
ನವದೆಹಲಿ(ಜು.04): ಯಾವುದೇ ಧರ್ಮವಾದರೂ ಎಲ್ಲಾ ಭಾರತೀಯರ ಡಿಎನ್ಎ ಒಂದೇ. ಇಲ್ಲಿ ನಾವು ಹಿಂದು ಅಥವಾ ಮುಸ್ಲಿಂ ಎಂದು ಪ್ರಾಬಲ್ಯ ಸಾಧಿಸಲು ಸಾಧ್ಯವಿಲ್ಲ. ನಾವು ಭಾರತೀಯರು ಅನ್ನೋ ಪ್ರಾಬಲ್ಯ ಇರಲಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಉಪರಾಷ್ಟ್ರಪತಿ ಬಳಿಕ RSS ಮುಖ್ಯಸ್ಥರ ಬ್ಲೂ ಬ್ಯಾಡ್ಜ್ ರದ್ದು ಮಾಡಿ ಪೇಚಿಗೆ ಸಿಲುಕಿದ ಟ್ವಿಟರ್!
ಆರ್‌ಎಸ್‌ಎಸ್‌ನ ಮುಸ್ಲಿಂ ರಾಷ್ಟ್ರೀಯ ಮಂಚ್ ವಿಭಾಗ ಆಯೋಜಿಸಿದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಹತ್ವದ ಸಂದೇಶ ನೀಡಿದ್ದಾರೆ. 40,000 ವರ್ಷಗಳ ಹಿಂದಿನ ಪೂರ್ವಜರ ವಂಶವೇ ನಮ್ಮದು. ಇದು ಭಾರತೀಯರ DNA ಪರೀಕ್ಷೆಯಲ್ಲಿ ಸಾಬೀತಾಗಿದೆ. ಧರ್ಮ ಯಾವುದೇ ಆದರೂ ನಮ್ಮ DNA ಒಂದೇ ಆಗಿದೆ ಎಂದಿದ್ದಾರೆ.
ಮುಸ್ಲಿಂ ಮಂಚ್ ಕಾರ್ಯಕ್ರಮದಲ್ಲಿ ಭಾಗವತ್ ರಾಜಕೀಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯಕ್ಕೆ ಕೆಲ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಇದರಲ್ಲಿ ಪ್ರಮುಖವಾಗಿ, ರಾಜಕೀಯಕ್ಕೆ ಜನರನ್ನು ಒಗ್ಗೂಡಿಸಲು ಸಾಧ್ಯವಿಲ್ಲ. ಆದರೆ ರಾಜಕೀಯ ಏಕತೆಯನ್ನು ವಿರೂಪಗೊಳಿಸುವ ಅಸ್ತ್ರವಾಗಬಹುದು ಎಂದಿದ್ದಾರೆ.
ಸರ್ಕಾರ-ಜನರ ನಿರ್ಲಕ್ಷವೇ ಕೊರೋನಾ 2ನೇ ಅಲೆಗೆ ಕಾರಣ; RSS ಮುಖ್ಯಸ್ಥ ಭಾಗವತ್!
ಹಿಂಸಾಚಾರದಲ್ಲಿ ತೊಡಗುವವರು ಹಿಂದುತ್ವಕ್ಕೆ ವಿರುದ್ಧವಾಗಿದ್ದಾರೆ. ದೇಶದಲ್ಲಿ ಏಕತೆ ಅತೀ ಅಗತ್ಯ. ಏಕತೆ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಏಕತೆಗೆ ಮಾತುಕತೆ, ನಂಬಿಕೆ ಅಗತ್ಯ. ಆದರೆ ಭಾರತದಲ್ಲಿ ಇಸ್ಲಾಂ ಧರ್ಮ ಅಪಾಯದಲ್ಲಿದೆ ಎಂಬ ಊಹೆಗಳಲ್ಲಿ ಸಿಲುಕಬೇಡಿ ಎಂದು ಮೋಹನ್ ಭಾಗವತ್ ಹೇಳಿದರು.
ಮುಸ್ಲಿಮ್ ಕಾರ್ಯಕ್ರಮದಲ್ಲಿ RSSಗೆ ಇಮೇಜ್ ಮೇಕ್ ಓವರ್ ಮಾಡುವ ಅಗತ್ಯವಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಇಮೇಜ್ ಮೇಕ್ ಓವರ್ ಅಥವಾ ಮತಗಳ ಅಗತ್ಯವಿಲ್ಲ. ಸಂಘವು ರಾಷ್ಟ್ರವನ್ನು ಬಲಪಡಿಸಲು ಮತ್ತು ಸಮಾಜದ ಎಲ್ಲರ ಕಲ್ಯಾಣಕ್ಕಾಗಿ ತನ್ನ ಕೆಲಸವನ್ನು ಮಾಡುತ್ತಲೇ ಇದೆ ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ