ಇಂಡಿ ಒಕ್ಕೂಟದಲ್ಲಿ ಮುಸುಕಿನ ಗುದ್ದಾಟ, ಎಲ್ಲವೂ ಸರಿ ಇಲ್ಲ ಎಂದ ಒಮರ್ ಅಬ್ದುಲ್ಲಾ!

Published : Oct 31, 2023, 05:43 PM ISTUpdated : Oct 31, 2023, 05:44 PM IST
ಇಂಡಿ ಒಕ್ಕೂಟದಲ್ಲಿ ಮುಸುಕಿನ ಗುದ್ದಾಟ, ಎಲ್ಲವೂ ಸರಿ ಇಲ್ಲ ಎಂದ ಒಮರ್ ಅಬ್ದುಲ್ಲಾ!

ಸಾರಾಂಶ

ಪಂಚ ರಾಜ್ಯ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಈಗಾಗಲೇ ಕಾಂಗ್ರೆಸ್ ಹಾಗೂ ಸಮಾಜವಾದಿ ಪಾರ್ಟಿ ತಿಕ್ಕಾಟ ನಡೆದಿದೆ. ಇದು ಮೇಲ್ನೋಟಕ್ಕೆ ಕಾಣಿಸಿದೆ. ಆದರೆ ಒಕ್ಕೂಟದ ಒಳಗೆ ಹಲವು ಗುದ್ದಾಟಗಳು ನಡೆಯುತ್ತಿದೆ. ಈ ಕುರಿತು ಜಮ್ಮ ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಮಹತ್ವದ ಮಾಹಿತಿ ನೀಡಿದ್ದಾರೆ. ಇಂಡಿ ಒಕ್ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ.

ನವೆದೆಹಲಿ(ಅ.31) ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ರಚಿಸಿರುವ ಇಂಡಿ ಒಕ್ಕೂಟ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದೆ. ಸೀಟು ಹಂಚಿಕೆ, ಚುನಾವಣಾ ರಣತಂತ್ರ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದೆ. ಪ್ರತಿ ಸಭೆಯಲ್ಲಿ ಒಂದಲ್ಲಾ ಒಂದು ವಿಚಾರದಲ್ಲಿ ಒಂದೊಂದು ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದೆ. ಇತ್ತೀಚೆಗೆ ಕಾಂಗ್ರೆಸ್ ವಿರುದ್ದ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಆಕ್ರೋಶ ಹೊರಹಾಕಿದ್ದರು. ಇಷ್ಟೇ ಅಲ್ಲ ಇಂಡಿ ಒಕ್ಕೂಟದಲ್ಲಿ ಬಿರುಕು ಮೂಡಿರುವ ಕುರಿತು ಸುಳಿವು ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಮಹತ್ವದ ಸುಳಿವು ನೀಡಿದ್ದಾರೆ. ಇಂಡಿ ಒಕ್ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಹಾಗೂ ಸಮಾಜವಾದಿ ಪಾರ್ಟಿ ಚುನಾವಣೆ ಸೀಟು ಹಂಚಿಕೆ ವಿಚಾರದಲ್ಲಿ ಕಿತ್ತಾಡಿಕೊಂಡಿದೆ. ಎರಡೂ ಪಕ್ಷಗಳು ಎಲ್ಲಾ ಸ್ಥಾನದಲ್ಲಿ ಸ್ಪರ್ಧಿಸಲು ಮುಂದಾಗಿದೆ. ಒಕ್ಕೂಟ ರಚಿಸಿದ ಬಳಿಕ ಮಾತುಕತೆ ಮೂಲಕ ಸ್ಥಾನ ಹಂಚಿಕೆಯಾಗಬೇಕು. ಆದರೆ ಈ ಬೆಳವಣಿಗೆ ಇಂಡಿ ಒಕ್ಕೂಟಕ್ಕೆ ಒಳ್ಳೆಯದಲ್ಲ. ಉದ್ದೇಶ ಈಡೇರಿಕೆಗಿಂತ ಆಕ್ರೋಶ, ಕೋಪ ಶಮನ ಮಾಡುವ ಕಾರ್ಯಗಳಿಂದಲೇ ಚುನಾವಣೆ ಕಳೆದುಹೋಗಲಿದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯರನ್ನು ಡೋಂಗಿ ಸಮಾಜವಾದಿ, ಫುಲ್‌ಟೈಂ ಮೀರ್‌ಸಾದಿಕ್‌, ಹೆಗ್ಗಣಕ್ಕೆ ಹೋಲಿಸಿದ ಎಚ್‌ಡಿಕೆ!

ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಎಸ್ಪಿ ಹಾಗೂ ಕಾಂಗ್ರೆಸ್‌ ನಡುವೆ ಸೀಟು ಹಂಚಿಕೆ ಸಂಘರ್ಷ ನಡೆದಿತ್ತು. ಇಂಡಿಯಾ ಕೂಟದ ಸದಸ್ಯ ಪಕ್ಷ ಆಗಿದ್ದಕ್ಕೆ ಎಸ್‌ಪಿ, ಮಧ್ಯಪ್ರದೇಶದಲ್ಲಿ 6 ಸೀಟಿಗೆ ಬೇಡಿಕೆ ಇಟ್ಟಿತ್ತು. ಆದರೆ ಕಾಂಗ್ರೆಸ್‌ ಕಾಂಗ್ರೆಸ್‌ ಒಂದೂ ಸೀಟು ನೀಡಿರಲಿಲ್ಲ. ಇದರಿಂದ ಕೆಂಡಾಮಂಡಲವಾಗಿದ್ದ ಅಖಿಲೇಶ್‌, ‘ಇಂಡಿಯಾ ಕೂಟ ದೇಶವ್ಯಾಪಿ ಮೈತ್ರಿಕೂಟವಾಗಿದೆ ಎಂದು ಭಾವಿಸಿ ಸೀಟು ಕೇಳಿದ್ದೆವು. ಆದರೆ ಮಧ್ಯಪ್ರದೇಶದಲ್ಲಿ ನಮಗೆ ಸೀಟು ನಿರಾಕರಿಸಿ ಕಾಂಗ್ರೆಸ್ ತನ್ನ ಅನುಕೂಲಕ್ಕೆ ತಕ್ಕಂತೆ ನಡೆಯುತ್ತಿದೆ’ ಎಂದಿದ್ದರು. 

ವಿಧಾನಸಭಾ ಚುನಾವಣೆ ಬಳಿಕ ಇಂಡಿ ಒಕ್ಕೂಟ ಮತ್ತೆ ಸಭೆ ಸೇರಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವು ಸಾಧ್ಯತೆ ಇದೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಇದೇ ಒಮರ್ ಅಬ್ದುಲ್ಲಾ ಇಂಡಿ ಒಕ್ಕೂಟದಿಂದ ಒಂದು ಕಾಲುಹೊರಗಿಟ್ಟಿದ್ದರು. ಕಾಶ್ಮೀ​ರಕ್ಕೆ ವಿಶೇಷ ಸ್ಥಾನಮಾನ ನೀಡು​ವ 370ನೇ ವಿಧಿ ರದ್ದಾದಾಗ ಎಲ್ಲಾ ವಿಪಕ್ಷಗಳು ಸುಮ್ಮನಿದ್ದವು. ಹೀಗಾಗಿ ಇಂಡಿ ಒಕ್ಕೂಟದಿಂದ ದೂರ ಸರಿಯುವ ಸುಳಿವು ನೀಡಿದ್ದರು.  ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಿತ್ತೆಸೆದಾಗ ಯಾರೂ ಕೂಡ ನಮ್ಮ ಜೊತೆ ನಿಲ್ಲಲಿಲ್ಲ. ಆಗ ಈ ಪಕ್ಷಗಳು ಎಲ್ಲಿದ್ದವು ಎಂದು ಒಮರ್ ಪ್ರಶ್ನಿಸಿದ್ದರು.

News Hour: ಇಂಡಿ ಒಕ್ಕೂಟವನ್ನು ಹಿಂಡಿ ಹಿಪ್ಪೆ ಮಾಡ್ತಾರಾ ಅಖಿಲೇಶ್‌ ಯಾದವ್‌?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ