ಲಸಿಕೆ ವ್ಯರ್ಥವಾಗುತ್ತಿದೆ, ಎಲ್ಲರಿಗೂ ಲಸಿಕೆ ಪಡೆಯಲು ಅನುಮತಿಸಿ: ಐಎಂಎ!

By Kannadaprabha NewsFirst Published Jan 21, 2021, 9:34 AM IST
Highlights

ಲಸಿಕೆ ಪಡೆಯಲು ನೋಂದಾಯಿಸಿದ ಕೊರೋನಾ ವಾರಿಯರ್‌ಗಳೆಲ್ಲರೂ ಲಸಿಕೆ ಪಡೆದಿಲ್ಲ| ಲಸಿಕೆ ವ್ಯರ್ಥವಾಗುತ್ತಿದೆ, ಎಲ್ಲರಿಗೂ ಲಸಿಕೆ ಪಡೆಯಲು ಅನುಮತಿಸಿ: ಐಎಂಎ

ಭೋಪಾಲ್‌(ಜ.21): ಲಸಿಕೆ ಪಡೆಯಲು ನೋಂದಾಯಿಸಿದ ಕೊರೋನಾ ವಾರಿಯರ್‌ಗಳೆಲ್ಲರೂ ಲಸಿಕೆ ಪಡೆಯದ ಕಾರಣ ಲಸಿಕೆ ವ್ಯರ್ಥವಾಗುತ್ತಿದೆ. ಹಾಗಾಗಿ ಆರೋಗ್ಯವಂತರು ಅಥವಾ ಲಸಿಕೆ ಪಡೆಯಲು ಇಚ್ಛಿಸುವ ಇತರ ಎಲ್ಲರಿಗೂ ಚುಚ್ಚುಮದ್ದು ಪಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮನವಿ ಮಾಡಿದೆ.

ಸದ್ಯ 50 ಮಿ.ಲೀ. ನ ಒಂದು ಬಾಟಲಿಯಿಂದ 10 ಜನರಿಗೆ ತಲಾ 5 ಎಂಎಲ್‌ನಂತೆ ಲಸಿಕೆ ನೀಡಬಹುದು. ಆದರೆ ಕೋವಿಶೀಲ್ಡ್‌ ಬಾಟಲ್‌ ಅನ್ನು ಒಮ್ಮೆ ತೆರೆದರೆ ಅದನ್ನು 6 ತಾಸಿನ ಒಳಗೆ ಪೂರ್ಣ ಬಳಸಬೇಕು. ಅದೇ ರೀತಿ ಕೋವ್ಯಾಕ್ಸಿನ್‌ ಲಸಿಕೆಯನ್ನು 4 ಗಂಟೆಗಳ ಒಳಗೆ ಕಾಲಿ ಮಾಡಬೇಕು. ಆದರೆ ಅಗತ್ಯ ಸಂಖ್ಯೆಯ ಕೊರೋನಾ ವಾರಿಯರ್‌ಗಳು ಲಸಿಕೆ ಪಡೆಯದ ಕಾರಣ, ಅವಧಿ ಮೀರಿದ ಲಸಿಕೆ ವ್ಯರ್ಥವಾಗುತ್ತಿದೆ. ಹಾಗಾಗಿ ಎಲ್ಲರಿಗೂ ಲಸಿಕೆ ಪಡೆಯಲು ಅವಕಾಶ ನೀಡಬೇಕು ಎಂದು ಐಎಂಎ ಆಗ್ರಹಿಸಿದೆ.

ಅಡ್ಡಪರಿಣಾಮ, ಲಸಿಕೆ ಪಡೆಯಲು ಹಿಂದೇಟು

ಕೊರೋನಾ ಲಸಿಕೆ ಪಡೆದ ಕೇವಲ ಶೇ.0.18 ಜನರ ಮೇಲೆ ಮಾತ್ರ ಅಡ್ಡಪರಿಣಾಮ ಉಂಟಾಗಿದೆ. ಕೇವಲ ಶೇ.0.002ರಷ್ಟುಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ವಿಶ್ವದಲ್ಲೇ ತೀರಾ ಕಮ್ಮಿ ಎಂದು ಕೇಂದ್ರ ಸರ್ಕಾರ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆರೋಗ್ಯ (ಆರೋಗ್ಯ) ಸದಸ್ಯ ವಿ.ಕೆ. ಪೌಲ್‌, ‘ಲಸಿಕೆ ಪಡೆದ ನಂತರ ಉಂಟಾದ ಅಡ್ಡಪರಿಣಾಮಗಳು, ಅದರ ಗಂಭೀರತೆ ನಗಣ್ಯ. ಎರಡೂ ಲಸಿಕೆಗಳು ಸುರಕ್ಷಿತ’ ಎಂದು ಸ್ಪಷ್ಟಪಡಿಸಿದರು.

 

click me!