ಪೇಪರ್ ಲೀಕ್‌ಗೆ ಮೋದಿ ಸರ್ಕಾರ ಮಾಸ್ಟರ್ ಸ್ಟ್ರೋಕ್‌; ಅಕ್ರಮಕ್ಕೆ ಬ್ರೇಕ್ ಹಾಕಲು ಬಂತು ಹೊಸ ಅಸ್ತ್ರ! ಹೊಸ ವ್ಯವಸ್ಥೆ ಬೇರೇನೆ ಇದೆ!

Published : Oct 13, 2026, 11:04 PM IST
Prime Minister Narendra Modi

ಸಾರಾಂಶ

ಪೇಪರ್ ಲೀಕ್ ಅಕ್ರಮಗಳನ್ನು ತಡೆಯಲು ಮೋದಿ ಸರ್ಕಾರವು ಕೃತಕ ಬುದ್ಧಿಮತ್ತೆ (AI) ಮತ್ತು ಬೃಹತ್ ಕ್ವೆಶ್ಚನ್ ಬ್ಯಾಂಕ್ ಬಳಸುವ ಹೊಸ ಯೋಜನೆಯನ್ನು ರೂಪಿಸಿದೆ. ನಂದನ್ ನಿಲೇಕಣಿ ನೇತೃತ್ವದ ಟಾಸ್ಕ್ ಫೋರ್ಸ್ ಪರೀಕ್ಷಾ ಕೇಂದ್ರಗಳನ್ನು ಸರ್ಕಾರಿ ಸುಪರ್ದಿಗೆ ತರಲು ಮತ್ತು ಕೊನೆಯ ಕ್ಷಣದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಶಿಫಾರಸು ಮಾಡಿದೆ.

ಪೇಪರ್ ಲೀಕ್ ಅಕ್ರಮ ತಡೆಯಲು ಮೋದಿ ಸರ್ಕಾರ ಹೊಸದೊಂದು ಹೆಜ್ಜೆಯನ್ನಿಟ್ಟಿದೆ. ಅಷ್ಟೇ ಅಲ್ಲ ತಂತ್ರಜ್ಞಾನಕ್ಕೆ ತಕ್ಕಂತೆ ಪಾರದರ್ಶಕತೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಶ್ನೆಪತ್ರಿಕೆಗಳನ್ನು ಮುಂಚಿತವಾಗಿ ಮುದ್ರಿಸಿ ಅಥವಾ ಸಿದ್ಧಪಡಿಸಿ ಇಡಬಾರದು. ಪರೀಕ್ಷೆಯ ಕೊನೆಯ ಕ್ಷಣದಲ್ಲಿ ಪ್ರಶ್ನೆಪತ್ರಿಕೆ ರೂಪಿಸುವುದು ಈ ಯೋಜನೆಯಾಗಿದೆ ಎನ್ನುವ ವಿಷಯ ಇದೀಗ ಹೊರಬಿದ್ದಿದೆ.

ದೊಡ್ಡ ಮಟ್ಟದ ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧತೆ!

50,000 ದಿಂದ 2.5 ಲಕ್ಷ ಪ್ರಶ್ನೆಗಳಿರುವ ಬೃಹತ್ 'ಕ್ವೆಶ್ಚನ್ ಬ್ಯಾಂಕ್' (Question Bank) ಒಂದನ್ನು ಸಿದ್ಧಪಡಿಸುವುದು. ಪರೀಕ್ಷೆಯ ದಿನ ಅಥವಾ ಕೊನೆಯ ಕ್ಷಣದಲ್ಲಿ ಆ ಪೂಲ್‌ನಿಂದ ಅಗತ್ಯವಿರುವ 150–300 ಪ್ರಶ್ನೆಗಳನ್ನು ಮಾತ್ರ ಆಯ್ಕೆ ಮಾಡುವುದೇ ಈ ಹೊಸ ನಿಯಮದ ಭಾಗವಾಗಿದೆ ಎನ್ನಲಾಗಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಳಕೆ!

ಕೊನೆಯ ಕ್ಷಣದಲ್ಲಿ ಸವಾಲುಗಳಿಲ್ಲದೆ ಪೇಪರ್ ತಯಾರಿಸಲು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸುವ ಸಾಧ್ಯತೆಯಿದೆ. ಪೇಪರ್ ಲೀಕ್ ಹಿಂದೆ ದೊಡ್ಡ ಮಟ್ಟದ ಆರ್ಥಿಕ ಹಿತಾಸಕ್ತಿ (Economic Incentive) ಇರುತ್ತದೆ. ಬೃಹತ್ ಕ್ವೆಶ್ಚನ್ ಬ್ಯಾಂಕ್ ಮತ್ತು AI ಬಳಕೆಯಿಂದ ಲೀಕ್ ಮಾಡುವುದು ಪ್ರಾಯೋಗಿಕವಾಗಿ ಅಸಾಧ್ಯ ಎನ್ನುವುದು ಸರ್ಕಾರ ಹಾಗೂ ತಜ್ಞರ ಮಾತಾಗಿದೆ.

ಟಾಸ್ಕ್ ಫೋರ್ಸ್ ಮತ್ತು ಅದರ ಕಾರ್ಯವೈಖರಿ!

ಪ್ರಧಾನಿ ನರೇಂದ್ರ ಮೋದಿ ಅವರು ರಚಿಸಿರುವ 6 ಸದಸ್ಯರ ವಿಶೇಷ ಟಾಸ್ಕ್ ಫೋರ್ಸ್ ಅನ್ನು ಇನ್ಫೋಸಿಸ್ ಚೇರ್‌ಮನ್ ನಂದನ್ ನಿಲೇಕಣಿ ಮುನ್ನಡೆಸುತ್ತಿದ್ದಾರೆ. ಜುಲೈನಲ್ಲಿ 'ನೀಟ್' (NEET) ಪೇಪರ್ ಲೀಕ್ ವಿವಾದ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು. ಜುಲೈ 25 ರಂದು ಈ ಕಮಿಟಿ ರಚನೆಯಾಗಿ, 3 ತಿಂಗಳ ಗಡುವು ನೀಡಲಾಗಿತ್ತು.

ಸಮಾಲೋಚನೆ ಮತ್ತು ಸಲಹೆಗಳು!

ಕಮಿಟಿಯು ಇದುವರೆಗೆ 18 ಸಮಿತಿ ಮಟ್ಟದ ಸಭೆಗಳನ್ನು ಹಾಗೂ 40 ಕ್ಕೂ ಹೆಚ್ಚು ಸಮಾಲೋಚನಾ ಸಭೆಗಳನ್ನು ನಡೆಸಿದೆ. ಪೋಷಕರು, ವಿದ್ಯಾರ್ಥಿಗಳು, ಹಾಗೂ NTA, SSC, RRB, IBPS ನಂತಹ ಪ್ರಮುಖ ಪರೀಕ್ಷಾ ಸಂಸ್ಥೆಗಳಿಂದ 500 ಕ್ಕೂ ಹೆಚ್ಚು ಸಲಹೆಗಳು ಬಂದಿವೆ.

ಪರೀಕ್ಷಾ ವ್ಯವಸ್ಥೆಯ ಸುಧಾರಣೆ ಹಾಗೂ ಶಿಫಾರಸುಗಳು!

ಸಿಬಿಟಿ (ಕಂಪ್ಯೂಟರ್ ಆಧಾರಿತ ಪರೀಕ್ಷೆ) ವ್ಯಾಪ್ತಿ ಹೆಚ್ಚಳವಾಗಬೇಕು. ದೇಶದ ಗ್ರಾಮೀಣ ಹಾಗೂ ದೂರದ ಪ್ರದೇಶಗಳಿಗೂ ತಲುಪುವಂತೆ ಸಿಬಿಟಿ ಪರೀಕ್ಷಾ ಕೇಂದ್ರಗಳ ಸಂಖ್ಯೆ ಗಣನೀಯ ಹೆಚ್ಚಿಸಬೇಕು. ಪ್ರಸ್ತುತ ಪರೀಕ್ಷಾ ಕೇಂದ್ರಗಳನ್ನು ಖಾಸಗಿಯವರಿಗೆ ಸಬ್-ಕಾಂಟ್ರಾಕ್ಟ್ ನೀಡಲಾಗುತ್ತಿದ್ದು, ಇದು ಭದ್ರತೆಯ ದೃಷ್ಟಿಯಿಂದ ಅತ್ಯಂತ ದುರ್ಬಲ ಕೊಂಡಿಯಾಗಿದೆ. ಇದನ್ನು ತಡೆಯಬೇಕು. ಪರೀಕ್ಷಾ ಕೇಂದ್ರಗಳು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಅಥವಾ ಸರ್ಕಾರಿ ಸಂಸ್ಥೆಗಳ ಮಾಲೀಕತ್ವದಲ್ಲಿರಬೇಕು (ಉದಾ: ಸರ್ಕಾರಿ ಶಾಲೆಗಳು/ಕಾಲೇಜುಗಳು). ಇದರಿಂದ ಜವಾಬ್ದಾರಿ ಮತ್ತು ಪಾರದರ್ಶಕತೆ ಹೆಚ್ಚುತ್ತದೆ. ಪ್ರಸ್ತುತ ಒಂದೇ ಸರ್ವಿಸ್ ಪ್ರೊವೈಡರ್ ಮೇಲೆ ಆಧಾರಪಡುವುದನ್ನು ತಪ್ಪಿಸಿ, ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು ಹಾಗೂ NTA (National Testing Agency) ಅನ್ನು ಮತ್ತಷ್ಟು ಬಲಪಡಿಸುವುದು ಮುಖ್ಯ ಆಶಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಶ್ನೆಪತ್ರಿಕೆಯೇ ಯಾಕೆ ಬೇಕು?.. ನಂದನ್ ನಿಲೇಕಣಿ ಪ್ರಶ್ನೆ; ಪೇಪರ್ ಲೀಕ್‌ಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್!
ECI: ಇವತ್ತು ಆಯೋಗವನ್ನು ಪ್ರಶ್ನಿಸುವ ಕಾಂಗ್ರೆಸ್‌, ಅಂದು ಮಾಡಿದ್ದೇನು; ಅದು ಬಿಜೆಪಿಗಿಂತ ವಿಭಿನ್ನ ಹೇಗೆ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌!