ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ತೈಲ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ನಡೆದ ಡ್ರೋನ್ ದಾಳಿಯ ಹಿಂದೆ ಇರಾನ್ ಕೈವಾಡವಿತ್ತು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಫೋಟಕ ಹೇಳಿಕೆ ನೀಡಿದೆ.
ನವದೆಹಲಿ/ವಾಷಿಂಗ್ಟನ್: ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ತೈಲ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ನಡೆದ ಡ್ರೋನ್ ದಾಳಿಯ ಹಿಂದೆ ಇರಾನ್ ಕೈವಾಡವಿತ್ತು ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಫೋಟಕ ಹೇಳಿಕೆ ನೀಡಿದೆ. ಗುಜರಾತ್‌ನಿಂದ 200 ಕಿ.ಮೀ. ದೂರದ ಅಂತಾರಾಷ್ಟ್ರೀಯ ಸಮುದ್ರದ ವಲಯದಲ್ಲಿ ಭಾರತಕ್ಕೆ ಬರುತ್ತಿದ್ದ ಲೈಬೀರಿಯಾದ ‘ಚೆಮ್ ಪ್ಲೂಟೋ’ ಹಡಗಿನ ಮೇಲೆ ನಿಗೂಢ ದಾಳಿ ನಡೆದಿತ್ತು. ಈ ಹಡಗು ಸೌದಿಯಿಂದ ನವ ಬಂಗಳೂರು ಬಂದರಿಗೆ ತೈಲ ಹೊತ್ತು ತರುತ್ತಿತ್ತು. ಈ ವೇಳೆ ಹಡಗಿಗೆ ಬೆಂಕಿ ಹೊತ್ತಿಕೊಂಡರೂ ಅದನ್ನು ಕೆಲವೇ ಕ್ಷಣಗಳಲ್ಲಿ ಶಮನ ಮಾಡಲಾಗಿತ್ತು. ದಾಳಿ ಮಾಡಿದ್ಯಾರು ಎಂದು ಗೊತ್ತಾಗಿರಲಿಲ್ಲ. ಈ ಬಗ್ಗೆ ಭಾನುವಾರ ಅಮೆರಿಕ ವಿದೇಶಾಂಗ ವಕ್ತಾರರು ಹೇಳಿಕೆ ನೀಡಿ, ‘ಚೆಮ್ ಪ್ಲೂಟೋ’ ಹಡಗಿನ ಮೇಲೆ ಡ್ರೋನ್ ಹಾರಿ ಬಂದಿದ್ದು ಇರಾನ್‌ನಿಂದ’ ಎಂದಿದ್ದಾರೆ.
ತನಿಖೆ ಶುರು, ಮುಂಬೈನತ್ತ ಹಡಗು:
ಈ ನಡುವೆ ಭಾರತೀಯ ನೌಕಾಪಡೆ ಅಧಿಕಾರಿಗಳು ಹೇಳಿಕೆ ನೀಡಿದ್ದು, ‘ದಾಳಿ ಬಗ್ಗೆ ತನಿಖೆ ನಡೆದಿದೆ. ಐಎನ್‌ಎಸ್ ಮರ್ಮುಗೋವಾ ಯುದ್ಧನೌಕೆಯನ್ನು ಸ್ಥಳಕ್ಕೆ ಕಳಿಸಿ ತನಿಖೆ ಕೈಗೊಳ್ಳಲಾಗಿದೆ. ದಾಳಿಗೊಳಗಾದ ಹಡಗನ್ನು ರಿಪೇರಿ ಮಾಡಲಾಗಿದ್ದು, ಈಗ ಸಂಚಾರ ಪುನಾರಂಭಿಸಿದೆ. ಐಎನ್‌ಎಸ್ ವಿಕ್ರಂ ಹಡಗನ್ನು ಕಣ್ಗಾವಲಿಗೆ ನಿಯೋಜಿಸಲಾಗಿದ್ದು, ಪ್ಲುಟೋ ಹಡಗು ಮುಂಬೈನತ್ತ ಧಾವಿಸುತ್ತಿದೆ’ ಎಂದಿದ್ದಾರೆ.
25 ಭಾರತೀಯ ಸಿಬ್ಬಂದಿ ಇದ್ದ ಕಚ್ಚಾ ತೈಲ ಹಡಗಿನ ಮೇಲೆ ಕೆಂಪು ಸಮುದ್ರದಲ್ಲಿ ಡ್ರೋನ್ ದಾಳಿ
ವಿಚಾರಣೆ ವೇಳೆ 3 ಕಾಶ್ಮೀರಿ ನಾಗರಿಕರ ನಿಗೂಢ ಸಾವು: ತನಿಖೆಗೆ ಸೇನೆ ಆದೇಶ
ನವದೆಹಲಿ: ಇತ್ತೀಚಿನ ಪೂಂಛ್ ಉಗ್ರ ದಾಳಿಯಲ್ಲಿ ಐವರು ಯೋಧರು ಮೃತಪಟ್ಟ ಬಳಿಕ ವಿಚಾರಣೆಗಾಗಿ ಕರೆತಂದಿದ್ದ ಮೂವರು ನಾಗರಿಕರು ನಿಗೂಢವಾಗಿ ಸಾವನ್ನಪ್ಪಿದ ಘಟನೆ ಕುರಿತು ಭಾರತೀಯ ಸೇನೆ ತನಿಖೆಗೆ ಆದೇಶಿಸಿದೆ. ಉಗ್ರರಿಗೆ ನೆರವು ನೀಡಿದ ಶಂಕೆ ಮೇಲೆ 8 ನಾಗರಿಕರನ್ನು ಸೇನೆ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಈ ವೇಳೆ ಮೂವರು ನಾಗರಿಕರು ಸಾವನ್ನಪ್ಪಿದ್ದರು.ಇವರನ್ನು ಸೇನೆಯೇ ಹಿಂಸೆ ನೀಡಿ ಕೊಲೆ ಮಾಡಿದೆ ಎಂಬ ವದಂತಿಗಳು ಹಬ್ಬಲಾರಂಭಿಸಿತು. ಹಾಗಾಗಿ ಅಲ್ಲಿನ ಇಂಟರ್ನೆಟ್ ಬಂದ್ ಮಾಡಿ ವದಂತಿ ಹಬ್ಬುವಿಕೆಗೆ ತಡೆ ನೀಡಲಾಗಿತ್ತು. ಇದೀಗ ಮೂವರ ಸಾವಿನ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುವಂತೆ ಸೇನೆ ಆದೇಶಿಸಿದೆ.
Breaking: ಇಸ್ರೇಲ್ ಮೂಲದ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ಡ್ರೋನ್ ದಾಳಿ, ಸಹಾಯಕ್ಕೆ ಧಾವಿಸಿದ ಭಾರತ!