ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ

Published : Apr 25, 2026, 10:04 PM IST
Mamata Banerjee, Amit Shah

ಸಾರಾಂಶ

ಬಂಗಾಳದ ಮೊದಲ ಹಂತ ಚುನಾವಣೆಯಲ್ಲಿ 110 ಸ್ಥಾನ ಬಿಜೆಪಿ ತೆಕ್ಕೆಗೆ, ಅಮಿತ್ ಶಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದಿದ್ದಾರೆ. ಇತ್ತ ಟಿಎಂಸಿ ಕೂಡ ಭವಿಷ್ಯ ಹೇಳಿದೆ.

ಕೋಲ್ಕತಾ (ಏ.25) ಪಶ್ಚಿಮ ಬಂಗಾಳದ ಮೊದಲ ಹಂತದ ಚುನಾವಣೆ ಮುಗಿದು ಇದೀಗ 2ನೇ ಹಂತದ ಚುನಾವಣೆ ಪ್ರಚತಾರಗಳು ಭರ್ಜರಿಯಾಗಿ ನಡೆಯುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಇತ್ತ ಮಮತಾ ಬ್ಯಾನರ್ಜಿ ಸೇರಿದಂತೆ ಘಟಾನುಘಟಿಗಳು 2ನೇ ಹಂತದ ಮತದಾನಕ್ಕೂ ಮೊದಲು ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆ ಅಮಿತ್ ಶಾ ಮಾತು ಭಾರಿ ಸಂಚಲನ ಸೃಷ್ಟಿಸಿದೆ. 152 ಸ್ಥಾನಗಳಿಗೆ ನಡೆದ ಮೊದಲ ಹಂತದ ಚುನಾವಣೆ ಮುಗಿದ ಬೆನ್ನಲ್ಲೇ ಅಮಿತ್ ಭವಿಷ್ಯ ನುಡಿದ್ದಾರೆ. ಗರಿಷ್ಠ ಮತದಾನ, ಬೂತ್ ಮಟ್ಟದಲ್ಲಿ ಪ್ರತಿಕ್ರಿಯೆ ಪ್ರಕಾರ ಮೊದಲ ಹಂತದ 152 ಸ್ಥಾನ ಪೈಕಿ ಬಿಜೆಪಿ 110 ಸ್ಥಾನ ಗೆಲ್ಲಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಬಂಗಾಳದ ನೈಜ ಪರಿವರ್ತನೆ ಎಂದ ಅಮಿತ್ ಶಾ

ಪಶ್ಚಿಮ ಬಂಗಾಳದಲ್ಲಿ ನೈಜ ಪರಿವರ್ತನೆಯಾಗಲಿದೆ. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎಂದಿದ್ದಾರೆ. ಮೊದಲ ಹಂತದ ಚುನಾವಣೆಗ ಬಿಜೆಪಿಗೆ ವರವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಎರಡನೇ ಹಂತದ ಚುನಾವಣೆಯಲ್ಲೂ ಇದೇ ರೀತಿಯ ಬಿಜೆಪಿಗೆ ಉತ್ತಮ ಸ್ಪಂದನೆ ಸಗಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಂಗಾಳದ ಬಿಜೆಪಿ ಅಧಿಕಾರ ಬಂದ ಬೆನ್ನಲ್ಲೇ ಸಿಎಎ ಜಾರಿಯಾಗಲಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬಂಗಾಳದ ನೈಜ ಪರಿವರ್ತನೆ ತರಲಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ. ಇತ್ತ ಮಮತಾ ಬ್ಯಾನರ್ಜಿ ಮೊದಲ ಹಂತದ ಚುನಾವಣೆ ಬಳಿಕ ಟಿಎಂಸಿ ಮತ್ತಷ್ಟು ಶಕ್ತಿಯುತವಾಗಿದೆ. ಅಭೂತಪೂರ್ವ ಬೆಂಬಲ ಸಿಕ್ಕಿದೆ. ಭಾರಿ ಅಂತರದ ಗೆಲುವು ದಾಖಲಾಗಲಿದೆ ಎಂದಿದ್ದಾರೆ.

4ನೇ ಬಾರಿಗೆ ಮಮತಾ ಎಂದು ಟಿಎಂಸಿ ನಾಯಕ

ಮೊದಲ ಹಂತದ ಚುನಾವಣೆ ಬಳಿಕ ಟಿಎಂಸಿ ನಾಯಕ ಕುನಾಲ್ ಘೋಷ್ ಪ್ರತಿಕ್ರಿಯೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕುನಾಲ್ ಘೋಷ್ ಹೇಳಿದ್ದಾರೆ. ಈ ಬಾರಿಯ ಚುನಾವಣೆ ಇತಿಹಾಸ ಪುಟದಲ್ಲಿ ದಾಖಲಾಗಿದೆ. ನಾಲ್ಕನೇ ಬಾರಿಗೆ ಮಮತಾ ಬ್ಯಾನರ್ಜಿಗೆ ಅಧಿಕಾರ ಸಿಗಲಿದೆ ಎಂದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Sirsi Haveri Road: ತೆರಿಗೆ ನಮ್ಮದು, ಗುಂಡಿ ನಿಮ್ಮದು; ಕೆಸರಲ್ಲಿ ಹೂತುಹೋದ ಆಳುವವರ ಮಾನ-ಮರ್ಯಾದೆ!
ಕೇವಲ 30 ಸಾವಿರ ರೂಗೆ ಸೋಲಾರ್ ಚಾಲಿತ ಕಾರು ತಯಾರಿಸಿದ ಕುಗ್ರಾಮದ ವ್ಯಕ್ತಿ