ಕೊರೋನಾ ಸಂಕಷ್ಟದ ನಡುವೆ ಮೋದಿಯಿಂದ ಬಂಪರ್ ಗಿಫ್ಟ್; ನೌಕರರಿಗೆ ಕನಿಷ್ಠ ವೇತನ ನಿಗದಿ?

Published : Jul 10, 2020, 03:27 PM IST
ಕೊರೋನಾ ಸಂಕಷ್ಟದ ನಡುವೆ ಮೋದಿಯಿಂದ ಬಂಪರ್ ಗಿಫ್ಟ್; ನೌಕರರಿಗೆ ಕನಿಷ್ಠ ವೇತನ ನಿಗದಿ?

ಸಾರಾಂಶ

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಕಾರ್ಮಿಕರ ನಿಯಮದಲ್ಲಿ ಮಹತ್ತರ ತಿದ್ದುಪಡಿ ಮಾಡುತ್ತಿದೆ. ತಿದ್ದುಪಡಿಯಲ್ಲಿನ ಪ್ರಮುಖ ಅಂಶ ತಿಂಗಳ ಸಂಬಳ ಪಡೆಯುವ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಜು.10): ಕಾರ್ಮಿಕರ ನಿಯಮ ತಿದ್ದುಪಡಿ ಕುರಿತು ವಿರೋಧ ಪಕ್ಷಗಳ ಟೀಕೆ, ಆರೋಪಗಳಿಗೆ ತಿರುಗೇಟು ನೀಡಲು ಕೇಂದ್ರ ಸರ್ಕಾರ ಇದೀಗ ಹಲವು ಬದಲಾವಣೆಯೊಂದಿಗೆ ಕಾನೂನು ಜಾರಿಗೆ ತರಲು ನಿರ್ಧರಿಸಿದೆ. ಇದರಲ್ಲಿ ತಿಂಗಳ ಸಂಬಳ ಪಡೆಯುವ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಬರೋಬ್ಬರಿ 50 ಕೋಟಿ ನೌಕರರಿಗೆ ನೆರವಾಗಲಿದೆ.

ಏಷ್ಯಾದ ಅತೀ ದೊಡ್ಡ ಸೋಲಾರ್ ಪ್ಲಾಂಟ್ ಉದ್ಘಾಟಿಸಿದ ಮೋದಿ!.

ಕಂಪನಿಗಳು, ಕೈಗಾರಿಗಳು, ಕಚೇರಿ ಸೇರಿದಂತೆ ಹಲವೆಡೆ ಸರಿಯಾದ ವೇತನ, ನಿಗದಿತ ವೇತನ ನೀಡದೆ ಸತಾಯಿಸುವ ಹಲವು ಪ್ರಕರಣಗಳು ಇವೆ. ಹೀಗಾಗಿ ಕೇಂದ್ರ ಸರ್ಕಾರ ಕನಿಷ್ಠ ವೇತನ ನಿಯಮದಲ್ಲಿ ತಿದ್ದು ಪಡಿ ಮಾಡುತ್ತಿದೆ. ಸದ್ಯದ ಅವಶ್ಯಕತೆ, ರೂಪಾಯಿ ಮೌಲ್ಯ, ಮೂಲಭೂತ ಸೌಕರ್ಯ ಸೇರಿದಂತೆ ಹಲವು ವಿಚಾರ ಗಮನದಲ್ಲಿಟ್ಟು ಕನಿಷ್ಠ ವೇತನ ನಿಗದಿ ಮಾಡಲಿದೆ. ಇದರಿಂದ ಭಾರತದ 50 ಕೋಟಿ ನೌಕರರಿಗೆ ಸಹಾಯವಾಗಲಿದೆ.

ಆರ್ಥಿಕ ಚೇತರಿಕೆಯಲ್ಲಿ ಭಾರತವೇ ಮುಂಚೂಣಿ: ಬಂಡವಾಳ ಹೂಡಲು ಮೋದಿ ಕರೆ!

ದೇಶದಲ್ಲೆಡೆ ಏಕರೂಪದ ಕಾರ್ಮಿಕರ ಕಾನಾನು ಜಾರಿಗೆ ಬರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕನಿಷ್ಠ ವೇತನ ನಿಗದಿ ಮಾಡಲಿದೆ. ಇನ್ನುಳಿದಂತೆ ಕಾರ್ಮಿಕರ ನಿಯಮಲ್ಲಿ ಹಲವು ತಿದ್ದುಪಡಿಗಳು ಆಗಲಿವೆ. ಕಳೆದ ವರ್ಷ ಮಂಡಿಸಲಾಗಿದ್ದ ಕಾರ್ಮಿಕರ ನಿಯಮ ತಿದ್ದಪಡಿಗೆ ಹಲವು ವಿರೋಧಗಳು ಕೇಳಿ ಬಂದಿತ್ತು. ಇದೀಗ ತಜ್ಞರು, ಕಾರ್ಮಿಕರ ಸಂಘಟನೆ ಹಾಗೂ ವಿರೋಧ ಪಕ್ಷಗಳ ಸಲಹೆ ಪಡೆದು ಸಮರ್ಥ ಕಾನೂನು ಜಾರಿಯಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬ್ಯಾಗಲ್ಲಿ ಹೃದಯ ಇಟ್ಕೊಂಡು ಓಡಾಟ: ನೈಸರ್ಗಿಕ ಹೃದಯ ಇಲ್ಲದೇ ಬದುಕುಳಿದಿರುವ ಜಗತ್ತಿನ ಏಕೈಕ ಮಹಿಳೆ ಈಕೆ
ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ