ನಿಂತಿದ್ದ ಐದು ರೈಲುಗಳಿಗೆ ಬೆಂಕಿ: ಇದೇನಾ ಪ್ರತಿಭಟನೆಯ ಪರಿ?

By Suvarna NewsFirst Published Dec 14, 2019, 6:43 PM IST
Highlights

ನಿಂತಿದ್ದ ಐದು ರೈಲುಗಳಿಗೆ ಬೆಂಕಿಯಿಟ್ಟ ಪ್ರತಿಭಟನಾಕಾರರು| ಸೇವೆಗೆಂದು ನಿಂತಿದ್ದ ರೈಲುಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ಬಲಿ| ಪ.ಬಂಗಾಳದಲ್ಲೂ CAB ವಿರುದ್ಧ ಭುಗಿಲೆದ್ದ ಹಿಂಸಾಚಾರ| ಲಾಲ್’ಗೋಲಾ ರೈಲು ನಿಲ್ದಾಣ ಆಪೋಷಣ ಪಡೆದ ಪ್ರತಿಭಟನಕಾರರು| ರಾಷ್ಟ್ರೀಯ ಹೆದ್ದಾರಿ ನಂ.34ನ್ನು ಬಂದ್ ಮಾಡಿದ ಪ್ರತಿಭಟನಾಕಾರರು| ಶಾಂತಿ ಕಾಪಾಡುವಂತೆ ಮನವಿ ಮಾಡಿದ ಸಿಎಂ ಮಮತಾ ಬ್ಯಾನರ್ಜಿ|

ಮುಶಿರಾಬಾದ್(ಡಿ.14): ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ.ಬಂಗಾಳದಲ್ಲೂ ಹಿಂಸಾಚಾರ ಭುಗಿಲೆದ್ದಿದ್ದು, ನಿಲ್ದಾಣದಲ್ಲಿ ನಿಂತಿದ್ದ ಐದು ಖಾಲಿ ರೈಲುಗಳಿಗೆ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ.

ಪ.ಬಂಗಾಳದ ಲಾಲ್’ಗೋಲಾ ರೈಲು ನಿಲ್ದಾಣದಲ್ಲಿ ನಿಂತಿದ್ದ ಐದು ಖಾಲಿ ರೈಲುಗಳು ಬೆಂಕಿಗೆ ಆಹುತಿಯಾಗಿದ್ದು,  ರೈಲು ನಿಲ್ದಾಣದ ಪಕ್ಕದಲ್ಲಿದ್ದ ಅಂಗಡಿಗಳಿಗೂ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ: ಅಸ್ಸಾಂ ಏಕೆ ಕೊತ ಕೊತ ಕುದಿಯುತ್ತಿದೆ?

ರಾಜ್ಯದ ಉತ್ತರ ಮತ್ತು ದಕ್ಷಿಣ ಪ್ರಾಂತ್ಯಗಳನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ ನ.34ನ್ನು ಬಂದ್ ಮಾಡಿರುವ ಪ್ರತಿಭಟನಾಕಾರರು, ಭಾರೀ ಹಿಂಸಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಲ್ದಾಣದಲ್ಲಿರುವ ಟಿಕೆಟ್ ಕೌಂಟರ್’ಗೆ ಬೆಂಕಿಯಿಟ್ಟ ಪ್ರತಿಭಟನಾಕಾರರು, ರೈಲ್ವೇ ಇಲಾಖೆ ಸಿಬ್ಬಂದಿ ಮೇಲೂ ಹಲ್ಲೆ ನಡೆಸಿದ್ದಾರೆ.

ಇನ್ನು ಶಾಂತಿ ಕಾಪಾಡುವಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜನರಲ್ಲಿ ಮನವಿ ಮಾಡಿದ್ದು, ಕಾನೂನನ್ನು ಕೈಗೆತ್ತಿಕೊಳ್ಳದಂತೆ ಪ್ರತಿಭನಾಕಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪೌರತ್ವ ಮಸೂದೆ: ಈಶಾನ್ಯ ರಾಜ್ಯಗಳ ಭಯ ಅನಗತ್ಯ

.. Distressed and pained at events unfolding in the State. Chief Minister as per oath has to ‘bear true faith and allegiance to the Constitution of India..’ and I as Governor will ‘to the best of my ability preserve, protect and defend the Constitution and the law’

— Jagdeep Dhankhar (@jdhankhar1)

ಶಾಂತಿ ಸ್ಥಾಪನೆಗೆ ಮನವಿ ಮಾಡಿರುವ ರಾಜ್ಯಪಾಲ ಜಗದೀಪ್ ಧನ್‌ಕರ್ ಶಾಂತಿ ಸ್ಥಾಪನೆಯ ಜವಾಬ್ದಾರಿ ರಾಜ್ಯ ಸರ್ಕಾರದ್ದು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

click me!