ಆಸ್ಟ್ರೇಲಿಯಾದ ಆಸ್ಕರ್ ನಾಮನಿರ್ದೇಶಿತ ನಿರ್ಮಾಪಕ ಡೇವಿಡ್ ಬ್ರಾಡ್ಬರಿ ಅವರನ್ನು ಭಾರತದಲ್ಲಿ ಬಂಧಿಸಲಾಗಿರುವ ಘಟನೆ ನಡೆದಿದೆ. ಈ ಮೂಲಕ 12 ವರ್ಷಗಳ ಹಿಂದಿನ ಸೇಡನ್ನು ತೀರಿಸಿಕೊಳ್ಳಲಾಗಿದೆ ಎನ್ನಲಾಗಿದೆ.
2012 ರಲ್ಲಿ ತಮಿಳುನಾಡಿನಲ್ಲಿ ನಡೆದ ಕೂಡಂಕುಳಂ ಪರಮಾಣು ಸ್ಥಾವರದ ವಿರುದ್ಧದ ಪ್ರತಿಭಟನೆಗಳ ಕುರಿತು ಚಲನಚಿತ್ರವನ್ನು ನಿರ್ಮಿಸಿ ವಿವಾದಕ್ಕೆ ಒಳಗಾಗಿದ್ದ ಆಸ್ಟ್ರೇಲಿಯಾದ ಸಾಕ್ಷ್ಯಚಿತ್ರ ನಿರ್ಮಾಪಕ, ಆಸ್ಕರ್ ನಾಮನಿರ್ದೇಶಕ ಡೇವಿಡ್ ಬ್ರಾಡ್ಬರಿ ಅವರನ್ನು ಭಾರತಕ್ಕೆ ಬರದಂತೆ ತಡೆಯಲಾಗಿದೆ. ವಿಮಾನ ನಿಲ್ದಾಣದಲ್ಲಿಯೇ ಡೇವಿಡ್ ಅವರನ್ನು ಬಂಧಿಲಾಗಿದೆ. ಆದರೆ ಮಕ್ಕಳಾದ ನಕೀಟಾ ಬ್ರಾಡ್ಬರಿ (21) ಮತ್ತು ಒಮರ್ ಬ್ರಾಡ್ಬರಿ (14) ಅವರಿಗೆ ಪ್ರವೇಶ ನೀಡಲಾಗಿದೆ. 24 ಗಂಟೆಗಳ ಕಾಲ ಬಂಧಿಸಿ ಇಡಲಾಗಿದೆ ಎಂದು ವರದಿಯಾಗಿದೆ.
73 ವರ್ಷದ ಬ್ರಾಡ್ಬರಿ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ತಮ್ಮ ಮಕ್ಕಳೊಂದಿಗೆ ಇದೇ ಸೆಪ್ಟೆಂಬರ್ 10ರಂದು ಬಂದಿಳಿದ್ದರು. ಐದು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಯೋಜನೆಯೊಂದಿಗೆ ಭಾರತದಾದ್ಯಂತ ಎರಡು ವಾರಗಳ ಪ್ರವಾಸವನ್ನು ಕೈಗೊಳ್ಳಲು ಕುಟುಂಬ ಉದ್ದೇಶಿಸಿದ್ದರು. ಆದರೆ ಪ್ರವೇಶ ನಿರಾಕರಿಸಲಾಗಿದೆ. 2012ರಲ್ಲಿ ಡೇವಿಡ್ ಅವರು ಪತ್ನಿ ಸಹಿತ (ಕೆಲ ವರ್ಷಗಳ ಹಿಂದೆ ಇವರು ಕ್ಯಾನ್ಸರ್ನಿಂದ ತೀರಿಕೊಂಡಿದ್ದಾರೆ) ಭಾರತಕ್ಕೆ ಬಂದಿದ್ದರು. ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಸದಸ್ಯರಾಗಿದ್ದರಿಂದ ಅವರು ಭಾರತ ಪ್ರವಾಸ ಕೈಗೊಂಡಿದ್ದರು. ಆ ಸಮಯದಲ್ಲಿ ಕುಟುಂಬಸ್ಥರು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಇಡಿಂತಕರೈ ಎಂಬ ಕರಾವಳಿ ಗ್ರಾಮಕ್ಕೆ ಭೇಟಿ ನೀಡಿದ್ದರು.
undefined
ಎಲ್ಲೆಡೆ ಮಗಳನ್ನು ಕರೆದೊಯ್ಯುವ ಐಶ್ವರ್ಯಾ: ಎಲ್ಲರ ಕಾಡ್ತಿರೋ ಪ್ರಶ್ನೆಗೆ ಮುಖ ತಿರುಗಿಸಿ ನಟಿ ಕೊಟ್ಟ ಉತ್ತರವೇನು?
ಆ ಸಂದರ್ಭದಲ್ಲಿ ಇಲ್ಲಿ ಕೂಡಂಕುಳಂ ಪರಮಾಣು ವಿದ್ಯುತ್ ಸ್ಥಾವರದ ವಿರುದ್ಧದ ಪ್ರತಿಭಟನೆಯ ಕಾವು ಏರಿತ್ತು. ಜಪಾನ್‌ನಲ್ಲಿ 2011 ರ ಫುಕುಶಿಮಾ ಪರಮಾಣು ದುರಂತದ ನಂತರ ಅಣು ಸ್ಥಾವರ ನಿರ್ಮಾಣದಿಂದ ಸಂಭವಿಸಬಹುದಾದ ಪರಿಣಾಮಗಳ ಕುರಿತು ಆತಂಕ ವ್ಯಕ್ತಪಡಿಸಿ ಇಲ್ಲಿ ಪ್ರತಿಭಟನೆ ನಡೆದಿತ್ತು. ಇಡಿಂತಕರೈನ ಸ್ಥಾವರದಲ್ಲಿ ಯುರೇನಿಯಂ ಇಂಧನ ತುಂಬಿರುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ಕೈಗೊಂಡಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದಿದ್ದರು. ಪ್ರತಿಭಟನೆಯ ಸಮಯದಲ್ಲಿ ಮಹಿಳೆಯರನ್ನೂ ಸೇರಿದಂತೆ 66 ಮಂದಿಯನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ, ಗ್ರಾಮಸ್ಥರ ದೈನಂದಿನ ಜೀವನವನ್ನು ಡೇವಿಡ್ ದಾಖಲಿಸಿದ್ದರು.
ಆ ಸಂದರ್ಭದಲ್ಲಿಯೂ ಅವರಿಗೆ ಕಿರುಕುಳ ನೀಡಲಾಗಿತ್ತು ಎಮಬ ಆರೋಪವಿದೆ. ಇದಾದ ಬಳಿಕ ಡೇವಿಡ್ ಅವರು, ‘ಡಾಕ್ಯುಮೆಂಟಿಂಗ್ ಡಿಸೆಂಟ್: ಡೇವಿಡ್ ಬ್ರಾಡ್‌ಬರಿಸ್ ಅಕೌಂಟ್ ಆಫ್ ಹರಾಸ್‌ಮೆಂಟ್ ಇನ್ ಕೂಡಂಕುಳಂ’ ಎಂಬ ಶೀರ್ಷಿಕೆಯ ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ್ದರು. ಈ ವಿದ್ಯುತ್ ಸ್ಥಾವರ ನಿರ್ಮಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಧಾರವನ್ನು ಅವರು, “ತಮ್ಮ ಸ್ವಂತ ಜನರು ಮತ್ತು ಜಗತ್ತಿನ ಬಗ್ಗೆ ಬೇಜವಾಬ್ದಾರಿಯ ನಡೆ” ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈಗ ಅವರನ್ನು ಭಾರತಕ್ಕೆ ಬರದಂತೆ ತಡೆಯಾಗಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ತಮ್ಮನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಚೆನ್ನೈ ವಿಮಾನ ನಿಲ್ದಾಣದ ಪಕ್ಕಕ್ಕೆ ಎಳೆದುಕೊಂಡು, ಯಾವುದೇ ಅನುಕೂಲ ಇಲ್ಲದ ಕೋಣೆಯಲ್ಲಿ ಇರಿಸಲಾಗಿತ್ತು. ಆಸ್ಟ್ರೇಲಿಯಾದ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಕೇಳಿದಾಗ ನಿರಾಕರಿಸಲಾಯಿತು, ಕುಟುಂಬದವರ ಜೊತೆ ಇರಲು ಬಿಡಲಿಲ್ಲ, ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ ಡೇವಿಡ್. ಅಂದಹಾಗೆ ಡೇವಿಡ್ ಅವರು, ಅನೇಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಬಹುಮಾನಗಳನ್ನು ಗೆದ್ದಿದ್ದಾರೆ, ಐದು ಆಸ್ಟ್ರೇಲಿಯನ್ ಫಿಲ್ಮ್ ಇಂಡಸ್ಟ್ರಿ ಪ್ರಶಸ್ತಿಗಳನ್ನು ಮತ್ತು ಎರಡು ಅಕಾಡೆಮಿ ಪ್ರಶಸ್ತಿ ನಾಮನಿರ್ದೇಶನಗಳನ್ನು ಪಡೆದರು. ಅವರು ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯಿಂದ ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು.
ರಾಹುಲ್ ಗಾಂಧಿಯನ್ನು ಹಾಡಿ ಕೊಂಡಾಡಿದ ನಟ ಸೈಫ್ ಅಲಿ ಖಾನ್: ಇದಕ್ಕೆ ಕಾರಣ ಹೀಗಿದೆ...