
ಕೀವ್ (ಮಾ. 6): ರಷ್ಯಾ (Russia) ಮತ್ತು ಉಕ್ರೇನ್ (Ukraine)ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊರತಾಗಿಯೂ ಉಕ್ರೇನ್‌ನಲ್ಲಿರುವ ಭಾರತೀಯ ವ್ಯಕ್ತಿಯೊಬ್ಬರು (Indian) ದೇಶವನ್ನು ತೊರೆಯಲು ನಿರಾಕರಿಸಿದ್ದಾರೆ. ಉಕ್ರೇನ್ ದೇಶದಲ್ಲಿರುವ ಭಾರತೀಯರನ್ನು ಭಾರತವು ಆಪರೇಷನ್ ಗಂಗಾ (Operation Gana) ಮೂಲಕ ರಕ್ಷಣೆ ಮಾಡುತ್ತಿದೆ. ಆದರೆ, ತನ್ನ ಪತ್ನಿ ಉಕ್ರೇನಿಯನ್, ಆಕೆಯನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಲು ಸಾಧ್ಯವಿಲ್ಲದ ಕಾರಣ ನಾನು ಉಕ್ರೇನ್ ನಲ್ಲಿಯೇ ಉಳಿಯುತ್ತೇನೆ ಎಂದು ಹೇಳಿದ್ದಾರೆ.
"ನಾನು ಭಾರತೀಯ ಪ್ರಜೆ, ಹಾಗಾಗಿ ನಾನು ಭಾರತಕ್ಕೆ ಹೋಗಬಲ್ಲೆ ಆದರೆ ಉಕ್ರೇನಿಯನ್ನಾಗಿರುವ ನನ್ನ ಹೆಂಡತಿ ಬರಲು ಸಾಧ್ಯವಿಲ್ಲ. ಭಾರತೀಯರನ್ನು ಮಾತ್ರ ಸ್ಥಳಾಂತರಿಸಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ.ನನ್ನ ಕುಟುಂಬವನ್ನು ಇಲ್ಲಿ ಬಿಟ್ಟು ಭಾರತಕ್ಕೆ ಹೋಗಲಾರೆ" ಎಂದು ಗಗನ್ (gagan) ಹೆಸರಿನ ಭಾರತೀಯ ಪ್ರಜೆ ತಿಳಿಸಿದ್ದಾರೆ. ಗಗನ್ ಇತ್ತೀಚೆಗೆ ಯುದ್ಧದ ತೀವ್ರತೆ ಹೆಚ್ಚಿರುವ ಕೀವ್ ನಿಂದ (Kiev)ಪಲಾಯನ ಮಾಡಿದ್ದಾರೆ. ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಈಕೆಯನ್ನು ಸ್ಥಳಾಂತರ ಮಾಡುವುದು ಸುಲಭವಿಲ್ಲ. ಸದ್ಯಕ್ಕೆ ಎಲ್ ವೀವ್ ನಲ್ಲಿ ಸ್ನೇಹಿತರ ಮನೆಯಲ್ಲಿದ್ದು, ಶೀಘ್ರದಲ್ಲಿಯೇ ಪೋಲೆಂಡ್ ಗೆ ತೆರಳಲಿರುವುದಾಗಿ ತಿಳಿಸಿದ್ದಾರೆ.
ರಷ್ಯಾ ಪ್ರಾಥಮಿಕವಾಗಿ ಪೂರ್ವ ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವುದರಿಂದ ಸಾಕಷ್ಟು ಸುರಕ್ಷಿತವಾದ ನಗರವಾದ ಎಲ್ವಿವ್‌ನಲ್ಲಿ ಉಕ್ರೇನ್ ನ ಬಹಳಷ್ಟು ಜನರು ಸ್ವಲ್ಪ ನಿರಾಳತೆಯನ್ನು ಅನುಭವಿಸಿದ್ದಾರೆ. ಅದಲ್ಲದೆ, ಪೋಲೆಂಡ್ ಗೆ ಪಲಾಯನ ಮಾಡಲು ಎಲ್ ವೀವ್ (Lviv) ಪ್ರಮುಖ ಮಾರ್ಗ ಎನಿಸಿದೆ. ಇದರ ನಡುವೆ ಭಾನುವಾರ ಭಾರತಕ್ಕೆ ಬಂದಿಳಿಯಲಿರುವ 889 ವಿದ್ಯಾರ್ಥಿಗಳು ಸೇರಿದಂತೆ ಉಕ್ರೇನ್‌ನಿಂದ ಈವರೆಗೂ ಸುಮಾರು 6,200 ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಭಾನುವಾರ ಹೇಳಿದ್ದಾರೆ.
ನಾಲ್ವರು ಕ್ಯಾಬಿನೆಟ್ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ಜನರಲ್ (ನಿವೃತ್ತ) ವಿಕೆ ಸಿಂಗ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರು ಕಳೆದ ಹಲವು ದಿನಗಳಿಂದ ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಬೇರೆ ದೇಶದವರು ಭಾರತದ ಭಾವುಟದಿಂದ ರಕ್ಷಣೆ ಪಡೆಯುತ್ತಿದ್ರು, ಉಕ್ರೇನ್‌ನಿಂದ ಬಂದ ವೇಣು ಹೇಳಿಕೆ
ಇಂದು ಮೂರನೇ ಸುತ್ತಿನ ಮಾತುಕತೆ: ಉಕ್ರೇನ್ ಮತ್ತು ರಷ್ಯಾ ನಡುವೆ ಮೂರನೇ ಸುತ್ತಿನ ಶಾಂತಿ ಮಾತುಕತೆ (Third round of peace talks ) ಸೋಮವಾರ ನಡೆಯಲಿದೆ ಎಂದು ಝೆಲೆನ್ಸ್ಕಿಯ ಸರ್ವೆಂಟ್ ಆಫ್ ದಿ ಪೀಪಲ್ ಪಾರ್ಟಿಯ ಸಂಸದೀಯ ವಿಭಾಗದ ಮುಖ್ಯಸ್ಥ ಮತ್ತು ಮಾತುಕತೆಯಲ್ಲಿ ಉಕ್ರೇನ್ ನಿಯೋಗದ ಸದಸ್ಯ ಡೇವಿಡ್ ಅರಾಖಮಿಯಾ ಹೇಳಿದ್ದಾರೆ. ಬೆಲಾರಸ್‌ನಲ್ಲಿ ನಡೆದ ಕೊನೆಯ ಮಾತುಕತೆಗಳು ಸಂಪೂರ್ಣವಾಗಿ ಒಪ್ಪಿಗೆಯಾಗಿಲ್ಲ ಎಂದು ವರದಿಯಾಗಿದ್ದವು. ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದ ಸೇನಾ ದಾಳಿ ನಡೆಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಿರ್ಧಾರ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ರಷ್ಯಾ-ಉಕ್ರೇನ್ ಯುದ್ಧವು ಈಗ 11 ದಿನಗಳಿಂದ ಮುಂದುವರೆದಿದ್ದು, ಉಕ್ರೇನ್‌ನಲ್ಲಿ ನೆಲೆಸಿರುವ ಲಕ್ಷಾಂತರ ಉಕ್ರೇನಿಯನ್ನರು ಮತ್ತು ವಿದೇಶಿಗರು ಯುದ್ಧಪೀಡಿತ ದೇಶವನ್ನು ತೊರೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ.
Russia Ukraine war : ಖಾರ್ಕೀವ್ ನ ಪರಮಾಣು ಸಂಶೋಧನಾ ಕೇಂದ್ರದ ಮೇಲೆ ರಷ್ಯಾ ರಾಕೆಟ್ ದಾಳಿ
ಈ ನಡುವೆ ಉಕ್ರೇನ್‌ನ ರಾಷ್ಟ್ರೀಯ ಭದ್ರತಾ ಸೇವೆಯ (Ukraine's national security service) ಪ್ರಕಾರ, ರಷ್ಯಾದ ಪಡೆಗಳು ಖಾರ್ಕಿವ್ ನಗರದ ಭೌತಶಾಸ್ತ್ರ ಸಂಸ್ಥೆಯೊಂದರ ಮೇಲೆ ರಾಕೆಟ್‌ಗಳನ್ನು ಹಾರಿಸುತ್ತಿದ್ದು, ಅದು ಪರಮಾಣು ವಸ್ತು ಮತ್ತು ರಿಯಾಕ್ಟರ್(uclear material and a reactor ) ಅನ್ನು ಹೊಂದಿರುವ ಕೇಂದ್ರವಾಗಿದ್ದು, 'ದೊಡ್ಡ ಪ್ರಮಾಣದ ಪರಿಸರ ವಿಪತ್ತಿಗೆ' ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ. ಖಾರ್ಕಿವ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ಅಂಡ್ ಟೆಕ್ನಾಲಜಿಯಲ್ಲಿ( Kharkiv Institute of Physics and Technology) ರಷ್ಯನ್ನರು ಗ್ರಾಡ್ ಲಾಂಚರ್‌ಗಳಿಂದ (Grad launchers) ದಾಳಿ ನಡೆಸುತ್ತಿದ್ದಾರೆ ಎಂದು ಭದ್ರತಾ ಸೇವೆಯು ಭಾನುವಾರ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ