ಜಮ್ಮು ಮಾರ್ಗದಲ್ಲಿ ಅಮರನಾಥ ಯಾತ್ರೆ ರದ್ದು, ನಾಪತ್ತೆಯಾದವರು ಜೀವಂತವಿರುವ ಸಾಧ್ಯತೆ ಕ್ಷೀಣ

Published : Jul 11, 2022, 10:13 AM ISTUpdated : Jul 11, 2022, 10:42 AM IST
ಜಮ್ಮು ಮಾರ್ಗದಲ್ಲಿ ಅಮರನಾಥ ಯಾತ್ರೆ ರದ್ದು, ನಾಪತ್ತೆಯಾದವರು  ಜೀವಂತವಿರುವ ಸಾಧ್ಯತೆ ಕ್ಷೀಣ

ಸಾರಾಂಶ

ಜಮ್ಮು ಮಾರ್ಗದಲ್ಲಿ ಅಮರನಾಥ ಯಾತ್ರೆ ರದ್ದು ಪ್ರತಿಕೂಲ ಹವಾಮಾನ ಹಿನ್ನೆಲೆ 2ದಿನವೂ ಯಾತ್ರೆಗೆ ಅಡ್ಡಿ ನಾಪತ್ತೆಯಾದ 45 ಜನ ಜೀವಂತವಾಗಿರುವ ಸಾಧ್ಯತೆ ಕ್ಷೀಣ

ಜಮ್ಮು (ಜು.11): ಪ್ರತಿಕೂಲ ಹವಾಮಾನ ಪರಿಸ್ಥಿತಿ ಮುಂದುವರೆದ ಹಿನ್ನೆಲೆಯಲ್ಲಿ ಜಮ್ಮು ಮಾರ್ಗದಲ್ಲಿ ನಡೆಯುವ ಅಮರನಾಥ ಯಾತ್ರೆಯನ್ನು ರದ್ದು ಮಾಡಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿನ ಹಿಮಾಲಯದಲ್ಲಿನ 3,880 ಮೀ. ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯಕ್ಕೆ ಕಾಶ್ಮೀರದ 2 ಬೇಸ್‌ ಕ್ಯಾಂಪ್‌ಗಳಿಂದ ಯಾತ್ರಿಕರ ಹೊಸ ತಂಡಗಳು ಯಾತ್ರೆ ಕೈಗೊಳ್ಳುವಂತಿಲ್ಲ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ಸಾವಿನ ಸಂಖ್ಯೆ 60ಕ್ಕೆ?: ಅಮರನಾಥ ಗುಹೆಯ ಬಳಿ ಸಂಭವಿಸಿದ ಮೇಘಸ್ಫೋಟದಲ್ಲಿ ನಾಪತ್ತೆಯಾದ 45 ಮಂದಿಯ ಕುರಿತಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇವರುಗಳು ಜೀವಂತವಾಗಿರುವ ಸಾಧ್ಯತೆ ಬಹಳ ಕಡಿಮೆ ಇದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಪ್ರವಾಹದಿಂದ ಉಂಟಾಗಿರುವ ಅವಶೇಷಗಳನ್ನು ತೆರವು ಮಾಡುವ ಕಾರ್ಯವನ್ನು ಕೈಗೊಂಡಿದ್ದಾರೆ. ಆದರೆ ಇವುಗಳ ಅಡಿಯಲ್ಲಿ ಯಾರಾದರೂ ಜೀವಂತವಿದ್ದರೆ ಅದು ಪವಾಡವೇ ಸರಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಗುಹೆಯ ಬಳಿಯಿಂದ ಹೆಲಿಕಾಪ್ಟರ್‌ನಲ್ಲಿ 65 ಟ್ರಿಪ್‌ಗಳನ್ನು ನಡೆಸಿ 165 ಮಂದಿಯನ್ನುರಕ್ಷಣೆ ಮಾಡಲಾಗಿದೆ. ಹವಾಮಾನ ವೈಪರಿತ್ಯದಿಂದ ತಡೆಯಲಾಗಿದ್ದ ಹೆಲಿಕಾಪ್ಟರ್‌ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.

ಅಮರನಾಥದಲ್ಲಿ ಮೇಘ ಸ್ಫೋಟ: ಹಿಮಲಿಂಗ ದರ್ಶನಕ್ಕೆ ಹೋದವರು ಜಲಸಮಾಧಿ!

ರಾಜ್ಯದ 370 ಅಮರನಾಥ ಯಾತ್ರಿಗಳು ಸೇಫ್‌ : ‘ಪವಿತ್ರ ಅಮರನಾಥ ಯಾತ್ರೆಗೆ ರಾಜ್ಯದಿಂದ ತೆರಳಿದ್ದ 370 ಯಾತ್ರಾರ್ಥಿಗಳ ಮಾಹಿತಿಯು ರಾಜ್ಯ ವಿಕೋಪ ನಿರ್ವಹಣಾ ಕೇಂದ್ರಕ್ಕೆ (ಎಸ್‌ಇಒಸಿ) ಲಭಿಸಿದ್ದು, ಈ ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲ ಯಾತ್ರಿಕರ ರಕ್ಷಣೆಗೆ ಅಗತ್ಯ ಕ್ರಮ ವಹಿಸಲಾಗುತ್ತಿದೆ’ ಎಂದು ಸರ್ಕಾರ ತಿಳಿಸಿದೆ.

‘ಜು.8ರಿಂದ 10ರವರೆಗೂ ರಾಜ್ಯ ವಿಕೋಪ ನಿರ್ವಹಣಾ ಸಹಾಯವಾಣಿಗೆ ಒಟ್ಟು 75 ಕರೆಗಳು ಬಂದಿವೆ. ಅಮರನಾಥ ಯಾತ್ರೆಗೆ ತೆರಳಿದವರ ಸಂಬಂಧಿಕರು ಕರೆ ಮಾಡಿ ತಮ್ಮ ಕುಟುಂಬದವರ ರಕ್ಷಣೆಗೆ ಕೋರಿದ್ದಾರೆ. ಇವರಿಂದ ಒಟ್ಟು 370 ಯಾತ್ರಿಗಳ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರನ್ನೂ ನಮ್ಮ ಕೇಂದ್ರದ ಸಿಬ್ಬಂದಿ ದೂರವಾಣಿ ಹಾಗೂ ಸ್ಥಳಿಯ ಆಡಳಿತದ ಮೂಲಕ ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ಎಲ್ಲರೂ ಸುರಕ್ಷಿತವಾಗಿರುವುದು ತಿಳಿದು ಬಂದಿದೆ’ ಎಂದು ರಾಜ್ಯ ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್‌ ರಾಜನ್‌ ತಿಳಿಸಿದ್ದಾರೆ.

Amarnath Yatra; 15000 ಮಂದಿ ರಕ್ಷಣೆ, 40 ಜನ ಇನ್ನೂ ನಾಪತ್ತೆ

‘ನಂತರವೂ ನಮ್ಮ ಸಿಬ್ಬಂದಿ ರಾಜ್ಯದ ಯಾತ್ರೆಗಳ ಗುಂಪಿನವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇದುವರೆಗೂ ರಾಜ್ಯದಿಂದ ತೆರಳಿದ ಯಾವುದೇ ಯಾತ್ರಿಕರು ಅಪಾಯಕ್ಕೆ ಸಿಲುಕಿರುವ ಅಥವಾ ಯಾವುದೇ ಅವಘಡಗಳಿಂದ ಗಾಯಗೊಂಡಿರುವ, ಸಾವು ನೋವು ಸಂಭವಿಸಿರುವ ವರದಿಗಳು ಬಂದಿಲ್ಲ. ಯಾರು ಕೂಡ ಆತಂಕ ಪಡಬೇಕಾಗಿಲ್ಲ’ ಎಂದಿದ್ದಾರೆ.

‘ನಾವು ಜಮ್ಮು ಕಾಶ್ಮೀಕರ ಆಡಳಿತದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅಮರನಾಥ ಯಾತ್ರೆಗೆ ಇರುವ ಅಡೆತಡೆಗಳನ್ನು ತೆರವುಗೊಳಿಸಿ ಆದಷ್ಟುಬೇಗ ಪುನಾರಂಭಿಸುವ ನಿಟ್ಟಿನಲ್ಲಿ ಭಾರತೀಯ ನೇನಾಪಡೆ, ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಇತರೆ ಸಂಸ್ಥೆಗಳಿಂದ ಸ್ಥಳೀಯ ಆಡಳಿತ ಪ್ರಯತ್ನ ನಡೆಸಿದೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌