
ಜಾಮ್ನಗರ (ನ.21) ಅಸ್ಸಾಂನಲ್ಲಿ ಗೋಗಾಮುಖ್ನಲ್ಲಿ ಹುಟ್ಟಿದ ಆನೆ ಮರಿಯ ಕಾಲುಗಳು ಮುರಿದಿತ್ತು. ಇತರ ಆರೋಗ್ಯ ಸಮಸ್ಯೆಗಳು ಆನೆ ಮರಿಯನ್ನು ಇನ್ನಿಲ್ಲದಂತೆ ಕಾಡಿತ್ತು. ತಾಯಿ ಆನೆ 11 ವರ್ಷ ವಯಸ್ಸು. ಮೊದಲ ಹೆರಿಗೆ ನೋವಿನಲ್ಲಿ ಆನೆ ಮರಿಯನ್ನು ಒದ್ದಿತ್ತು. ಹೀಗಾಗಿ ಆನೆ ಮರಿ ಕಾಲುಗಳು ಮುರಿದಿತ್ತು. ತಾಯಿ ಆನೆ ಜೊತೆ ತುಂಟಾಟ ಆಡಬೇಕಿದ್ದ ಆನೆ ಮರಿ ಎದ್ದು ನಿಲ್ಲಲು ಆಗದೆ ಜನಿಸಿತ್ತು. ಇತ್ತ ತಾಯಿ ಆನೆಯ ಮೊದಲ ಹಾಲು ಕೂಡ ಸಿಗಲಿಲ್ಲ. ಪರಿಣಾಮ ಪುಟ್ಟ ಆನೆ ಮರಿ ಸಂಪೂರ್ಣ ಅಸ್ವಸ್ಥಗೊಂಡಿತು. ಆನೆ ಮರಿ ಆರೋಗ್ಯ ಹದಗೆಡುತ್ತಿದ್ದಂತೆ ಅನಂತ್ ಅಂಬಾನಿ ವಂತಾರ ನೇರವಾಗಿ ಅಸ್ಸಾಂನಿಂದ ಗುಜರಾತ್ನ ಜಾಮ್ನಗರಕ್ಕೆ ಆನೆ ಮರಿಯನ್ನು ಏರ್ಲಿಫ್ಟ್ ಮಾಡಿದೆ.
ಅನಂತ್ ಅಂಬಾನಿಯ ವಂತಾರ ವಿಶ್ವದಲ್ಲೇ ಅತ್ಯಂತ ಸುಸಜ್ಜಿತ ಪ್ರಾಣಿ ಪುನರ್ವಸತಿ ಹಾಗೂ ಆರೋಗ್ಯ ಕೇಂದ್ರ. ಅಸ್ಸಾಂನ ಆನೆ ಮರಿ ಅಸ್ವಸ್ಥವಾಗಿ ಜನಸಿದೆ ಅನ್ನೋ ಮಾಹಿತಿ ಸಿಗುತ್ತಿದ್ದಂತೆ ವಂತಾರದಿಂದ ವದ್ಯರ ತಂಡ ಅಸ್ಸಾಂ ತಲುಪಿತ್ತು. ನಿರಂತರ ಚಿಕಿತ್ಸೆ ನೀಡಿದ್ದರು. ಆದರೆ 7 ವಾರಗಳಾಗುತ್ತಿದ್ದಂತೆ ಆನೆ ಮರಿ ಆರೋಗ್ಯ ಕ್ಷೀಣಿಸಿತ್ತು. ಹೀಗಾಗಿ ಆತಂಕವೂ ಹೆಚ್ಚಾಯಿತು. ಅಸ್ಸಾಂನಿಂದ ಜಾಮ್ನಗರಕ್ಕೆ 2500 ಕಿಲೋಮೀಟರ್ ದಾರಿಯಲ್ಲಿ ಸಾಗಿಸುವುದು ಆನೆ ಮರಿಯನ್ನು ಮತ್ತಷ್ಟು ಅಸ್ವಸ್ಥ ಮಾಡುವ ಸಾಧ್ಯತೆ ಇತ್ತು. ಹೀಗಾಗಿ ಅಸ್ಸಾಂನಿಂದ ವಿಮಾನದ ಮೂಲಕ ಆನೆ ಮರಿಯನ್ನು ಏರ್ಲಿಫ್ಟ್ ಮಾಡಲಾಗಿದೆ.
ವಂತಾರ ಸಂಸ್ಥಾಪಕ ಅನಂತ್ ಅಂಬಾನಿ ಪ್ರಾಣಿ ಪಕ್ಷಿಗಳ ಮೇಲೆ ಅತೀವ ಕಾಳಜಿ ವಹಿಸುತ್ತಾರೆ. ಪರಿಣಾಮ ಈ ರೀತೀ ಏರ್ಲಿಫ್ಟ್ ಮಾಡುತ್ತಿರುವ ಮೂರನೇ ಕಾರ್ಯಾಚರಣೆ ಇದಾಗಿದೆ. ಕಳೆದ 7 ವಾರಗಳಿಂದ ಆನೆ ಮರಿ ನಿರಂತರ ಹೋರಾಟ ಮಾಡುತ್ತಿದೆ. ಈ ಪುಟ್ಟ ಆನೆ ಮರಿಯ ಆತ್ಮಸ್ಥೈರ್ಯ, ಧೈರ್ಯ ಕುಗ್ಗಿಲ್ಲ. ನೋವಿನೊಂದಿಗೆ ಸೆಣಸಾಡಿದ ಆನೆ ಮರಿಯನ್ನು ಎದ್ದು ನಿಲ್ಲುವಂತೆ ಮಾಡುವ ಗುರಿ ನಮ್ಮದು. ಆನೆ ಮರಿ ಓಡಾಡುವಂತೆ ಮಾಡುವುದು ನಮ್ಮ ಗುರಿ . ಇದಕ್ಕಾಗಿ ನಾವು ಎಲ್ಲವನ್ನು ಧಾರೆ ಎರೆಯುತ್ತೇವೆ ಎಂದು ವಂತಾರ ಸಿಇಒ ವಿವಾನ್ ಕರಾಣಿ ಹೇಳಿದ್ದಾರೆ.
ನವೆಂಬರ್ 20 ರಂದು ಗುವ್ಹಾಟಿಯಿಂದ ಜಾಮ್ನಗರಕ್ಕೆ ವಿಶೇಷ ವಿಮಾನದ ಮೂಲಕ ಆನೆ ಮರಿ ಪ್ರಯಾಣ ಬೆಳೆಸಿದೆ. ತಲೆಯ ಹುಣ್ಣುಗಳು, ಮುರಿದ ಕಾಲು, ಜೊತೆಗೆ ಹಲವು ಕಾಯಿಲೆಗಳಿಂದ ಬಳಲುತ್ತಿರುವ ಆನೆ ಮರಿಗೆ ಪ್ರಯಾಣದಲ್ಲಿ ಯಾವುದೇ ಸಮಸ್ಯೆಯಾಗದಂತೆ ಮಾಡಲಾಗಿತ್ತು. ಇಡೀ ಪ್ರಯಾಣದಲ್ಲಿ ಆನೆ ಮರಿಗೆ ಹೃದಯ ಬಡಿತ, ಉಸಿರಾಟ ಪರಿಶೀಲಿಸುತ್ತಾ ಸಾಗಿದ್ದಾರೆ. ಆನೆ ಮರಿ ಸೊಂಡಿಲ ಹಿಡಿದು ಧೈರ್ಯ ತುಂಬುತ್ತಾ ವಂತಾರ ವೈದ್ಯರು ಪ್ರಯಾಣ ಮಾಡಿದ್ದಾರೆ. ಇಡೀ ವಂತಾರ ತಂಡ ಇದೀಗ ಆನೆ ಮರಿಯ ಆರೈಕೆಯಲ್ಲಿ ತೊಡಗಿದೆ.
ಇತ್ತೀಚೆಗೆ ಕೇರಳದಿಂದ ಮಾಯಾ ಅನ್ನೋ ಹೆಣ್ಣು ಮರಿ ಆನೆಯನ್ನು ಅರಣ್ಯ ಇಲಾಖೆ ವಂತಾರಾಗೆ ಏರ್ಲಿಫ್ಟ್ ಮಾಡಿತ್ತು. ಅನಂತ್ ಅಂಬಾನಿಯ ವಂತಾರ ಇದೀಗ ದೇಶದ ಮೂಲೆ ಮೂಲೆಯ ಪ್ರಾಣಿಗಳಿಗೆ ಆಸರೆಯಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ