ಒಂದೂವರೆ ತಿಂಗಳಲ್ಲಿ ಕರಗಿತು ಅಮರನಾಥ ಶಿವಲಿಂಗ; ಆತಂಕದಲ್ಲಿ ಭಕ್ತ ವೃಂದ!

By Suvarna NewsFirst Published Jul 25, 2020, 7:24 PM IST
Highlights

ಹಿಂದೂ ಪವಿತ್ರ ತೀರ್ಥ ಕ್ಷೇತ್ರವಾಗಿರುವ ಅಮರನಾಥದಲ್ಲಿ ಇದೀಗ ಆತಂಕಕಾರಿ ಬೆಳವಣಿಗೆ ನಡೆದಿದೆ. ಜೂನ್ ತಿಂಗಳ ಮಧ್ಯ ಭಾಗದಲ್ಲಿ ರೂಪುಗೊಂಡಿದ್ದ ಹಿಮರೂಪದ ಶಿವಲಿಂಗ ಇದೀಗ ಶೇಕಡ 80 ರಷ್ಟು ಕರಗಿದೆ. ಕೇವಲ ಒಂದೂವರೆ ತಿಂಗಳಲ್ಲಿ ಶಿವಲಿಂಗ ಕರಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

ಜಮ್ಮು ಮತ್ತು ಕಾಶ್ಮೀರ(ಜು.25): ದಕ್ಷಿಣ ಕಾಶ್ಮೀರ ಹಿಮಾಲದ ವಲಯದಲ್ಲಿರುವ  ಅಮರನಾಥ ಪವಿತ್ರ ಕ್ಷೇತ್ರವಾಗಿದೆ. ಪ್ರತಿ ವರ್ಷ ಉದ್ಭವವಾಗುವ ಹಿಮ ಶಿವಲಿಂಗ ದರ್ಶನಕ್ಕೆ ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ವರ್ಷ ಕೊರೋನಾ ವೈರಸ್ ಕಾರಣ ಅಮರನಾಥ್ ಯಾತ್ರೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಕೇವಲ ಒಂದೂವರೆ ತಿಂಗಳಲ್ಲಿ ಅಮರನಾಥ ಹಿಮಶಿವಲಿಂಗ ಶೇಕಡಾ 80 ರಷ್ಟು ಕರಗಿದೆ.

ಬೆಂಗಳೂರು ಐಟಿ ಕಂಪನಿ ಮಾಲೀಕನಿಂದ ತಿರುಪತಿ ದೇವಸ್ಥಾನಕ್ಕೆ 1 ಕೋಟಿ ರೂ. ದೇಣಿಗೆ!.

ಸಾಮಾನ್ಯವಾಗಿ ಬೇಸಿಗೆ ಕಾಲದವರೆಗೆ ಅಮರನಾಥ ಹಿಮ ಶಿವಲಿಂಗ ಭಕ್ತರಿಗೆ ದರ್ಶನ ನೀಡಲಿದೆ. ಆದರೆ ಈ ಬಾರಿ ಜೂನ್ ಮಧ್ಯಭಾಗದಲ್ಲಿ ರೂಪುಗೊಂಡಿದ್ದ ಹಿಮ ಶಿವಲಿಂಗ ಕೇವಲ ಒಂದೂವರೆ ತಿಂಗಳಲ್ಲಿ ಬಹುತೇಕ ಕರಗಿ ಹೋಗಿದೆ. ಜುಲೈ 18 ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಲ್ಲಿಗೆ ಬೇಟಿ ನೀಡಿದ್ದರು. ಈ ವೇಳೆ ಶೇಕಡಾ 50 ರಷ್ಟು ಶಿವಲಿಂಗ ಕರಗಿತ್ತು.

ಜುಲೈ ಅಂತ್ಯಕ್ಕೆ ಶೇಕಡಾ 80 ರಷ್ಟು ಕರಗಿದೆ. ಪ್ರಮುಖವಾಗಿ ಕಾಶ್ಮೀರ ವಲಯದಲ್ಲಿ ಉಷ್ಣತೆ ಹೆಚ್ಚಾಗಿದೆ. ಉಷ್ಣಾಂಶ ಹೆಚ್ಚಾದ ಕಾರಣ ಕಾಶ್ಮೀರದ ಹಿಮಗಳು ಕರಗುತ್ತಿದೆ. ಇತ್ತ ಅಮರನಾಥ್ ಶಿವಲಿಂಗವೂ ಕರಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಆಗಸ್ಟ್ ಆರಂಭದಲ್ಲಿ ಅಮರಾಥ ಶಿವಲಿಂಗ ಸಂಪೂರ್ಣವಾಗಿ ಕರಗಲಿದೆ ಎನ್ನುತ್ತಿದೆ ವರದಿಗಳು.

ದಕ್ಷಿಣ ಕಾಶ್ಮೀರದಲ್ಲಿ  ಬಲ್ತಾಲ್‌ನಿಂದ 14 ಕಿಲೋಮೀಟರ್ ದೂರದಲ್ಲಿರುವ ಅಮರನಾಥ ಸಮುದ್ರ ಮಟ್ಟದಿಂದ 13,000 ಅಡಿ ಎತ್ತರದಲ್ಲಿದೆ. 

click me!