
ನವದೆಹಲಿ(ಮೇ.23): ‘ಈಶಾನ್ಯ ರಾಜ್ಯಗಳಲ್ಲಿ ಮೋದಿ ಸರ್ಕಾರ ಏನು ಸಾಧನೆ ಮಾಡಿದೆ?’ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹರಿಹಾಯ್ದಿದ್ದಾರೆ. ‘ಹಾಕಿಕೊಂಡಿರುವ ಇಟಲಿಯ ಕನ್ನಡಕ ತೆಗೆದು ನೋಡಿದರೆ, ಮೋದಿ ಅವರು ಮಾಡಿರುವ ಸಾಧನೆಗಳು ಕಾಣಿಸುತ್ತದೆ’ ಎಂದು ಅವರು ಪ್ರಹಾರ ನಡೆಸಿದ್ದಾರೆ.
ಅರುಣಾಚಲ ಪ್ರದೇಶದ ನಮ್ಸಾಯಿ ಜಿಲ್ಲೆಯಲ್ಲಿ 1,000 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು.
MEA ಬದಲಾಗಿದೆ ನಿಜ, ಅಹಂಕಾರವಲ್ಲ ಅದು ಆತ್ಮವಿಶ್ವಾಸ, ರಾಹುಲ್ ಆರೋಪಕ್ಕೆ ಜೈಶಂಕರ್ ತಿರುಗೇಟು!
ಅರುಣಾಚಲ ಪ್ರದೇಶದ ನಮ್ಸಾಯ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ರಾರಯಲಿಯನ್ನು ಉದ್ದೇಶಿಸಿ ಶಾ ಮಾತನಾಡಿ, ‘ಈಶಾನ್ಯ ರಾಜ್ಯಗಳು ಕಾಂಗ್ರೆಸ್ ಆಡಳಿತದ 50 ವರ್ಷಗಳ ಅವಧಿಯಲ್ಲಿ ಕಡೆಗಣಿಸಲ್ಪಟ್ಟಿತ್ತು. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಈಶಾನ್ಯದಲ್ಲಿ ಅಭಿವೃದ್ಧಿ ವೇಗ ಪಡೆದುಕೊಂಡಿದೆ. ಇದು ಕಾಣಿಸಬೇಕಾದರೆ ರಾಹುಲ್ ಗಾಂಧಿ ಅವರು ಧರಿಸಿರುವ ಇಟಾಲಿಯನ್ ಕನ್ನಡಕವನ್ನು ತೆಗೆದು ನೋಡಬೇಕು. ಆಗಷ್ಟೇ ಮೋದಿ ಅವರು ಈ ಭಾಗದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕಾಣಿಸುತ್ತವೆ’ ಎಂದರು.
"ಅರುಣಾಚಲ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಸುಧಾರಿಸಲು, ಕಾನೂನು ಸುವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾಕಷ್ಟ ಕೆಲಸಗಳು ನಡೆದಿವೆ. ಕಳೆದ 50 ವರ್ಷಗಳಲ್ಲಿ ನಡೆಯದ ಅಭಿವೃದ್ಧಿ ಕೆಲಸಗಳನ್ನು ನರೇಂದ್ರ ಮೋದಿ ಮತ್ತು ಪೆಮಾ ಖಂಡು 8 ವರ್ಷಗಳಲ್ಲಿ ಸಾಧಿಸಿದ್ದಾರೆ'' ಎಂದು ಶ್ಲಾಘಿಸಿದರು.
ಎರಡು ದಿನಗಳ ಅರುಣಾಚಲ ಪ್ರದೇಶ ಭೇಟಿಯಲ್ಲಿರುವ ಅಮಿತ್ ಶಾ, ರಾಜ್ಯದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಸೋಮವಾರ ನಾಮ್ಸಾಯಿ ಜಿಲ್ಲೆಯ ಗೋಲ್ಡನ್ ಪಗೋಡಕ್ಕೆ ಅಮಿತ್ ಶಾ ಭೇಟಿ ನೀಡಿದರು. ಈ ವೇಳೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹಾಗೂ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಉಪಸ್ಥಿತರಿದ್ದರು.
ಅರುಣಾಚಲ ಪ್ರದೇಶ ಭೇಟಿ ಸಮಯದಲ್ಲಿ ಅಮಿತ್ ಶಾ ಅವರು ರಾಜ್ಯದಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳು ಮತ್ತು ಅಭಿವೃದ್ಧಿಯನ್ನು ಪರಿಶೀಲಿಸಲಿದ್ದಾರೆ ಜತೆಗೆ ಭಾರತೀಯ ಸೇನೆ, ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ), ಸರ್ವೀಸಸ್ ಸೆಲೆಕ್ಷನ್ ಬೋರ್ಡ್(ಎಸ್‌ಎಸ್ ಬಿ), ಅಸ್ಸಾಂ ರೈಫಲ್ಸ್, ಬಾರ್ಡರ್ ರೋಡ್ ಆರ್ಗನೈಸೇಶನ್ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್(ಎನ್‌ಎಚ್ಐಡಿಎಲ್ ಸಿ) ಸಿಬ್ಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.
ಚೀನಾದ ಗಡಿ ಭಾಗಕ್ಕೆ ಇರುವ ರಾಜ್ಯದಲ್ಲಿನ ಭದ್ರತೆ ಮತ್ತು ಅಭಿವೃದ್ಧಿಯ ಪರಾಮರ್ಶೆ ಮಾಡಿದ ಬಳಿಕ ಸೇನೆ, ಇಂಡೋ-ಟಿಬೆಟ್ ಗಡಿ ಪೊಲೀಸ್, ಸೇವಾ ಆಯ್ಕೆ ಮಂಡಳಿ, ಅಸ್ಸಾಂ ರೈಫಲ್ಸ್, ಗಡಿ ರಸ್ತೆ ಸಂಸ್ಥೆ ಮತ್ತು ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಸಿಬ್ಬಂದಿ ಜತೆ ಸಂವಾದ ನಡೆಸಿದರು. ರಾಹುಲ್ ಗಾಂಧಿ ಅವರು ಪ್ರಸ್ತುತ ಬ್ರಿಟನ್ ಪ್ರವಾಸದಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ