
ಮಕ್ಕಳಂತೆ ಗಿರಿಗಿಟ್ಲೆ ರೀತಿ ಗಿರಿಗಿರಿ ತಿರುಗಿದ ಅನಂತ ಅಂಬಾನಿ ದೃಷ್ಯ ಇಂದು ವೈರಲ್ ಆಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿರುವ 'ರಿಲಯನ್ಸ್ ಗ್ರೀನ್ಸ್'ನಲ್ಲಿ ಅಂಬಾನಿ ಕುಟುಂಬ ಹಮ್ಮಿಕೊಂಡಿದ್ದ ಅದ್ಧೂರಿ ನವರಾತ್ರಿ ಕಾರ್ನಿವಲ್ (ಮೇಳ) ನಲ್ಲಿ ಈ ಘಟನೆ ನಡೆದಿದೆ. ರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಅನಂತ್ ಅಂಬಾನಿ, ಪತ್ನಿ ರಾಧಿಕಾ ಮರ್ಚೆಂಟ್, ಎಂ.ಎಸ್. ಧೋನಿ ಮತ್ತು ಸ್ನೇಹಿತರೆಲ್ಲರೂ ಸೇರಿ ಸದ್ದಿಲ್ಲದೆ ಮೇಳದ ಆಟಿಕೆಗಳ ರೈಡ್‌ಗಳನ್ನು ಆನಂದಿಸಲು ಮುಂದಾಗಿದ್ದಾರೆ.
ಜಾಮ್‌ನಗರದ ಜಾತ್ರೆಯಲ್ಲಿದ್ದ ಡ್ರ್ಯಾಗನ್ ರೈಡ್ ಹಾಗೂ ತೀವ್ರವಾಗಿ ಗಿರಗಿರನೆ ತಿರುಗುವ 'ಬ್ರೇಕ್ ಡ್ಯಾನ್ಸ್/ರೊಟೇಟಿಂಗ್ ಕ್ಯಾಬಿನ್' ರೈಡ್‌ನಲ್ಲಿ ಅನಂತ್ ಅಂಬಾನಿ ಮಕ್ಕಳಂತೆ ಅತ್ಯಂತ ಉತ್ಸಾಹದಿಂದ ಕುಳಿತು ಎಂಜಾಯ್ ಮಾಡಿದ್ದಾರೆ. ಗಿರಿಗಿಟ್ಲೆಯಂತೆ ಜೋರಾಗಿ ತಿರುಗುವ ಆ ರೈಡ್‌ನಲ್ಲಿ ತನ್ನೊಂದಿಗೆ ಜಂಟಿಯಾಗಿ ಕುಳಿತುಕೊಳ್ಳುವಂತೆ ಅನಂತ್ ಅಂಬಾನಿ ಪಕ್ಕದಲ್ಲೇ ಇದ್ದ ಧೋನಿ ಅವರನ್ನು ಬಹಳ ಪ್ರೀತಿಯಿಂದ, ಮುಗ್ಧವಾಗಿ ಕೈಸನ್ನೆ ಮಾಡಿ ಕರೆಯುತ್ತಾರೆ.
ಅನಂತ್ ಅವರ ಆಫರ್ ಕಂಡು 'ಕ್ಯಾಪ್ಟನ್ ಕೂಲ್' ಧೋನಿ ನೀಡಿದ ರಿಯಾಕ್ಷನ್ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದೆ. ಅಷ್ಟು ಜೋರಾಗಿ ತಿರುಗುವ ರೈಡ್‌ನಲ್ಲಿ ಕೂತರೆ ನನಗೆ ತಲೆ ಸುತ್ತಿ ವಾಂತಿ ಬರುತ್ತದೆ ಎಂಬಂತೆ ಹೊಟ್ಟೆ ಹಾಗೂ ಬಾಯಿಗೆ ಕೈ ಅಡ್ಡ ಹಿಡಿದು ಧೋನಿ ತಮಾಷೆಯಾಗಿ ನಿರಾಕರಿಸುತ್ತಾರೆ.
ಶತಕೋಟ್ಯಧಿಪತಿ ಅನಂತ್ ಅಂಬಾನಿ ಮಕ್ಕಳಂತೆ ಆಟವಾಡುತ್ತಿದ್ದರೆ, ಇತ್ತ ವಿಶ್ವವಿಜೇತ ನಾಯಕ ಧೋನಿ ಹೆದರಿದವರಂತೆ ರಿಯಾಕ್ಷನ್ ಕೊಡುತ್ತಿರುವುದನ್ನು ಕಂಡು ಸುತ್ತಲೂ ಕಾವಲಿಗೆ ನಿಂತಿದ್ದ ಗಂಭೀರ ಮುಖದ ಬಾಡಿಗಾರ್ಡ್‌ಗಳು ಹಾಗೂ ಸೆಕ್ಯುರಿಟಿ ಸಿಬ್ಬಂದಿಗೂ ಸಹ ತಮ್ಮ ನಗು ತಡೆದುಕೊಳ್ಳಲು ಸಾಧ್ಯವಾಗಿಲ್ಲ. ಇಷ್ಟೊಂದು ದೊಡ್ಡ ಶ್ರೀಮಂತರಾಗಿದ್ದರೂ ಸಾಮಾನ್ಯರಂತೆ ಐಸ್‌ಕ್ರೀಮ್ ತಿನ್ನುತ್ತಾ, ಜಾತ್ರೆಯ ಸಣ್ಣಪುಟ್ಟ ರೈಡ್‌ಗಳಲ್ಲಿ ಮಕ್ಕಳಂತೆ ಗಿರಗಿಟ್ಲೆ ಆಡುವುದನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಜನ ಇವರಿಬ್ಬರ ಮುಗ್ಧತೆ ಹಾಗೂ ಸರಳತೆಯನ್ನು ಕೊಂಡಾಡುತ್ತಿದ್ದಾರೆ. ಅಷ್ಟೇ ಅಲ್ಲ ತಾವೊಬ್ಬರೇ ರೈಡ್‌ನಲ್ಲಿ ಕುಳಿತು ಎಂಜಾಯ್ ಮಾಡುವುದಷ್ಟೇ ಅಲ್ಲದೆ, ಅನಂತ್ ಅಂಬಾನಿ ತಮ್ಮ ಸುತ್ತಲೂ ಕಾವಲು ಕಾಯುತ್ತಿದ್ದ ಗಂಭೀರ ಮುಖದ ಸೆಕ್ಯುರಿಟಿ ಗಾರ್ಡ್‌ಗಳನ್ನೂ ಸಹ ಬಲವಂತವಾಗಿ ಕರೆದು ತಮ್ಮ ಪಕ್ಕದ ಸೀಟುಗಳಲ್ಲಿ ಕೂರಿಸಿದ್ದಾರೆ. ಗನ್ ಹಿಡಿದು ಅಲರ್ಟ್ ಆಗಿರಬೇಕಾದ ಬಾಡಿಗಾರ್ಡ್‌ಗಳು ರೈಡ್‌ನಲ್ಲಿ ಗಿರಗಿರನೆ ತಿರುಗುತ್ತಾ ಮುಜುಗರದಿಂದ ಮತ್ತು ಭಯದಿಂದ ನಗುತ್ತಿರುವ ದೃಶ್ಯ ವಿಡಿಯೋದ ಹೈಲೈಟ್ ಆಗಿದೆ.
ಇಡೀ ಆಟದ ವೇಳೆ ಪತ್ನಿ ರಾಧಿಕಾ ಮರ್ಚೆಂಟ್ ಅವರು ಅನಂತ್ ಬೆನ್ನಿಗೆ ನಿಂತು ಪ್ರೋತ್ಸಾಹಿಸುತ್ತಿದ್ದರು. ರೈಡ್ ಮುಗಿದ ನಂತರ ಎಲ್ಲರೂ ಒಟ್ಟಿಗೆ ಸೇರಿ ಜಾತ್ರೆಯ ಸ್ಟಾಲ್‌ಗಳಲ್ಲಿ ನಿಂತು ಸಾಮಾನ್ಯರಂತೆ ಐಸ್‌ಕ್ರೀಮ್ ಸವಿಯುತ್ತಾ ಮಧ್ಯರಾತ್ರಿಯ ಸವಿನೆನಪನ್ನು ಕ್ಯಾಮೆರಾದಲ್ಲಿ ಸೆರೆಹಿಡಿದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ