'ಮುಸ್ಲಿಂ ಎಂದು ಸಾಬೀತು ಮಾಡಲು ಹಿಜಾಬ್‌ ಧರಿಸಬೇಕಾಗಿಲ್ಲ, ನೆಟ್ಟಿಗರ ವಿರುದ್ಧ ಕಾಶ್ಮೀರಿ ಟಾಪರ್‌ ಗರಂ'

By Suvarna News  |  First Published Feb 14, 2022, 8:04 AM IST

* 12 ನೇ ತರಗತಿಯ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಾಶ್ಮೀರಕ್ಕೆ ಪ್ರಥಮ ಸ್ಥಾನ ಪಡೆದ ಆರೂಸಾ 

* ಹಿಜಾಬ್‌ ಧರಿಸಿ ಎಂದ ನೆಟ್ಟಿಗರ ವಿರುದ್ಧ ಕಾಶ್ಮೀರಿ ಟಾಪರ್‌ ಗರಂ

* ಮುಸ್ಲಿಂ ಎಂದು ಸಾಬೀತು ಮಾಡಲು ಹಿಜಾಬ್‌ ಧರಿಸಬೇಕಾಗಿಲ್ಲ: ಅರೂಸಾ


ಶ್ರೀನಗರ(ಫೆ.14): 12 ನೇ ತರಗತಿಯ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಕಾಶ್ಮೀರಕ್ಕೆ ಪ್ರಥಮ ರಾರ‍ಯಂಕ್‌ ಪಡೆದ ಆದ ಶ್ರೀನಗರದ ಆರೂಸಾ ಪರ್ವೇಜ್‌, ‘ನಾನು ಉತ್ತಮ ಮುಸ್ಲಿಂ ಎಂಬುದನ್ನು ಸಾಬೀತುಪಡಿಸಲು ಹಿಜಾಬನ್ನು ಧರಿಸುವ ಅಗತ್ಯವಿಲ್ಲ’ ಎಂದು ಹೇಳಿದ್ದಾಳೆ.

ಶ್ರೀನಗರದ ನಿವಾಸಿಯಾದ ಆರೂಸಾ 12 ನೇ ತರಗತಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 500 ಕ್ಕೆ 499 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಳು. ಆಕೆಯನ್ನು ಸನ್ಮಾನಿಸಲು ಜಿಲ್ಲಾಧಿಕಾರಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿಜಾಬ್‌ ಧರಿಸದ ಕಾರಣ ಆನ್ಲೈನ್‌ನಲ್ಲಿ ಆಕೆಯನ್ನು ಟ್ರೋಲ್‌ ಮಾಡಲಾಗಿತ್ತು. ಕರ್ನಾಟಕದ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್‌ ಎಂದು ಕೂಗಿದ ವಿದ್ಯಾರ್ಥಿನಿಯಿಂದ ಪಾಠ ಕಲಿತು ಕಾಶ್ಮೀರದ ಹುಡುಗಿಯರಿಗೆ ಮಾದರಿಯಾಗು ಎಂದು ನೆಟ್ಟಿಗರು ಹೇಳಿದ್ದರು.

Tap to resize

Latest Videos

ಇದಕ್ಕೆ ಬೇಸರ ವ್ಯಕ್ತಪಡಿಸಿದ ಆರೂಸಾ, ‘ನಾನು ಅಲ್ಲಾನನ್ನು ನಂಬುತ್ತೇನೆ. ಇಸ್ಲಾಮಿಕ್‌ ತತ್ವಗಳನ್ನು ಪಾಲಿಸುತ್ತೇನೆ. ಆದರೆ ಉತ್ತಮ ಮುಸ್ಲಿಂ ಎಂಬುದನ್ನು ಸಾಬೀತು ಪಡಿಸಲು ಹಿಜಾಬ್‌ ಧರಿಸುವ ಅಗತ್ಯವಿಲ್ಲ’ ಎಂದಿದ್ದಾಳೆ.

ಹಿಜಾಬ್‌, ಬುರ್ಕಾ ಧರಿಸದಿರುವುದೆ ಅತ್ಯಾಚಾರ ಹೆಚ್ಚಲು ಕಾರಣ; ಜಮೀರ್‌

ಬುರ್ಕಾ, ಹಿಜಾಬ್‌ ಧರಿಸದೆ ಇರುವುದೆ ಭಾರತದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದು ಮಾಜಿ ಸಚಿವ, ಶಾಸಕ ಜಮೀರ್‌ ಅಹ್ಮದ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್‌ ಎನ್ನುವುದು ಮುಸಲ್ಮಾನದಲ್ಲಿ ಪರದೆ ಎಂದರ್ಥ. ಇದನ್ನು ಯಾರು ವಿರೋಧ ಮಾಡುತ್ತಿದ್ದಾರೋ ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲ ಎನ್ನಿಸುತ್ತದೆ. ಹೆಣ್ಣುಮಕ್ಕಳಿದ್ದರೆ ಅವರಿಗೆ ಇದರ ಬಗ್ಗೆ ಗೊತ್ತಿರುತ್ತಿತ್ತು. ಮಹಿಳೆಯರ ಸೌಂದರ್ಯವನ್ನು ಪರ ಪುರುಷರು ನೋಡಬಾರದು, ಅವರಿಂದ ಮುಚ್ಚಿಡಲು ಹಿಜಾಬ್‌, ಬುರ್ಕಾ ಬಳಸಲಾಗುತ್ತದೆ. ನನ್ನ ಪ್ರಕಾರ ಪ್ರಸ್ತುತ ಭಾರತದಲ್ಲೇ ಅತೀ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಾರಣವೇನು? ಬುರ್ಕಾ, ಪರದೆಯಲ್ಲಿ ಇರದೇ ಇರುವುದೆ ಇದಕ್ಕೆ ಕಾರಣವಾಗಿದೆ. ಹಿಜಾಬ್‌ ಇವತ್ತು, ನಿನ್ನೆಯ ವಿಚಾರವಲ್ಲ. ಅನಾದಿ ಕಾಲದಿಂದ ನಡೆದುಬಂದ ಪದ್ಧತಿ. ಅಷ್ಟಕ್ಕೂ ಹಿಜಾಬ್‌ ಕಡ್ಡಾಯವಲ್ಲ. ಯಾರಿಗೆ ಇಷ್ಟವಿಲ್ಲವೋ ಅವರು ಧರಿಸದಿದ್ದರೂ ನಡೆಯುತ್ತದೆ. ಯಾರಿಗೆ ತಮ್ಮ ಸೌಂದರ್ಯ ಮುಚ್ಚಿಡಬೇಕು ಎಂದೆನಿಸುತ್ತದೊ ಅವರು ಹಿಜಾಬ್‌ ಧರಿಸುತ್ತಾರೆ ಎಂದರು.

ಒಂದೇ ದಿನದಲ್ಲಿ ಹಿಜಾಬ್‌ ವಿವಾದ ಬಗೆಹರಿಸುತ್ತಿದ್ದೆವು; ಡಿಕೆಶಿ

 

 

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಾ¶್ಟ… ಹಿಂದುತ್ವದ ತಂತ್ರಕ್ಕೆ ಮೊರೆ ಹೋಗಿದ್ದೇವೆ ಎಂಬುದು ಸುಳ್ಳು. ಮಕ್ಕಳ ವಿದ್ಯಾಭ್ಯಾಸ, ಸಮಾಜದ ಸ್ವಾಸ್ಥ್ಯ ಹಾಳಾಗಬಾರದು ಎಂಬ ಕಾರಣದಿಂದಾಗಿ ಆದಷ್ಟುತಾಳ್ಮೆ ವಹಿಸಿದ್ದೇವೆ. ಬಿಜೆಪಿಯವರು ಸರ್ಕಾರವನ್ನು ಸರಿಯಾಗಿ ನಡೆಸಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹಿಜಾಬ್‌ ವಿವಾದದಿಂದಾಗಿ ದೇಶಕ್ಕೆ ಅವಮಾನ ಆಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಬಗ್ಗೆ ಒಂದು ಅಜೆಂಡಾವನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿವೆ. ಒಂದು ವೇಳೆ ನಾವು ಸರ್ಕಾರದಲ್ಲಿ ಇದ್ದಿದ್ದರೆ ಒಂದೇ ದಿನದಲ್ಲಿ ವಿವಾದವನ್ನು ನಿವಾರಣೆ ಮಾಡುತ್ತಿದ್ದೆವು ಎಂದರು.

ಈಶ್ವರಪ್ಪ ದೇಶದ್ರೋಹಿ. ಹಿಜಾಬ್‌ ಪ್ರಕರಣದಲ್ಲಿ ಈಶ್ವರಪ್ಪ ಹೇಗೆ ನಡೆದುಕೊಂಡಿದ್ದಾರೆ? ಅವರಿಗೆ ಎಷ್ಟುಗೌರವ ನೀಡಬೇಕು? ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಏನು ಬೇಕಾದರೂ ಮಾತನಾಡಬಹುದೆ? ಆದರೆ, ನಾನು ಅವರಷ್ಟುಮಟ್ಟಕ್ಕೆ ಇಳಿದು ಮಾತನಾಡಿಲ್ಲ ಎಂದರು. ಬಿಜೆಪಿಯವರಿಗೆ ರಾಜಕಾರಣ ಮುಖ್ಯ. ಆದರೆ, ನಮಗೆ ಸಮಾಜದ ಶಾಂತಿ, ಸೌಹಾರ್ದ ಮುಖ್ಯ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿಯೂ ಆಗಿದೆ ಎಂದರು.

click me!