ಭಾರತದಿಂದ ಕುವೈತ್‌ಗೆ 192 ಟನ್‌ ಸಗಣಿ ರಫ್ತು!

By Suvarna News  |  First Published Jun 18, 2022, 10:19 AM IST

* ನೈಸರ್ಗಿಕ ಕೃಷಿಗಾಗಿ ಸಗಣಿ ಖರೀದಿಸಿದ ಕೊಲ್ಲಿ ರಾಷ್ಟ್ರ

* ಭಾರತದಿಂದ ಕುವೈತ್‌ಗೆ 192 ಟನ್‌ ಸಗಣಿ ರಫ್ತು

* ರಾಜಸ್ಥಾನದ ಜೈಪುರದ ಗೋಶಾಲೆಯೊಂದರಿಂದ ಪೂರೈಕೆ


ಜೈಪುರ(ಜೂ.18): ಪ್ರಮುಖ ಕೊಲ್ಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಕುವೈತ್‌ ಭಾರತದಿಂದ 1,92,000 ಕೆ.ಜಿ. (192 ಟನ್‌) ಸಗಣಿ ಆಮದು ಮಾಡಿಕೊಳ್ಳುತ್ತಿದೆ. ನೈಸರ್ಗಿಕ ಕೃಷಿಗಾಗಿ ಹಸು ಹಾಗೂ ಎಮ್ಮೆಯ ಸಗಣಿಯನ್ನು ಕುವೈತ್‌ ತರಿಸಿಕೊಳ್ಳುತ್ತಿದೆ ಎಂದು ಮೂಲಗಳು ಹೇಳಿವೆ.

ರಾಜಸ್ಥಾನದ ಜೈಪುರದಲ್ಲಿರುವ ಬೃಹತ್‌ ಗೋಶಾಲೆಯೊಂದರಿಂದ ಕುವೈತ್‌ನ ಖಾಸಗಿ ಕಂಪನಿಯೊಂದು ಸಗಣಿ ತರಿಸಿಕೊಳ್ಳುತ್ತಿದೆ. ಜೂ.15ರಂದು ಮೊದಲ ಬ್ಯಾಚ್‌ನ ಸಗಣಿ ಜೈಪುರದ ಕನಕಪುರ ಎಂಬಲ್ಲಿರುವ ರೈಲ್ವೆ ನಿಲ್ದಾಣದಿಂದ ಕುವೈತ್‌ಗೆ ತೆರಳಿದೆ. ಕಸ್ಟಮ್ಸ್‌ ಇಲಾಖೆಯ ಮೇಲ್ವಿಚಾರಣೆಯಲ್ಲಿ ಸಗಣಿಯನ್ನು ಪ್ಯಾಕೇಜಿಂಗ್‌ ಮಾಡಲಾಗುತ್ತಿದೆ.

Tap to resize

Latest Videos

ಸಗಣಿ ರಫ್ತಿಗೆ ಈಗಾಗಲೇ ಕುವೈತ್‌ ಹಾಗೂ ಭಾರತದ ನಡುವೆ ಒಪ್ಪಂದ ಏರ್ಪಟ್ಟಿದೆ. ಕುವೈತ್‌ನಲ್ಲಿ ಸಗಣಿ ಬಳಸಿ ಕೃಷಿ ಮಾಡುವ ಬಗ್ಗೆ ಸಂಶೋಧನೆಯೂ ನಡೆಯುತ್ತಿದೆ. ಈವರೆಗಿನ ಬೇರೆ ಬೇರೆ ಸಂಶೋಧನೆಗಳಿಂದ ನೈಸರ್ಗಿಕ ಕೃಷಿಗೆ ಸಗಣಿ ಬಳಸಿದರೆ ಇಳುವರಿ ಜಾಸ್ತಿಯಾಗುತ್ತದೆ ಮತ್ತು ಸಗಣಿ ಬಳಸಿ ಬೆಳೆದ ಆಹಾರದಿಂದ ಕೆಲ ರೋಗಗಳು ಬರುವುದಿಲ್ಲ ಎಂಬುದು ಕಂಡುಬಂದಿದೆ.

ಕುವೈತ್‌, ಒಣಹವೆಯ ಮತ್ತು ನೀರಿನ ಕೊರತೆಯ ದೇಶವಾಗಿರುವುದರಿಂದ ನೈಸರ್ಗಿಕ ಕೃಷಿಗೆ ಸಗಣಿಯ ಗೊಬ್ಬರ ಬಳಸುವುದಕ್ಕೆ ಒತ್ತು ನೀಡುತ್ತಿದೆ.

- ರಾಜಸ್ಥಾನದ ಜೈಪುರದ ಗೋಶಾಲೆಯೊಂದರಿಂದ ಪೂರೈಕೆ

- ಜೂ.15ರಂದು ಮೊದಲ ಬ್ಯಾಚ್‌ನ ಸಗಣಿ ಕುವೈತ್‌ಗೆ ರವಾನೆ

- ಕಸ್ಟಮ್ಸ್‌ ಇಲಾಖೆಯ ಮೇಲ್ವಿಚಾರಣೆಯಲ್ಲಿ ಸಗಣಿ ಪ್ಯಾಕೇಜ್‌

- ಭಾರತದ ಸಗಣಿ ಖರೀದಿಸಲು ಕುವೈತ್‌ನಿಂದ ಈಗಾಗಲೇ ಡೀಲ್‌

click me!