United States ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಟೀಕಿಸುವ ಜಾಹೀರಾತು: ಭಾರತಕ್ಕೆ ಮಸಿ ಬಳಿಯುವ ಯತ್ನ

Published : Oct 16, 2022, 08:57 AM IST
United States ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಟೀಕಿಸುವ ಜಾಹೀರಾತು: ಭಾರತಕ್ಕೆ ಮಸಿ ಬಳಿಯುವ ಯತ್ನ

ಸಾರಾಂಶ

ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯಲ್ಲಿ ಭಾರತಕ್ಕೆ ಮಸಿ ಬಳಿಯುವ ಯತ್ನ ನಡೆದಿದ್ದು, ಮೋದಿ ಸರ್ಕಾರ, ಸುಪ್ರೀಂಕೋರ್ಟ್‌ ಜಡ್ಜ್‌, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಲಾಗಿದೆ. ಅಮೆರಿಕ ಸಂಸ್ಥೆ ಇ ಜಾಹೀರಾತು ನೀಡಿದ್ದು ಇದರ ಹಿಂದೆ ಬೆಂಗಳೂರಿನ ದೇವಾಸ್‌ ಮಾಜಿ ಸಿಇಒ ಸಾಥ್‌ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ನವದೆಹಲಿ: ಅಮೆರಿಕದ (United States) ವಾಲ್‌ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯ (Wall Street Journal News Paper) ಮುಖಪುಟದಲ್ಲಿ ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಾಧೀಶರು ಮತ್ತು ಇತರೆ ಹಲವು ಹಿರಿಯ ಅಧಿಕಾರಿಗಳನ್ನು ಟೀಕಿಸುವ ಮತ್ತು ಅವರ ವಿರುದ್ಧ ನಿರ್ಬಂಧ ಹೇರುವಂತೆ ಕೋರುವ ಜಾಹೀರಾತೊಂದು (Advertisement) ಅಕ್ಟೋಬರ್‌ 13ರಂದು ಪ್ರಕಟವಾಗಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅಮೆರಿಕ ಭೇಟಿಯ ವೇಳೆಯೇ, ಭಾರತದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಕ್ಕೆ ಮಸಿ ಬಳಿಯುವ ಯತ್ನವನ್ನು ಅಮೆರಿಕ ಮೂಲದ ‘ಫ್ರಂಟಿಯ​ರ್ಸ್‌ ಆಫ್‌ ಫ್ರೀಡಂ’ (Frontiers of Freedom) ಎಂಬ ಸಂಸ್ಥೆ ಜಾಹೀರಾತಿನ ಮೂಲಕ ನಡೆಸಿದೆ. ಈ ಸಂಸ್ಥೆಯ ಹಿಂದೆ ಬೆಂಗಳೂರು ಮೂಲದ ದೇವಾಸ್‌ (Devas) ಸಂಸ್ಥೆಯ ಮಾಜಿ ಸಿಇಒ, ದೇಶಭ್ರಷ್ಟ ಉದ್ಯಮಿ ರಾಮಚಂದ್ರ ವಿಶ್ವನಾಥನ್‌ ಎಂಬಾತನ ಕೈವಾಡವಿದೆ ಎಂದು ಶಂಕಿಸಲಾಗಿದೆ.

ಜಾಹೀರಾತಲ್ಲಿ ಏನಿದೆ?:
‘ಮೋದಿ ಸರ್ಕಾರದ ಈ ಅಧಿಕಾರಿಗಳು ತಮ್ಮ ರಾಜಕೀಯ ಹಿತಾಸಕ್ತಿ ಮತ್ತು ವೈರಿ ಉದ್ಯಮಿಗಳನ್ನು ಮಟ್ಟಹಾಕಲು ನೆಲದ ಕಾನೂನನ್ನು ಅಸ್ತ್ರಗಳಾಗಿ ಬಳಸಿಕೊಂಡಿದ್ದಾರೆ. ಈ ಮೂಲಕ ಭಾರತವನ್ನು ಹೂಡಿಕೆದಾರರಿಗೆ ಅಸುರಕ್ಷಿತ ಮಾಡಿದ್ದಾರೆ. ಹೀಗಾಗಿ ಇವರೆಲ್ಲರ ವಿರುದ್ಧ ನಿರ್ಬಂಧ ಹೇರಬೇಕು. ಇವರಿಗೆ ವೀಸಾ ನೀಡಿದ್ದರೆ ರದ್ದು ಮಾಡಬೇಕು. ಅಮೆರಿಕದಲ್ಲಿನ ಅವರ ಆಸ್ತಿ ಜಪ್ತಿ ಮಾಡಬೇಕು. ಇದಕ್ಕಾಗಿ ಅಧ್ಯಕ್ಷ ಜೋ ಬೈಡೆನ್‌ ಅವರು ಮ್ಯಾಗ್ನಿಟ್‌ಸ್ಕೈ ಕಾಯ್ದೆ ಬಳಸಬೇಕು (Magnitsky Human Rights Accountability Act)’ ಎಂದು ಹೇಳಲಾಗಿದೆ.

ಇದನ್ನು ಓದಿ: ಸ್ಪೇನ್‌ ಪತ್ರಿಕೆಯಲ್ಲಿ Indian Economy ಪ್ರಗತಿ ತೋರಿಸಲು ಹಾವಾಡಿಗನ ಚಿತ್ರ: ಜಾಲತಾಣಗಳಲ್ಲಿ ಟೀಕೆ

ಯಾರ ಹೆಸರು?:
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಇಸ್ರೋದ ಅಂಗಸಂಸ್ಥೆ ಆ್ಯಂಟ್ರಿಕ್ಸ್‌ನ ರಾಕೇಶ್‌ ಶಶಿಭೂಷಣ್‌, ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಸುಪ್ರೀಂಕೋರ್ಟ್‌ನ ಜಡ್ಜ್‌ಗಳಾದ ನ್ಯಾ.ಹೇಮಂತ್‌ ಗುಪ್ತಾ, ವಿ.ರಾಮಸುಬ್ರಮಣಿಯನ್‌, ಸಿಬಿಐ ಡಿಎಸ್‌ಪಿ ಆಶಿಶ್‌, ಇಡಿ ಮುಖ್ಯಸ್ಥ ಸಂಜಯ್‌ ಕುಮಾರ್‌ ಮಿಶ್ರಾ ಸೇರಿದಂತೆ 12 ಜನರ ಹೆಸರು ಪ್ರಸ್ತಾಪಿಸಲಾಗಿದೆ.

ಯಾರ ಕೈವಾಡ?:
ಈ ಜಾಹೀರಾತನ್ನು ‘ಫ್ರಂಟಿಯ​ರ್ಸ್‌ ಆಫ್‌ ಫ್ರೀಡಂ’ ಎಂಬ ಸಂಸ್ಥೆ ನೀಡಿದ್ದರೂ ಅದರ ಹಿಂದೆ ಈ ಹಿಂದೆ ಇಸ್ರೋದ ಅಂಗಸಂಸ್ಥೆಯ ಆ್ಯಂಟ್ರಿಕ್ಸ್‌ಗೆ ವಂಚಿಸಿದ ಪ್ರಕರಣದ ಆರೋಪಿ, ಹಾಲಿ ದೇಶಭ್ರಷ್ಟನಾಗಿರುವ ಬೆಂಗಳೂರು ಮೂಲದ ದೇವಾಸ್‌ ಕಂಪನಿಯ ಮಾಜಿ ಸಿಇಒ ರಾಮಚಂದ್ರ ವಿಶ್ವನಾಥನ್‌ ಎಂಬಾತನ ಕೈವಾಡವಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಶಂಕಿಸಿವೆ. ಕಾರಣ, ಈತನ ವಿರುದ್ಧ ತನಿಖೆ ನಡೆಸಿದವರ ಬಹುತೇಕ ಹೆಸರುಗಳೇ ಜಾಹೀರಾತಿನಲ್ಲಿದೆ. ಜೊತೆಗೆ ಈ ಹಿಂದೆ ಈತನ ಈ ಮೇಲ್ಕಂಡವರ ಪೈಕಿ ಹಲವರ ವಿರುದ್ಧ ಇದೇ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಅಮೆರಿಕ ಸರ್ಕಾರವನ್ನು ಒತ್ತಾಯಿಸಿದ್ದ. ರಾಮಚಂದ್ರ ವಿಶ್ವನಾಥನ್‌ ಹಾಲಿ ಅಮೆರಿಕ ಪ್ರಜೆಯಾಗಿದ್ದಾನೆ.

ಇದನ್ನೂ ಓದಿ: Anand Mahindra: ಭಾರತ ಆರ್ಥಿಕತೆಯಲ್ಲಿ ಬ್ರಿಟನ್‌ ಹಿಂದಿಕ್ಕಿದ್ದು ''ಕರ್ಮ ಸಿದ್ಧಾಂತದ ಫಲ'' ಎಂದ ಉದ್ಯಮಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ