿದ್ದು, ಎಲ್ಲಾ ವಿಚಾರಗಳ ಬಗ್ಗೆ ಬಹಳ ಮುಕ್ತವಾಗಿ, ಪ್ರಬುದ್ಧವಾಗಿ ಮಾತನಾಡಿದ್ದಾರೆ.

ಸಂದರ್ಶನದ ವೇಳೆ ಅನಂತ್‌ ಅಂಬಾನಿ ತಮ್ಮ ಕುಟುಂಬದ ಡೈನಾಮಿಕ್ಸ್‌ ಬಗ್ಗೆ ಬಹಳ ವಿವರವಾಗಿ ಮಾತನಾಡಿದರು. ಅಣ್ಣ-ಅಕ್ಕ ಮಾತ್ರವಲ್ಲದೆ, ತಂದೆ ಮುಖೇಶ್‌ ಅಂಬಾನಿ ಅವರೊಂದಿಗಿನ ಬಾಂಧವ್ಯದ ಬಗ್ಗೆ ಮಾತನಾಡಿದರು. ಅದರೊಂದಿಗೆ ಕುಟುಂಬದ ವ್ಯವಹಾರಗಳಲ್ಲಿ ತಮ್ಮ ಭುಜದ ಮೇಲಿರುವ ಭಾರದ ಕುರಿತಾಗಿಯೂ ಮುಕ್ತವಾಗಿ ತಿಳಿಸಿದರು. ಆಕಾಶ್‌ ಹಾಗೂ ಇಶಾ ಅಂಬಾನಿ ಇಬ್ಬರೂ ತಮ್ಮ ಜೀವನದ ಸಲಹೆಗಾರರು ಎನ್ನುವ ಅನಂತ್‌ ಅಂಬಾನಿ, 'ನಮ್ಮ ನಡುವೆ ಯಾವುದೇ ಸ್ಪರ್ಧೆಗಳಿಲ್ಲ. ಇವರಿಬ್ಬರೂ ನನ್ನ ಅಲಹೆಗಾರರು. ನಾನು ಅವರ ಹನುಮಾನ್‌. ಅವರು ನೀಡುವ ಸಲಹೆಯನ್ನು ನಾನು ನನ್ನ ಜೀವನದುದ್ದಕ್ಕೂ ಪಾಲಿಸಲಿದ್ದೇನೆ' ಎಂದಿದ್ದಾರೆ.

ಅಂಬಾನಿ ಕುಟುಂಬದ ಹಿಂದಿನ ಜನರೇಷನ್‌ (ಮುಖೇಶ್‌ ಹಾಗೂ ಅನಿಲ್‌) ನಡುವೆ ಆದ ಭಿನ್ನಾಭಿಪ್ರಾಯದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅನಂತ್‌, ನಮ್ಮ ವಿಚಾರದಲ್ಲಿ ಹಾಗಾಗಲು ಸಾಧ್ಯವೇ ಇಲ್ಲ. ಏಕೆಂದರೆ, ನಮ್ಮ ಸಹೋದರರ ನಡುವೆ ಪ್ರೀತಿ ಹಾಗೂ ಬಾಂಧವ್ಯ ಬಹಳ ಅದ್ಭುತವಾಗಿದೆ ಎಂದಿದ್ದಾರೆ."ಅವರಿಬ್ಬರೂ ನನಗಿಂತ ಹಿರಿಯರು. ನಾನು ಅವರ ಹನುಮಂತ, ನನ್ನ ಅಣ್ಣ ನನ್ನ ರಾಮ ಮತ್ತು ನನ್ನ ಸಹೋದರಿ ನನಗೆ ತಾಯಿಯಂತಿದ್ದಾರೆ. ಅವರಿಬ್ಬರೂ ನನ್ನನ್ನು ಯಾವಾಗಲೂ ರಕ್ಷಿಸಿದ್ದಾರೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ಸ್ಪರ್ಧೆಯಿಲ್ಲ. ನಾವು ಒಟ್ಟಿಗೆ ಫೆವಿಕ್ವಿಕ್‌ನಂತೆ ಅಂಟಿಕೊಂಡಿದ್ದೇವೆ" ಎಂದು ಅನಂತ್‌ ನಗುತ್ತಾ ಹೇಳಿದ್ದಾರೆ.

ನೋಡಲು ನೀವು ನಿಮ್ಮ ಅಜ್ಜ ಧೀರೂಬಾಯಿ ಅಂಬಾನಿ ರೀತಿಯಲ್ಲೇ ಕಾಣುತ್ತಿದ್ದೀರಿ ಎನ್ನುವ ಬಗ್ಗೆ ಮಾತನಾಡಿದ ಅವರು, ಹಾಗೇನಾದರೂ ನಾನು ಕಾಣುತ್ತಿದ್ದರೆ ಅದು ನನಗೆ ಹೆಮ್ಮೆ ಎಂದಷ್ಟೇ ಹೇಳಬಲ್ಲೆ. ಆ ಮಟ್ಟಕ್ಕೆ ತಲುಪಿದ್ದೇನೆ ಎಂದು ಭಾವಿಸುತ್ತಿಲ್ಲ ಆದರೆ ಕೇವಲ ತನ್ನ ಅಜ್ಜನ ಹಾದಿಯಲ್ಲಿ ಸಾಗುತ್ತಿದ್ದೇನೆ, ಶ್ರೀಮಂತ ಪರಂಪರೆಯನ್ನು ಮುಂದುವರಿಸಿಕೊಂಡು ದೇಶಕ್ಕೆ ಸೇವೆ ಸಲ್ಲಿಸುವುದು ತನ್ನ ಕರ್ತವ್ಯವೆಂದು ಪರಿಗಣಿಸಿದ್ದೇನೆ ಎಂದಿದ್ದಾರೆ. ಅಂಬಾನಿ ವಂಶಕ್ಕೆ ಸೇರಿದ ವ್ಯಕ್ತಿ ಎನ್ನುವ ಕಾರಣಕ್ಕೆ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅನಂತ್ ಮುಗುಳ್ನಗುತ್ತಾ, "ಯಾವುದೇ ಒತ್ತಡವಿಲ್ಲ, ನಾನು ಏನು ಮಾಡುತ್ತೇನೆ, ಅದು ನನ್ನ ಹೃದಯದಿಂದ ಮಾಡುತ್ತೇನೆ ಮತ್ತು ದೇವರು ಬಯಸಿದ್ದೆಲ್ಲ ಅಂತಿಮವಾಗಿ ಸಂಭವಿಸುತ್ತದೆ. ನೀವು ನಿಮ್ಮ ಭವಿಷ್ಯವನ್ನು ಯೋಜಿಸಲು ಸಾಧ್ಯವಿಲ್ಲ. ಅದನ್ನು ಭಗವಂತನೇ ರೂಪಿಸಿರುತ್ತಾನೆ. ನಾನು ನನ್ನ ತಂದೆಯ ದೃಷ್ಟಿಯನ್ನು ಅನುಸರಿಸುತ್ತೇನೆ, ಅದು ನನಗೆ ಬೆಳೆಯಲು ಸಹಾಯ ಮಾಡಿದೆ' ಎಂದು ಹೇಳಿದ್ದಾರೆ.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹಕ್ಕೆ ಈ ರೀತಿ ಇರುತ್ತಂತೆ ಡ್ರೆಸ್‌ಕೋಡ್‌!

ಅನಂತ್ ಅವರು ತಮ್ಮ ತಂದೆ ಮುಖೇಶ್ ಅಂಬಾನಿ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದರು, ಅವರನ್ನು ಕಟ್ಟುನಿಟ್ಟಾದ ತಂದೆಗಿಂತ ಹೆಚ್ಚಾಗಿ ಸ್ನೇಹಿತ ಎಂದಿದ್ದಾರೆ. ತನ್ನ ಪ್ರಯತ್ನಗಳನ್ನು ಸಾಧಿಸಲು ತನ್ನ ತಂದೆಯ ಬೆಂಬಲದ ಪಾತ್ರವನ್ನು ಅವನು ಒತ್ತಿಹೇಳಿದನು. "ಅವರು ಕಟ್ಟುನಿಟ್ಟಲ್ಲ. ಯಾವುದೇ ಸಾಂಪ್ರದಾಯಿಕ ಗುಜರಾತ್ ಕುಟುಂಬದಂತೆ, ನಾವು ಅವರ ಬಗ್ಗೆ ಸಾಕಷ್ಟು ಗೌರವವನ್ನು ಹೊಂದಿದ್ದೇವೆ. ಅವರ ಬೆಂಬಲದಿಂದಾಗಿ ನಾನು ಇದನ್ನೆಲ್ಲ ನಿರ್ಮಿಸಲು (ವಂತರಾ) ಸಾಧ್ಯವಾಯಿತು" ಎಂದಿದ್ದಾರೆ.

ಅಂಬಾನಿ ಮಗನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ವಿಶ್ವದ ಕೋಟ್ಯಧಿಪತಿಗಳು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು