ಪ್ರಮುಖ ವಲಯಗಳಲ್ಲಿ ಅಮೇರಿಕ- ಭಾರತ ಬಲಗೊಳ್ಳುತ್ತಿವೆ: ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ

Published : Jun 16, 2023, 01:16 PM ISTUpdated : Jun 16, 2023, 01:25 PM IST
ಪ್ರಮುಖ ವಲಯಗಳಲ್ಲಿ ಅಮೇರಿಕ- ಭಾರತ ಬಲಗೊಳ್ಳುತ್ತಿವೆ: ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ

ಸಾರಾಂಶ

ಇಂಡೋ-ಪೆಸಿಫಿಕ್‌ ಪ್ರಾಂತ್ಯದಲ್ಲಿನ ನಮ್ಮ ಸಮಾನ ಗುರಿಗಳ ಸಾಧನೆಗೆ ಜತೆಯಾಗಿ ಕೆಲಸ ಮುಂದುವರಿಸುವುದನ್ನು ಎದುರು ನೋಡುತ್ತಿದ್ದೇವೆ. ಶಾಂತಿ, ಸಮೃದ್ಧಿ, ನಮ್ಮ ಭೂಮಿ ಮತ್ತು ನಮ್ಮ ಜನರೂ ಸೇರಿದಂತೆ ಮಹತ್ವದ ವಿಷಯಗಳಲ್ಲಿ ಭಾರತದೊಂದಿಗಿನ ಸಹಕಾರವೃದ್ಧಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ: ಎರಿಕ್ ಗಾರ್ಸೆಟ್ಟಿ 

ಚೆನ್ನೈ(ಜೂ.16): ಅನೇಕ ಪ್ರಮುಖ ವಲಯಗಳಲ್ಲಿ ಅಮೇರಿಕ ಮತ್ತು ಭಾರತವು ಬಲಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದಕ್ಷಿಣ ಭಾರತ ಬಹಳ ಮುಖ್ಯ ಪಾತ್ರವಹಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕ ಭೇಟಿಯು ಉಭಯ ದೇಶಗಳ ನಡುವೆ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಸಹಕಾರದ ದ್ಯೋತಕವಾಗಿದೆ. ಅಮೇರಿಕ- ಭಾರತದ ಪಾಲುದಾರಿಕೆಯು ನಮ್ಮ ಅತ್ಯಂತ ಪರಿಣಾಮಕಾರಿ ಸಂಬಂಧಗಳಲ್ಲಿ ಒಂದಾಗಿದೆ ಅಂತ ಭಾರತದಲ್ಲಿನ ಯುಎಸ್ ರಾಯಭಾರಿ ಎರಿಕ್ ಗಾರ್ಸೆಟ್ಟಿ ತಿಳಿಸಿದ್ದಾರೆ. 

ಅಮೇರಿಕ ದೂತಾವಾಸ ಕಚೇರಿ ನಗರದಲ್ಲಿ ಆಯೋಜಿಸಿದ್ದ 247ನೇ ಅಮೇರಿಕ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಎರಿಕ್ ಗಾರ್ಸೆಟ್ಟಿ ಅವರು, ಇಂಡೋ-ಪೆಸಿಫಿಕ್‌ ಪ್ರಾಂತ್ಯದಲ್ಲಿನ ನಮ್ಮ ಸಮಾನ ಗುರಿಗಳ ಸಾಧನೆಗೆ ಜತೆಯಾಗಿ ಕೆಲಸ ಮುಂದುವರಿಸುವುದನ್ನು ಎದುರು ನೋಡುತ್ತಿದ್ದೇವೆ. ಶಾಂತಿ, ಸಮೃದ್ಧಿ, ನಮ್ಮ ಭೂಮಿ ಮತ್ತು ನಮ್ಮ ಜನರೂ ಸೇರಿದಂತೆ ಮಹತ್ವದ ವಿಷಯಗಳಲ್ಲಿ ಭಾರತದೊಂದಿಗಿನ ಸಹಕಾರವೃದ್ಧಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಸುಭದ್ರವಾಗಿ ಮತ್ತು ಬೆಳೆಯುತ್ತಿರುವ ಅಮೇರಿಕ- ಭಾರತ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಬಾಂಧವ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.   

ಬದಲಾಗುತ್ತಿರುವ ಜಗತ್ತಿನಲ್ಲಿ ಹೊಸ ಭಾರತವನ್ನು ಅಪ್ಪಿಕೊಂಡ ವಿಶ್ವ!

ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅತಿಥಿಗಳ ಕೊಡುಗೆಯನ್ನು ಪ್ರಶಂಸೆ ವ್ಯಕ್ತಪಡಿಸಿದ ಎರಿಕ್ ಗಾರ್ಸೆಟ್ಟಿ ಅವರು, ಭಾರತ- ಅಮೇರಿಕದ ನಡುವಿನ ರೋಮಾಂಚಕ ಮತ್ತು ಸದೃಢ ಸಂಬಂಧದ ಎಂಜಿನ್‌ಗಳು ಎಂದು ಬಣ್ಣಿಸಿದರು. 

ಎರಿಕ್‌ ಗಾರ್ಸೆಟ್ಟಿ ಅವರು ಭಾರತದಲ್ಲಿನ ಅಮೇರಿಕ ರಾಯಭಾರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಚೆನ್ನೈಗೆ ಮೊದಲ ಬಾರಿ ಅಧಿಕೃತ ಪ್ರವಾಸದ ಅಂಗವಾಗಿ ಆಗಮಿಸಿದ್ದಾರೆ. 

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, ಕೈಗಾರಿಕೆ, ಹೂಡಿಕೆ ಪ್ರೋತ್ಸಾಹ ಮತ್ತು ವಾಣಿಜ್ಯ ಸಚಿವ ಡಾ.ಟಿ.ಆರ್‌.ಬಿ. ರಾಜಾ ಅವರು ಸಮಾರಂಭದಲ್ಲಿ ಮಾತನಾಡಿದರು. 

ಅಮೇರಿಕದ 247ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ ಸಚಿವ ರಾಜಾ ಅವರು, ಅಮೇರಿಕದೊಂದಿಗೆ ಗಾಢವಾದ ಬಾಂಧವ್ಯ ಹೊಂದಿರುವ ತಮಿಳುನಾಡಿನ ಪ್ರತಿನಿಧಿಯಾಗಿ ಇಂದಿನ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದು ನನಗೆ ದೊಡ್ಡ ಗೌರವ. ಅಮೇರಿಕದಂತೆಯೇ ತಮಿಳುನಾಡು ಸಹ ಸ್ವಾತಂತ್ರ್ಯ, ವೈವಿಧ್ಯತೆ ಮತ್ತು ಸಮಾನತೆಯನ್ನು ಗೌರವಿಸುತ್ತದೆ ಮತ್ತು ಈ ಮೌಲ್ಯಗಳನ್ನು ಒಳಗೊಂಡ ಸುಸ್ಥಿರ ಕೈಗಾರಿಕಾ ಬೆಳವಣಿಗೆಯಲ್ಲಿ ಸಹಕರಿಸುವ ಮೂಲಕ ನಮ್ಮ ಸಂಬಂಧಗಳನ್ನು ಗಾಢವಾಗಿಸಲು ನಾವು ಬಯಸುತ್ತೇವೆ ಎಂದರು. 

ಹೊಸದಿಲ್ಲಿಯ ಅಮೇರಿಕ ರಾಯಭಾರ ಕಚೇರಿಯಲ್ಲಿನ ಹಿರಿಯ ರಕ್ಷಣಾ ಅಧಿಕಾರಿ ಮತ್ತು ಡಿಫೆನ್ಸ್‌ ಅಟಾಶೆ ರಿಯರ್‌ ಅಡ್ಮಿರಲ್‌ ಬೆಕರ್‌, ಹೊಸದಿಲ್ಲಿಯ ಅಮೇರಿಕ ರಾಯಭಾರ ಕಚೇರಿಯಲ್ಲಿನ ಡೆಪ್ಯುಟಿ ಮಿನಿಸ್ಟರ್‌ ಕೌನ್ಸಲರ್‌ ಫಾರ್‌ ಕಮರ್ಷಿಯಲ್‌ ಅಫೇರ್ಸ್‌ ಜಿಯೊಪ್ರೇ ಪರಿಶ್‌, ಮತ್ತು ಯು.ಎಸ್‌. ನ್ಯಾಷನಲ್‌ ಸೈನ್ಸ್‌ ಫೌಂಡೇಷನ್‌ನ ನಿರ್ದೇಶಕ ಡಾ. ಸೇತುರಾಮನ್‌ ಪಂಚನಾಥನ್‌ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. 

ಮತ್ತೆ ಅರೆಸ್ಟ್ ಆಗಿ ಜೈಲುಪಾಲಾದರಾ ಟ್ರಂಪ್?:ಅಂತರ್ಯುದ್ಧಕ್ಕೆ ನಾಂದಿ ಹಾಡುತ್ತಾ ಮಾಜಿ ಅಧ್ಯಕ್ಷರ ಬಂಧನ..?

ಚೆನ್ನೈನ ನೂತನವಾಗಿ ಬಂದಿರುವ ಮರೀನ್‌ ಕಾರ್ಪ್ಸ್‌ ವಿಭಾಗದ ಫಸ್ಟ್‌ ಕಲರ್‌ ಗಾರ್ಡ್‌ ಮಾರ್ಚ್‌, ಚೆನ್ನೈನ ಕೆಎಂ ಮ್ಯೂಸಿಕ್‌ ಕನ್ಸರ್ವೇಟರಿಯ ವಿದ್ಯಾರ್ಥಿಗಳು ಅಮೇರಿಕ ಮತ್ತು ಭಾರತದ ರಾಷ್ಟ್ರಗೀತೆಗಳನ್ನು ಹಾಡಿದರು. ಬೀಟ್‌ಫ್ರೀಕ್ಸ್‌ ತಂಡ ಭಾರತೀಯ ಮೂಲದ ಅಮೇರಿಕನ್‌ ಪಾಪ್‌ ಗಾಯಕಿ ರಾಜಕುಮರಿ ಅವರ ಬಿಂದೀಸ್‌ ಅನದ ಬ್ಯಾಂಗಲ್ಸ್‌ ಹಾಡಿಗೆ ನೃತ್ಯ ಮಾಡಿದರು. ರಾಜಕೀಯ ವ್ಯಂಗ್ಯಚಿತ್ರಕಾರ ಹಾಗೂ ಫುಲ್‌ಬ್ರೈಟ್‌-ನೆಹರು ಸ್ಕಾಲರ್‌ ಸಾತ್ವಿಕ್‌ ಗಾಡೆ ಅಮೇರಿಕ-ಭಾರತದ ಸಹಕಾರವನ್ನು ಎತ್ತಿತೋರಿಸುವ ಹಿನ್ನೆಲೆ ಚಿತ್ರವನ್ನು ವಿನ್ಯಾಸಗೊಳಿಸಿದ್ದು ಸಮಾರಂಭದ ವಿಶೇಷಗಳಾಗಿದ್ದವು. 

ಈ ಕಾರ್ಯಕ್ರಮವು ಇಂಡೋ-ಪೆಸಿಫಿಕ್‌, ಲಿಂಗ ಸಮಾನತೆ, ಆವಿಷ್ಕಾರ, ಬಾಹ್ಯಾಕಾಶ, ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಅಮೇರಿಕ- ಭಾರತದ ನಡುವ ಸಹಕಾರವನ್ನು ಎತ್ತಿ ತೋರಿಸಿತು. ಹಾಗೆಯೇ ಅಮೇರಿಕ- ಭಾರತದ ಜನರ ನಡುವಣ ಬಾಂಧವ್ಯ ಮತ್ತು ಸಾಂಸ್ಥಿಕ ಸಹಯೋಗಗಳನ್ನೂ ಗುರುತಿಸಿತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!